ಮೆಲ್ಬೋರ್ನ್: ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಮಳೆರಾಯನ ಮೇಲಾಟ ಮುಂದುವರೆದಿದ್ದು, ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಇಂಗ್ಲೆಂಡ್ vs ಆಸ್ಚ್ರೇಲಿಯಾ ನಡುವಿನ ಹೈವೋಲ್ಟೇಜ್ ಪಂದ್ಯ ರದ್ದಾಗಿದೆ.
ಆ ಮೂಲಕ ಇಂದಿನ 2 ಪಂದ್ಯಗಳು ಮಳೆ ಕಾರಣದಿಂದಾಗಿ ರದ್ದಾಗಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ನಿರಾಶೆ ಮೂಡಿಸಿದೆ. ಸೆಮೀಸ್ ಹಂತಕ್ಕೆ ಕಾಲಿಡಲು ಆಸ್ಚ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳಿಗೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿತ್ತು.
3 ಪಂದ್ಯಗಳ ಪೈಕಿ 1ರಲ್ಲಿ ಗೆದ್ದು 1ರಲ್ಲಿ ಸೋತಿರುವ ಆಸ್ಚ್ರೇಲಿಯಾ3 ಅಂಕಗಳನ್ನು ಹೊಂದಿದ್ದು ಇಂದಿನ ಪಂದ್ಯ ಗೆದ್ದು 4 ಅಂಕಗಳೊಂದಿಗೆ ಸೆಮೀಸ್ ನಲ್ಲಿ ಸ್ಥಾನ ಭದ್ರ ಮಾಡಿಕೊಳ್ಳಲು ಹವಣಿಸುತ್ತಿತ್ತು.
ಅಂತೆಯೇ ಇಂಗ್ಲೆಂಡ್ ಕೂಡ ತಾನಾಡಿರುವ 3 ಪಂದ್ಯಗಳ ಪೈಕಿ 2 ಸೋತಿದ್ದು, 1 ಪಂದ್ಯದಲ್ಲಿ ಗೆದ್ದಿದೆ. ಇಂದಿನ ಪಂದ್ಯಗೆದ್ದು ಸೆಮೀಸ್ ಹಾದಿಗೆ ಮರಳಲು ಪ್ರಯತ್ನಿಸಿತ್ತು. ಆದರೆ ಮಳೆರಾಯ ಇಂಗ್ಲೆಂಡ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ್ದಾನೆ. ಪ್ರಸ್ತುತ ಗ್ರೂಪ್ 1 ಪಟ್ಟಿಯಲ್ಲಿ ಆಸ್ಚ್ರೇಲಿಯಾ 3 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದು, 2 ಅಂಕಗಳನ್ನು ಹೊಂದಿರುವ ಇಂಗ್ಲೆಂಡ್ 5ನೇ ಸ್ಥಾನದಲ್ಲಿದೆ.
Advertisement