ICC T20 Ranking: ಅಗ್ರಸ್ಥಾನದಲ್ಲಿ ಸೂರ್ಯ ಕುಮಾರ್ ಯಾದವ್ ಮುಂದುವರಿಕೆ, ರೇಟಿಂಗ್ ಹೆಚ್ಚಿಸಿಕೊಂಡ ಗಿಲ್
ಬುಧವಾರ ಬಿಡುಗಡೆಯಾದ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭಾರತದ ಬ್ಯಾಟಿಂಗ್ ಆಟಗಾರ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
Published: 01st February 2023 05:20 PM | Last Updated: 01st February 2023 06:38 PM | A+A A-

ಸೂರ್ಯ ಕುಮಾರ್ ಯಾದವ್
ದುಬೈ: ಬುಧವಾರ ಬಿಡುಗಡೆಯಾದ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭಾರತದ ಬ್ಯಾಟಿಂಗ್ ಆಟಗಾರ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ರಾಂಚಿಯಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ vs ಭಾರತ ಟಿ20ಸರಣಿಯ ಮೊದಲ ಪಂದ್ಯದಲ್ಲಿ 47 ರನ್ ಗಳಿಸಿದ ನಂತರ ಸೂರ್ಯಕುಮಾರ್ ತಮ್ಮ ಅಂಕಗಳಿಕೆಯನ್ನು 908ಕ್ಕೆ ಏರಿಸಿಕೊಂಡು ತಮ್ಮ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇತರ ಯಾವುದೇ ಭಾರತೀಯ ಬ್ಯಾಟರ್ ಅಥವಾ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ 10 ರಲ್ಲಿ ಕಾಣಿಸಿಕೊಂಡಿಲ್ಲ ಮತ್ತು ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್‌ಗಳಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ: ಬೆಂಗಳೂರಿನ ಅಲೂರಿನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತರಬೇತಿ
ಸರಣಿಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಔಟಾಗದೆ 26 ರನ್ ಗಳಿಸಿ 32 ವರ್ಷ ವಯಸ್ಸಿನ ಆಟಗಾರ ತಮ್ಮ ಈ ಹಿಂದಿದ್ದ ಒಟ್ಟು 910 ರೇಟಿಂಗ್ ನಿಂದ ಎರಡು ಅಂಕ ಕಳೆದುಕೊಂಡರು. ಅಂತೆಯೇ ಪುರುಷರ T20I ಬ್ಯಾಟರ್ ಗಳ ವಿಭಾಗದಲ್ಲಿ ಸಾರ್ವಕಾಲಿಕ ಅತ್ಯಧಿಕ ರೇಟಿಂಗ್ ಅನ್ನು ಹೊಂದುವ ಸ್ಪರ್ಧೆಯಲ್ಲಿ ಸೂರ್ಯಕುಮಾರ್ ಇಂಗ್ಲೆಂಡ್ ಬ್ಯಾಟರ್ ಡೇವಿಡ್ ಮಲಾನ್ ಅವರ ಗಮನಾರ್ಹ ಅಂತರದಲ್ಲಿ ಉಳಿದಿದ್ದಾರೆ.
ಈ ಹಿಂದೆ ಮಲನ್ ಅವರು 2020 ರಲ್ಲಿ ಕೇಪ್ ಟೌನ್‌ನಲ್ಲಿ 915 ಪಾಯಿಂಟ್‌ಗಳ ರೇಟಿಂಗ್ ಅನ್ನು ಸಾಧಿಸಿದ್ದರು. ಇದೀಗ ಸೂರ್ಯ ಕುಮಾರ್ ಯಾದವ್ 908 ಅಂಕದಲ್ಲಿದ್ದು, ಇಂದು ನಡೆಯುವ ಮೂರನೇ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರೆ ಈ ಸಾಧನೆಯನ್ನೂ ಹಿಂದಿಕ್ಕುವ ಸಾಧ್ಯತೆ ಇದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಟೀಂ ಇಂಡಿಯಾ ಆಟಗಾರ ಮುರಳಿ ವಿಜಯ್ ನಿವೃತ್ತಿ ಘೋಷಣೆ!
ಕಳೆದ ವರ್ಷದ T20 ವಿಶ್ವಕಪ್‌ನಲ್ಲಿ ಆರು ಪಂದ್ಯಗಳಿಂದ ಒಟ್ಟು 239 ರನ್ ಗಳಿಸುವ ಮೂಲಕ ಸೂರ್ಯ ಕುಮಾರ್ ಯಾದವ್ ಅಗ್ರ ಶ್ರೇಯಾಂಕ ಪಡೆದರು. ಅಂತೆಯೇ ಕಳೆದ ತಿಂಗಳಷ್ಟೇ ಅವರು ICC T20 ವರ್ಷದ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದರು.
ಉಳಿದಂತೆ ಭಾರತದ ಮೊಹಮ್ಮದ್ ಸಿರಾಜ್ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರ ಶ್ರೇಯಾಂಕದ ಬೌಲರ್ ಆಗಿ ಮುಂದುವರಿದಿದ್ದಾರೆ. ಶುಭಮನ್ ಗಿಲ್ (ಆರನೇ), ವಿರಾಟ್ ಕೊಹ್ಲಿ (ಏಳನೇ) ಮತ್ತು ರೋಹಿತ್ ಶರ್ಮಾ (ಒಂಬತ್ತನೇ) ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಿರವಾಗಿ ಉಳಿದಿದ್ದಾರೆ.