2ನೇ ಟಿ20: ಭಾರತೀಯ ಸ್ಪಿನ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ಅಲ್ಪಮೊತ್ತಕ್ಕೆ ಕುಸಿತ!

ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 99 ರನ್ ಗಳ ಅಲ್ಪಮೊತ್ತಕ್ಕೆ ಕುಸಿದಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ

ಲಖನೌ: ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 99 ರನ್ ಗಳ ಅಲ್ಪಮೊತ್ತಕ್ಕೆ ಕುಸಿದಿದ್ದು ಭಾರತಕ್ಕೆ 100 ರನ್ ಗಳ ಗುರಿ ನೀಡಿದೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಟಿ20 ಸರಣಿಯ ಎರಡನೇ ಪಂದ್ಯ ಲಖನೌ ಏಕಾನಾ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಮೊದಲ ಟಿ20ಯಲ್ಲಿ 21 ರನ್‌ಗಳಿಂದ ಸೋತ ಭಾರತ ತಂಡ ಸರಣಿಯಲ್ಲಿ 1-0 ಹಿನ್ನಡೆಯಲ್ಲಿದೆ. 

ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ಭಾರತದ ಮುಂದೆ 100 ರನ್‌ಗಳ ಗುರಿಯನ್ನು ನೀಡಿದೆ. ಕಿವೀಸ್ ತಂಡವು 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು 99 ರನ್ ಗಳಿಸಿತು. ಇದು ಭಾರತದ ವಿರುದ್ಧ ಟಿ20ಯಲ್ಲಿ ನ್ಯೂಜಿಲೆಂಡ್‌ನ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.

ಭಾರತದ ಸ್ಪಿನ್ನರ್‌ಗಳ ಮುಂದೆ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು. ಸ್ಪಿನ್ನರ್‌ಗಳು ಒಟ್ಟು ನಾಲ್ಕು ವಿಕೆಟ್ ಪಡೆದರು. ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ಭಾರತಕ್ಕೆ ವಿಕೆಟ್ ಖಾತೆ ತೆರೆದರು. ಅವರು ಫಿನ್ ಅಲೆನ್ 11 ರನ್ ಗಳಿಸಿದ್ದಾಗ ಕ್ಲೀನ್ ಬೌಲ್ಡ್ ಮಾಡಿದರು.

ಇದಾದ ಬಳಿಕ ವಾಷಿಂಗ್ಟನ್ ಸುಂದರ್ ಬೌಲಿಂಗ್ ನಲ್ಲಿ 11 ರನ್ ಗಳಿಸಿದ್ದ ಡೆವೊನ್ ಕಾನ್ವೆ ಇಶಾನ್ ಕಿಶನ್ ಗೆ ಕ್ಯಾಚ್ ನೀಡಿ ಔಟಾದರು. ಅರೆಕಾಲಿಕ ಸ್ಪಿನ್ನರ್ ದೀಪಕ್ ಹೂಡಾ ಗ್ಲೆನ್ ಫಿಲಿಪ್ಸ್ (5) ಅವರನ್ನು ಔಟ್ ಮಾಡಿ ನ್ಯೂಜಿಲೆಂಡ್‌ಗೆ ಮೂರನೇ ಹೊಡೆತ ನೀಡಿದರು. ಇದಾದ ಬಳಿಕ ಕುಲದೀಪ್ ಯಾದವ್ ಡೆರಿಲ್ ಮಿಚೆಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮಿಚೆಲ್ ಎಂಟು ರನ್ ಗಳಿಸಿ ಔಟಾದರು.

ಇನ್ನುಳಿದಂತೆ ಮೈಕೆಲ್ ಬ್ರೇಸ್ವೆಲ್ 14, ಮಿಚೆಲ್ ಸ್ಯಾಂಟ್ನರ್ ಅಜೇಯ 19 ರನ್ ಗಳಿಸಿದ್ದಾರೆ. 

ಭಾರತದ ಪರ ಬೌಲಿಂಗ್ ನಲ್ಲಿ ಅರ್ಷ್ ದೀಪ್ ಸಿಂಗ್ 2, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಹಾಲ್, ದೀಪಕ್ ಹೂಡಾ ಮತ್ತು ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com