2ನೇ ಟಿ20 ಪಂದ್ಯ: ಒಂದೂ ಸಿಕ್ಸರ್ ಇಲ್ಲದೆ ಇನ್ನಿಂಗ್ಸ್ ಮುಕ್ತಾಯ, ಕಳಪೆ ದಾಖಲೆ ಬರೆದ ನ್ಯೂಜಿಲೆಂಡ್

2ನೇ ಟಿ20 ಪಂದ್ಯದಲ್ಲಿ ಭಾರತೀಯ ಬೌಲರ್ ಗಳ ದಾಳಿಗೆ ನಲುಗಿದ ಪ್ರವಾಸಿ ನ್ಯೂಜಿಲೆಂಡ್ ತಂಡ ಕ್ರಿಕೆಟ್ ಲೋಕದ ಕಳಪೆ ದಾಖಲೆಯೊಂದನ್ನು ಬರೆದುಕೊಂಡಿದೆ.
ನ್ಯೂಜಿಲೆಂಡ್ ತಂಡ
ನ್ಯೂಜಿಲೆಂಡ್ ತಂಡ
Updated on

ಲಖನೌ: 2ನೇ ಟಿ20 ಪಂದ್ಯದಲ್ಲಿ ಭಾರತೀಯ ಬೌಲರ್ ಗಳ ದಾಳಿಗೆ ನಲುಗಿದ ಪ್ರವಾಸಿ ನ್ಯೂಜಿಲೆಂಡ್ ತಂಡ ಕ್ರಿಕೆಟ್ ಲೋಕದ ಕಳಪೆ ದಾಖಲೆಯೊಂದನ್ನು ಬರೆದುಕೊಂಡಿದೆ.

ಹೌದು.. ಇಂದು ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ಕೇವಲ 99 ರನ್ ಗಳಿಸಿ ಭಾರತಕ್ಕೆ 100 ರನ್ ಗಳ ಸಾಧಾರಣ ಗುರಿ ನೀಡಿದೆ. ಅಂತೆಯೇ ಇದೇ ಪಂದ್ಯದಲ್ಲಿ ಕಿವೀಸ್ ಪಡೆ ಕಳಪೆ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದು, ಭಾರತದಲ್ಲಿ ಒಂದೂ ಸಿಕ್ಸರ್ ಇಲ್ಲದೇ ಇನ್ನಿಂಗ್ಸ್ ಮುಕ್ತಾಯ ಮಾಡಿದ ಕಳಪೆ ಸಾಧನೆ ಮಾಡಿದೆ.

ಇಂದಿನ ಪಂದ್ಯವೂ ಸೇರಿದಂತೆ ಜಾಗತಿಕ ಟಿ20 ಕ್ರಿಕೆಟ್ ನಲ್ಲಿ ಭಾರತದಲ್ಲಿ 3 ಬಾರಿ ಇಂತಹ ಕಳಪೆ ದಾಖಲೆಗಳು ದಾಖಲಾಗಿದೆ. ಈ ಹಿಂದೆ 2015ರಲ್ಲಿ ಕಟಕ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಕೇವಲ 92 ರನ್ ಗಳಿಗೆ ಆಲೌಟ್ ಆಗಿತ್ತು. ಅಂದಿನ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್ ನಲ್ಲಿ ಒಂದೇ ಒಂದು ಸಿಕ್ಸರ್ ದಾಖಲಾಗಿರಲಿಲ್ಲ. ಬಳಿಕ 2016ರಲ್ಲಿ ನಾಗ್ಪುರದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾಂಕಾಂಗ್ ತಂಡ 116ರನ್ ಗಳಿಸಿತ್ತು. ಈ ಪಂದ್ಯದಲ್ಲೂ ಹಾಂಕಾಂಗ್ ಒಂದೂ ಸಿಕ್ಸರ್ ಗಳಿಸಿರಲಿಲ್ಲ. 

ಇದೀಗ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 20 ಓವರ್ ಗಳಲ್ಲಿ 99ರನ್ ಗಳಿಸಿದ್ದು, ಈ ಪಂದ್ಯದಲ್ಲೂ ಒಂದೂ ಸಿಕ್ಸರ್ ಗಳಿಸದೇ ಮುಖಭಂಗಕ್ಕೀಡಾಗಿದೆ. ಅಂತೆಯೇ ಇದು ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ ಟಿ20 ಪಂದ್ಯದಲ್ಲಿ ಇನ್ನಿಂಗ್ಸ್ ನಲ್ಲಿ ಗಳಿಸಿದ ಅತ್ಯಂತ ಕನಿಷ್ಠ ಮೊತ್ತವಾಗಿದೆ.

STAT: Only the third instance of a team not hitting a six in an innings in a T20I in India
Ind vs SA Cuttack 2015 (92 allout)
HK vs Afg Nagpur 2016 (116/6)
NZ vs Ind Lucknow 2023 (99/8)*

99/8 - Lowest total for New Zealand against India in T20I

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com