ಢಾಕ: ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ 168 ರನ್ ಗಳ ರೋಚಕ ಜಯ ಗಳಿಸಿದೆ.
ಅಹ್ಮದಾಬಾದ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಶುಭ್ಮನ್ ಗಿಲ್ ಸ್ಫೋಟಕ ಶತಕದ ಪರಿಣಾಮ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ನ್ಯೂಜಿಲ್ಯಾಂಡ್ ತಂಡಕ್ಕೆ 235 ರನ್ ಗಳ ಗುರಿ ನೀಡಿತ್ತು.
ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡಕ್ಕೆ ಭಾರತದ ಬೌಲರ್ ಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ. ವೇಗಿ, ಹಾರ್ದಿಕ್ ಪಾಂಡ್ಯ ಮಾರಕ ಬೌಲಿಂಗ್ ಗೆ ತತ್ತರಿಸಿದ ನ್ಯೂಜಿಲ್ಯಾಂಡ್ ತಂಡ, 12.1 ಓವರ್ ಗಳಿಗೆ 66 ರನ್ ಗಳನ್ನು ಗಳಿಸುವಲ್ಲಿ ಸರ್ವಪತನ ಕಂಡು ಭಾರತದೆದುರು ಶರಣಾಯಿತು.
ನ್ಯೂಜಿಲ್ಯಾಂಡ್ ತಂಡದ ಆರಂಭಿಕ ಆಟಗಾರರಾದ ಫಿನ್ ಅಲೆನ್, ಡೆವೊನ್ ಕಾನ್ವೇ ಅತ್ಯಂತ ವೇಗಾಗಿ ವಿಕೆಟ್ ಒಪ್ಪಿಸಿದ ಪರಿಣಾಮ ತಂಡ ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದ ಡೇರಿಲ್ ಮಿಚೆಲ್ ( 25 ಎಸೆತಗಳಲ್ಲಿ 35 ರನ್) ಗಳಿಸಿದರು. ಉಳಿದಂತೆ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಎರಡು ಅಂಕಿ ರನ್ ಗಳಿಸಲೂ ಸಾಧ್ಯವಾಗಲಿಲ್ಲ. ಪರಿಣಾಮ 12.1 ಓವರ್ ಗಳಲ್ಲಿ 66 ರನ್ ಗಳಿಸಿ ನ್ಯೂಜಿಲ್ಯಾಂಡ್ ತಂಡ ಸೋಲೊಪ್ಪಿಕೊಂಡಿತು.
ಭಾರತದ ಪರ ಹಾರ್ದಿಕ್ ಪಾಂಡ್ಯ 16 ರನ್ ಗಳಿಸಿ 4 ವಿಕೆಟ್ ಗಳಿಸಿದರೆ, ಆರ್ಶ್ ದೀಪ್ ಸಿಂಗ್ 16 ರನ್ ಗಳಿಸಿ 2 ವಿಕೆಟ್, ಗಳಿಸಿದರೆ ಶಿವಮ್ ಮಾವಿ 12 ರನ್ ನೀಡಿ 2 ವಿಕೆಟ್ ಗಳಿಸಿದರು.
Advertisement