ಟಿ20 ವಿಶ್ವಕಪ್: ನೆದರ್ ಲ್ಯಾಂಡ್ ವಿರುದ್ಧ ಗೆಲುವು; ಪಾಕಿಸ್ತಾನದ ಸೆಮಿಫೈನಲ್ ಆಸೆ ಇನ್ನೂ ಜೀವಂತ

ಬ್ಯಾಟಿಂಗ್ ನ ವೈಫಲ್ಯದ ಹೊರತಾಗಿಯೂ ಪಾಕಿಸ್ತಾನ ತಂಡ ನೆದರ್ಲ್ಯಾಂಡ್ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಗೆಲುವು ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯವಾಗಿದ್ದು ತಂಡದ ಸೆಮಿಫೈನಲ್ಸ್ ಆಸೆ ಜೀವಂತವಾಗಿದೆ. 
ಪಾಕಿಸ್ತಾನ-ನೆದರ್ಲ್ಯಾಂಡ್
ಪಾಕಿಸ್ತಾನ-ನೆದರ್ಲ್ಯಾಂಡ್

ಪರ್ತ್: ಬ್ಯಾಟಿಂಗ್ ನ ವೈಫಲ್ಯದ ಹೊರತಾಗಿಯೂ ಪಾಕಿಸ್ತಾನ ತಂಡ ನೆದರ್ಲ್ಯಾಂಡ್ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಗೆಲುವು ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯವಾಗಿದ್ದು ತಂಡದ ಸೆಮಿಫೈನಲ್ಸ್ ಆಸೆ ಜೀವಂತವಾಗಿದೆ. 

ಪರ್ತ್ ನಲ್ಲಿ ಅ.30 ರಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೆದರ್ಲ್ಯಾಂಡ್ ವಿರುದ್ಧ 6 ವಿಕೆಟ್ ಗಳ ಜಯ ಗಳಿಸಿದ್ದು, ಪಾಕ್ ತಂಡದ ಬೌಲಿಂಗ್ ಗೆ ನೆದರ್ಲ್ಯಾಂಡ್ ಬ್ಯಾಟ್ಸ್ ಮನ್ ಗಳು ನಲುಗಿದರು. 

ಬ್ಯಾಟಿಂಗ್ ಆಯ್ದುಕೊಂಡ ನೆದರ್ಲ್ಯಾಂಡ್ ತಂಡ, ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿತು. ಪಂದ್ಯದಲ್ಲಿ ನೆದರ್ಲ್ಯಾಂಡ್ ತಂಡದ ಆಟಗಾರ ಬಾಸ್ ಡಿ ಲೀಡೆ (6) ಗಾಯಗೊಂಡು ಪೆವಿಲಿಯನ್ ಗೆ ಮರಳಿದರು. 

92 ರನ್ ಗಳ ಟಾರ್ಗೆಟ್ ಪಾಕಿಸ್ತಾನಕ್ಕೆ ದೊಡ್ಡ ವಿಷಯವೇನೂ ಆಗಿರಲಿಲ್ಲ. ಆದರೂ ನೆದರ್ಲ್ಯಾಂಡ್ ಬೌಲರ್ ಗಳೆದುರು ಪಾಕಿಸ್ತಾನದ ಬ್ಯಾಟ್ಸ್ಮನ್ ಗಳು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು ಪರಿಣಾಮ ಪಾಕ್ ನಂತಹ ತಂಡಕ್ಕೆ ಅತ್ಯಂತ ಸರಳವಾಗಿದ್ದ ರನ್ ಟಾರ್ಗೆಟ್ ನ್ನು ತಲುಪುವುದಕ್ಕೆ 13.5 ಓವರ್ ಗಳು ಬೇಕಾಯಿತು. 

ಐಸಿಸಿಯ ನಂ.1 ಶ್ರೇಣಿಯ ಟಿ20 ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ 39 ಎಸೆತಗಳಲ್ಲಿ 49 ರನ್ ಗಳಿಸಿದರು. 125.64 ರೊಂದಿಗೆ ಅವರ ಸ್ಟ್ರೈಕ್ ರೇಟ್ ಸಹ ಅಷ್ಟೇನೂ ಆಸಕ್ತಿದಾಯಕವಾಗಿರಲಿಲ್ಲ. ಈ ನಡುವೆ ಬಾಂಗ್ಲಾದೇಶ ಜಿಂಬಾಬ್ವೆ ವಿರುದ್ಧ ಗೆದ್ದಿರುವುದು, ಪಾಕಿಸ್ತಾನ ಟೂರ್ನಮೆಂಟ್ ನಲ್ಲಿ ಉಳಿಯುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com