• Tag results for ಟಿ20

ಏಷ್ಯಾಕಪ್ ಟೂರ್ನಿಗೆ ಭಾರತ ಬರದಿದ್ದರೆ, 2021ರ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಪಾಲ್ಗೊಳ್ಳುವುದಿಲ್ಲ: ಪಿಸಿಬಿ ಎಚ್ಚರಿಕೆ

ಏಷ್ಯಾಕಪ್ ಟೂರ್ನಿಗೆ ಭಾರತ ಪಾಕಿಸ್ತಾನಕ್ಕೆ ಬರದಿದ್ದರೇ, 2021ರ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಎಚ್ಚರಿಕೆ ನೀಡಿದೆ.

published on : 25th January 2020

ಟಿ20 ವಿಶ್ವಕಪ್: 4ನೇ ಕ್ರಮಾಂಕಕ್ಕೆ ನಾನು ಸ್ಪರ್ಧಿ, ಐಪಿಎಲ್ ಪ್ರದರ್ಶನ ನನ್ನ ತಾಕತ್ತನ್ನು ನಿರ್ಣಯಿಸಲಿದೆ: ರೈನಾ

ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ದೂರ ಉಳಿದಿರುವ ಸುರೇಶ್ ರೈನಾ ಸದ್ಯ ಐಪಿಎಲ್ ಗಾಗಿ ಅಭ್ಯಾಸದಲ್ಲಿ ನಿರತರಾಗಿದ್ದು ನಾನು ಸಹ ಭಾರತದ ತಂಡದ 4 ಕ್ರಮಾಂಕದ ಮೇಲೆ ಕಣ್ಣೀಟ್ಟಿದ್ದೇನೆ. ಐಪಿಎಲ್ ನಲ್ಲಿನ ನನ್ನ ಪ್ರದರ್ಶನ...

published on : 25th January 2020

ಟಿ20 ವಿಶ್ವಕಪ್ ನನ್ನ ಕನಸು, ಏಕದಿನ ಸರಣಿಗಳು ತಂಡಕ್ಕೆ ಉಪಯುಕ್ತ: ರವಿಶಾಸ್ತ್ರಿ

2020ರ ಅಕ್ಟೋಬರ್ ನಲ್ಲಿ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ನಡೆಯಲಿದ್ದು ಕಪ್ ಗೆಲ್ಲುವುದು ನನ್ನ ಕನಸಾಗಿದೆ. ಇನ್ನು ಪ್ರಸ್ತುತ ನಡೆಯುತ್ತಿರುವ ಏಕದಿನ ಸರಣಿಗಳು ತಂಡಕ್ಕೆ ಉಪಯುಕ್ತವಾಗಲಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. 

published on : 22nd January 2020

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಗೆ ಭಾರತದ ತಂಡ ಪ್ರಕಟ

ಫೆಬ್ರವರಿ 21 ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ 20 ವಿಶ್ವಕಪ್‌ಗಾಗಿ 15 ಸದಸ್ಯರ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಪ್ರಕಟಿಸಲಾಗಿದೆ. ಬಂಗಾಳಿ ಆಟಗಾರ್ತಿ  ರಿಚಾ ಘೋಷ್ ತಂಡಕ್ಕೆ ಸೇರ್ಪಡೆಗೊಂಡ ಏಕೈಕ ಹೊಸ ಪ್ರತಿಭೆ ಎನಿಸಿದ್ದಾರೆ.

published on : 12th January 2020

ವರ್ಷವನ್ನು ಗೆಲುವಿನೊಂದಿಗೆ ಆರಂಭಿಸಿದ್ದು ಸಂತಸ ತಂದಿದೆ: ವಿರಾಟ್ ಕೊಹ್ಲಿ

ಶ್ರೀಲಂಕಾ ವಿರುದ್ಧ ಟಿ-20 ಸರಣಿಯನ್ನು ಗೆದ್ದು, ಹೊಸ ವರ್ಷವನ್ನು ಆರಂಭಿಸಿದ್ದು ಸಂತಸ ತಂದಿದೆ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.  

published on : 11th January 2020

ಲಂಕಾ ವಿರುದ್ಧ ಭಾರತಕ್ಕೆ 78 ರನ್ ಗಳ ಭರ್ಜರಿ ಗೆಲುವು, ಟೀಂ ಇಂಡಿಯಾ ಮುಡಿಗೆ ಟಿ20 ಸರಣಿ

ಆರಂಭಿಕ ಆಟಗಾರ ಕೆಎಲ್ ರಾಹುಲ್ (54) ಹಾಗೂ ಶಿಖರ್ ಧವನ್ (52) ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ, ಶ್ರೀಲಂಕಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ 78ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ

published on : 10th January 2020

3ನೇ ಟಿ-20: ಶ್ರೀಲಂಕಾ ತಂಡಕ್ಕೆ 202 ರನ್ ಗುರಿ ನೀಡಿದ ಭಾರತ

ಆರಂಭಿಕ ಆಟಗಾರ ಕೆಎಲ್ ರಾಹುಲ್ (54), ಶಿಖರ್ ಧವನ್ (52) ಅವರ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ, ಶ್ರೀಲಂಕಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಸವಾಲಿನ ಮೊತ್ತವನ್ನು ಪ್ರವಾಸಿ ತಂಡಕ್ಕೆ ನೀಡಿದೆ.

