England vs India, 3rd T20: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 26 ರನ್ ಸೋಲು; 2-1 ಮುನ್ನಡೆ
ರಾಜ್ ಕೋಟ್: ರಾಜ್ ಕೋಟ್ ನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ 3 ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಭಾರತದ ವಿರುದ್ಧ 26 ರನ್ ಗಳ ಜಯ ಗಳಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಇಂಗ್ಲೆಂಡ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 171 ರನ್ ಗಳಿಗೆ ಕಟ್ಟಿ ಹಾಕಿತ್ತು.
ಇಂಗ್ಲೆಂಡ್ ಟಾರ್ಗೆಟ್ ನ್ನು ಬೆನ್ನಟ್ಟಿದ ಭಾರತದ ಬ್ಯಾಟ್ಸ್ಮನ್ ಗಳು ಒತ್ತಡ ಎದುರಿಸುವಂತೆ ಬೌಲಿಂಗ್ ಮಾಡುವಲ್ಲಿ ಇಂಗ್ಲೆಂಡ್ ಬೌಲರ್ ಗಳು ಯಶಸ್ವಿಯಾದರು.
ಹಾರ್ದಿಕ್ ಪಾಂಡ್ಯ (35 ಎಸೆತಗಳಲ್ಲಿ 40 ರನ್ ) ಏಕಾಂಗಿಯಾಗಿ ಇಂಗ್ಲೆಂಡ್ ಬೌಲರ್ ಗಳನ್ನು ಎದುರಿಸಲು ಪ್ರಯತ್ನಿಸಿದರಾದರೂ ಅವರ ಪ್ರಯತ್ನ ವ್ಯರ್ಥವಾಯಿತು.
ಅಂತಿಮವಾಗಿ 20 ಓವರ್ ಗಳಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 145 ರನ್ ಮಾತ್ರ ಗಳಿಸಲು ಸಾಧ್ಯವಾಗಿ ಇಂಗ್ಲೆಂಡ್ ಎದುರು ಸೋಲೊಪ್ಪಿಕೊಂಡಿತು.
ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆ ಕಾಯ್ದುಕೊಂಡಿದೆ. 3ನೇ ಟಿ20 ಯಲ್ಲಿ 5 ವಿಕೆಟ್ ಗಳಿಸಿದ ವರುಣ್ ಚಕ್ರವರ್ತಿ ಪ್ಲೇಯರ್ ಆಫ್ ದಿ ಮ್ಯಾಚ್ ಕೀರ್ತಿಗೆ ಭಾಜನರಾದರು.