ಐರ್ಲೆಂಡ್: 2ನೇ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಭಾರತ ಐರ್ಲೆಂಡ್ ವಿರುದ್ಧ 33 ರನ್ ಗಳ ಜಯ ಗಳಿಸಿದ್ದು ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ.
ಮೂರು ಪಂದ್ಯಗಳ ಸರಣಿ ಇದಾಗಿದ್ದು ಭಾರತ ಸರಣಿಯಲ್ಲಿ ಪ್ರಾಬಲ್ಯ ಸಾಧಿಸಿದೆ. ಮೊದಲು ಬ್ಯಾಟಿಮ್ಗ್ ಮಾಡಿದ ಭಾರತ 5 ವಿಕೆಟ್ ಗಳ ನಷ್ಟಕ್ಕೆ 185 ರನ್ ಗಳನ್ನು ಗಳಿಸಿ ಗಳಿಸಿತು. ಉಪನಾಯಕ ರಿತುರಾಜ್ ಗಾಯಕ್ವಾಡ್ 42 ಎಸೆತಗಳಲ್ಲಿ 58 ರನ್ ಗಳಿಸಿದರೆ, ಸಂಜು ಸ್ಯಾಮ್ಸನ್ 26 ಎಸೆತಗಳಲ್ಲಿ 40 ರನ್ ಗಳಿಸಿದರು. ಹಾಗೂ ರಿಂಕು ಸಿಂಗ್ 21 ಎಸೆತಗಳಲ್ಲಿ 38 ರನ್ ಗಳಿಸಿದರು.
ಭಾರತದ ಸವಾಲನ್ನು ಬೆನ್ನಟ್ಟಿದ ಐರ್ಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಭಾರತದ ಬೌಲರ್ ಗಳಾದ ರವಿ ಬಿಷ್ಣೋಯ್ 37 ರನ್ ನೀಡಿ 2 ವಿಕೆಟ್ ಗಳಿಸಿದರೆ, ಪ್ರಸಿದ್ಧ್ ಕೃಷ್ಣ 29 ರನ್ ನೀಡಿ 2 ವಿಕೆಟ್ ಗಳಿಸಿದರು. ನಾಯಕ ಜಸ್ಪ್ರಿತ್ ಬೂಮ್ರಾ 15 ರನ್ ನೀಡಿ 2 ವಿಕೆಟ್ ಗಳಿಸಿದರು.
ಐರ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಡಕ್ವರ್ತ್ ನಿಯಮ ಮೂಲಕ ಭಾರತ 2 ರನ್ ಗಳಿಂದ ಗೆಲುವು ಸಾಧಿಸಿತ್ತು.
Advertisement