ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ, ಸರಣಿ ಸಮಬಲ 

ಭಾರತ-ನ್ಯೂಜಿಲ್ಯಾಂಡ್ ನಡುವಿನ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ರೋಚಕ ಜಯ ದಾಖಲಿಸಿ ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿದೆ. 
ಟೀಂ ಇಂಡಿಯಾ
ಟೀಂ ಇಂಡಿಯಾ
Updated on

ಲಖನೌ: ಭಾರತ-ನ್ಯೂಜಿಲ್ಯಾಂಡ್ ನಡುವಿನ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ರೋಚಕ ಜಯ ದಾಖಲಿಸಿ ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿದೆ. 

ಟಾಸ್‌ ಗೆದ್ದು ಮೊದಲ ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ 8 ವಿಕೆಟ್‌ ನಷ್ಟಕ್ಕೆ 99 ರನ್‌ ಗಳಿಸಿ ಅಲ್ಪ ಮೊತ್ತದ ಟಾರ್ಗೆಟ್ ನೀಡಿತ್ತು.  ಗುರಿ ಬೆನ್ನಟ್ಟಿದ ಭಾರತ ಇನ್ನೂ ಒಂದು ಎಸೆತ ಇರುವಂತೆಯೇ ನ್ಯೂಜಿಲೆಂಡ್‌ ವಿರುದ್ಧ ತಿಣುಕಾಡಿ ರೋಚಕ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಮೂರು T20 ಪಂದ್ಯಗಳ ಸರಣಿ ಭಾರತ 1-1 ಅಂತದಿಂದ ಸಮಬಲ ಸಾಧಿಸಿದೆ.   

ರೋಚಕ ಪಂದ್ಯದಲ್ಲಿ 18 ಎಸೆತಗಳಲ್ಲಿ ಭಾರತಕ್ಕೆ 18 ರನ್ ಗಳ ಅಗತ್ಯವಿತ್ತು. 18ನೇ ಓವರ್‌ನಲ್ಲಿ ಭಾರತ 5 ರನ್‌ ಗಳಿಸಿದರೆ, ಕೊನೆಯ ಓವರ್‌ನಲ್ಲಿ 6 ರನ್‌ ಅಗತ್ಯವಿತ್ತು.

ಕೊನೆಯ ಓವರ್ ನ ಮೂರನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಕ್ಯಾಚ್ ಇತ್ತು ಔಟ್ ಆಗುವ ಸಾಧ್ಯತೆ ಇತ್ತು. ಆದರೆ ಕ್ಯಾಚ್ ಹಿಡಿಯುವಲ್ಲಿ ಟಿಕ್ನರ್ ವಿಫಲರಾದರು. ಒಂದು ಎಸೆತ ಬಾಕಿ ಇರುವಾಗ, ಸೂರ್ಯಕುಮಾರ್ ಬೌಂಡರಿ ದಾಖಲಿಸಿ ತಂಡ ಜಯಗಳಿಸಲು ಕಾರಣರಾದರು. 

ಈ ಪಂದ್ಯದಲ್ಲಿ ಭಾರತದ ಪರ ಒಂದೂ ಸಿಕ್ಸ್ ದಾಖಲಾಗದೇ ಇರುವುದು ವಿಶೇಷವೆನಿಸಿದೆ. ಅರ್ಶ್‌ದೀಪ್‌ ಸಿಂಗ್ 2 ವಿಕೆಟ್‌ ಪಡೆದರೆ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಹಲ್‌, ದೀಪಕ್‌ ಹೂಡಾ, ಕುಲದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com