published on : 10th January 2020

3ನೇ ಟಿ20 ಪಂದ್ಯ: ಭಾರತ-ಶ್ರೀಲಂಕಾಕ್ಕಿಂದು ನಿರ್ಣಾಯಕ ಕದನ

ಐಸಿಸಿ ಟಿ20 ವಿಶ್ವಕಪ್'ಗೆ ತಯಾರಿಯನ್ನು ಮತ್ತಷ್ಟು ತೀವ್ರಗೊಳಿಸಿರುವ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಶುಕ್ರವಾರ ಪುಣೆ ಮಹಾರಾಷ್ಟ್ರದ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಆಡಲಿದೆ. 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಹೊಂದಿದ್ದು, ನಾಯಕ ವಿರಾಟ್ ಕೊಹ್ಲಿ ಸರಣಿ ಗೆಲ್ಲುವುದರ ಜೊತೆಗೆ ಬೆಂಚ್ ಕಾಯುತ್ತಿರುವ...

published on : 10th January 2020

ಮೂರನೇ ಪಂದ್ಯ ನಾಳೆ: ವರ್ಷದ ಮೊದಲ ಟಿ20 ಸರಣಿ ಗೆಲ್ಲುವತ್ತ ಟೀಂ ಇಂಡಿಯಾ ಚಿತ್ತ

ಎರಡನೇ ಪಂದ್ಯದ ಗೆಲುವಿನ ಹಮ್ಮಸ್ಸಿನಲ್ಲಿರುವ ಭಾರತ ತಂಡ ನಾಳೆ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಹಣಾಹಣಿಯಲ್ಲಿ ಶ್ರೀಲಂಕಾ ವಿರುದ್ಧ ಜಯಿಸಿ ವರ್ಷದ ಮೊದಲ ಟಿ20 ಸರಣಿ ವಶಪಡಿಸಿಕೊಳ್ಳವ ತುಡಿತದಲ್ಲಿದೆ.

published on : 9th January 2020

ಎರಡನೇ ಟಿ20: ಠಾಕೂರ್ ಮಾರಕ ಬೌಲಿಂಗ್, ಲಂಕಾವನ್ನು 142 ರನ್‍ಗಳಿಗೆ ಕಟ್ಟಿ ಹಾಕಿದ ಭಾರತ!

ಪ್ರವಾಸಿ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿತ್ತು. ಇದೀಗ ಇಂದೋರ್ ನಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಲಂಕಾ ತಂಡ 142 ರನ್ ಪೇರಿಸಿದೆ.

published on : 7th January 2020

ಟೀಂ ಇಂಡಿಯಾದ ಗೆಲುವಿನಲ್ಲಿ ಮಿಂಚುವುದೇ ಗುರಿ: ಶಿಖರ್ ಧವನ್

ಗಾಯದಿಂದ ಚೇತರಿಸಿಕೊಂಡು, ಅವಕಾಶವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿರುವುದಾಗಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್ ತಿಳಿಸಿದ್ದಾರೆ.

published on : 7th January 2020

ನಾಚಿಕೆಯಾಗಬೇಕು: ಪಿಚ್‌ ಒಣಗಿಸಲು ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ ಬಳಸಿದ್ದಕ್ಕೆ ಬಿಸಿಸಿಐಗೆ ನೆಟಿಗರ ವ್ಯಂಗ್ಯ!

ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಬೇಗನೆ ಮಳೆ ನಿಂತರೂ ಪಂದ್ಯ ಶುರುವಾಗಲಿಲ್ಲ. ಹೊದಿಕೆ ಹಾಸಿದ್ದರೂ ಪಿಚ್ ನಲ್ಲಿ ನಿಂತಿದ್ದರಿಂದ ಸಿಬ್ಬಂದಿ ಹೇರ್ ಡ್ರೈಯರ್ ಮತ್ತು ಇಸ್ತ್ರಿ ಪೆಟ್ಟಿಗೆ ಬಳಸಿದ್ದು ಕಟು ಟೀಕೆಗೆ ಗುರಿಯಾಗಿದೆ.

published on : 6th January 2020

ನಾಳಿನ ಎರಡನೇ ಟಿ20 ಕದನದ ಮೇಲೆ ಭಾರತ-ಲಂಕಾ ಕಣ್ಣು

ಗುವಾಹಟಿ ಬಸ್ರಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲನೇ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಬೇಸರಕ್ಕೆ ಒಳಗಾಗಿರುವ ಭಾರತ ಹಾಗೂ ಶ್ರೀಲಂಕಾ ತಂಡಗಳು ನಾಳೆ ಇಲ್ಲಿನ ಹೋಲ್ಕರ್ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯವಾಡಲು ಸಜ್ಜಾಗಿವೆ.

published on : 6th January 2020

ಭಾರತ-ಶ್ರೀಲಂಕಾ ಟಿ-20: ಹೊಸ ವರ್ಷದ ಮೊದಲ ಪಂದ್ಯ ಮಳೆಯಿಂದ ರದ್ದು

ಹೊಸ ವರ್ಷದ ಮೊದಲ ಸರಣಿ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟಿ 20 ಪಂದ್ಯವು ಭಾನುವಾರ ಮಳೆಯಿಂದಾಗಿ, ಒಂದು ಬೌಲ್ ಮಾಡದೆ ರದ್ದುಪಡಿಸಲಾಗಿದೆ ಎಂದು ಘೋಷಿಸಲಾಯಿತು.

published on : 5th January 2020

ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ, ವರ್ಷದ ಮೊದಲ ಟಿ20ಗೆ ಮಳೆ ಕಾಟ

ಪ್ರಸಕ್ತ ವರ್ಷದ ಮೊದಲ ಸರಣಿಯಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ, ಪ್ರವಾಸಿ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿದೆ.

published on : 5th January 2020
1 2 3 4 5 6 >