3ನೇ ಟಿ20: ಶುಭ್ಮನ್ ಗಿಲ್ ಸ್ಫೋಟಕ ಶತಕ, ನ್ಯೂಜಿಲ್ಯಾಂಡ್ ಗೆಲ್ಲಲು 235 ರನ್ ಗುರಿ
ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ ಗಳು ಅಬ್ಬರಿಸಿದ್ದು ನ್ಯೂಜಿಲ್ಯಾಂಡ್ ಗೆ ಗೆಲ್ಲಲು 235 ರನ್ ಗಳ ಗುರಿ ನೀಡಿದೆ.
Published: 01st February 2023 08:53 PM | Last Updated: 01st February 2023 08:53 PM | A+A A-

ಶುಭ್ಮನ್ ಗಿಲ್
ಅಹಮದಾಬಾದ್: ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ ಗಳು ಅಬ್ಬರಿಸಿದ್ದು ನ್ಯೂಜಿಲ್ಯಾಂಡ್ ಗೆ ಗೆಲ್ಲಲು 235 ರನ್ ಗಳ ಗುರಿ ನೀಡಿದೆ.
ಅಹಮದಾಬಾದ್ ನಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 234 ರನ್ ಪೇರಿಸಿದೆ.
ಇದನ್ನೂ ಓದಿ: ICC T20 Ranking: ಅಗ್ರಸ್ಥಾನದಲ್ಲಿ ಸೂರ್ಯ ಕುಮಾರ್ ಯಾದವ್ ಮುಂದುವರಿಕೆ, ರೇಟಿಂಗ್ ಹೆಚ್ಚಿಸಿಕೊಂಡ ಗಿಲ್
ಟೀಂ ಇಂಡಿಯಾ ಪರ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅಬ್ಬರದ ಬ್ಯಾಟಿಂಗ್ ಮಾಡಿದ್ದು 63 ಎಸೆತಗಳಲ್ಲಿ 7 ಸಿಕ್ಸರ್, 12 ಬೌಂಡರಿ ಸೇರಿದಂತೆ ಅಜೇಯ 126 ರನ್ ಪೇರಿಸಿದ್ದಾರೆ. ಇನ್ನುಳಿದಂತೆ ಇಶಾನ್ ಕಿಶನ್ 1, ರಾಹುಲ್ ತ್ರಿಪಾಠಿ 44, ಸೂರ್ಯಕುಮಾರ್ ಯಾದವ್ 24 ಹಾಗೂ ಹಾರ್ತಿಕ್ ಪಾಂಡ್ಯ 30 ರನ್ ಪೇರಿಸಿದ್ದಾರೆ.
ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಮೈಕೆಲ್ ಬ್ರೇಸ್ವೆಲ್, ಬ್ಲೈರ್ ಟಿಕ್ನೆರ್, ಸೋಧಿ ಮತ್ತು ಮಿಚೆಲ್ ತಲಾ 1 ವಿಕೆಟ್ ಪಡೆದಿದ್ದಾರೆ.