ಅರ್ಷದೀಪ್ ಸಿಂಗ್ ಅವರ ಬೌಲಿಂಗ್ ಪರಿಣಾಮ 4 ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 135 ರನ್ ಗಳ ಜಯ ಗಳಿಸಿದ್ದು, 3-1 ಅಂತರದಿಂದ ಸರಣಿಯನ್ನು ಗೆದ್ದಿದೆ.
ಜೋಹಾನ್ಸ್‌ಬರ್ಗ್ ನ ವಾಂಡರರ್ಸ್ ನಲ್ಲಿ ಈ ಪಂದ್ಯ ನಡೆಯಿತು. 284 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, 148 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಸೋಲೊಪ್ಪಿಕೊಂಡಿತು.
ಅರ್ಶ್‌ದೀಪ್‌ನ ಆರಂಭಿಕ ಬೌಲಿಂಗ್ ದಾಳಿ, ಎದುರಾಳಿಗಳಿಗೆ ಯಶಸ್ವಿ ರನ್ ಚೇಸ್‌ಗೆ ಯಾವುದೇ ಅವಕಾಶವಿಲ್ಲದೆ ತತ್ತರಿಸುವಂತೆ ಮಾಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ, 20 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿತು.
ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಇಬ್ಬರೂ ಶತಕ ಸಿಡಿಸಿದ್ದು, ಸರಣಿಯಲ್ಲಿ ಇಬ್ಬರೂ 2 ಶತಕ ಗಳಿಸಿದ್ದಾರೆ. ಸರಣಿ ಗೆಲುವಿನೊಂದಿಗೆ, ಭಾರತ ಜೂನ್‌ನಲ್ಲಿ T20 ವಿಶ್ವಕಪ್ ವಿಜಯದ ನಂತರ T20I ಸರಣಿಯಲ್ಲಿ ತಮ್ಮ ಅಜೇಯ ಓಟವನ್ನು ವಿಸ್ತರಿಸಿದೆ. ಇದಕ್ಕೂ ಮುನ್ನ ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಸಹ ಸೋಲಿಸಿದೆ.
Advertisement