T20I: ಇಂಗ್ಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್; Tilak Varma ಐತಿಹಾಸಿಕ ದಾಖಲೆ, Elite group ಸೇರ್ಪಡೆ!

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 165 ರನ್ ಬಾರಿಸಿದರೆ, ಟೀಮ್ ಇಂಡಿಯಾ 19.2 ಓವರ್​ಗಳಲ್ಲಿ 166 ರನ್​ ಗಳಿಸಿ ಗೆಲುವಿನ ನಗೆ ಬೀರಿತು.
Tilka Varma joins Elite group
ತಿಲಕ್ ವರ್ಮಾ
Updated on

ಚೆನ್ನೈ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅದ್ಧುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಭಾರತದ ತಿಲಕ್ ವರ್ಮಾ ಐತಿಹಾಸಿಕ ದಾಖಲೆ ನಿರ್ಮಿಸಿದ್ದು, ಧೋನಿ ಮತ್ತು ಸಚಿನ್ ತೆಂಡೂಲ್ಕರ್ ಮಾತ್ರ ಇರುವ ಎಲೈಟ್ ಗ್ರೂಪ್ ಸೇರ್ಪಡೆಯಾಗಿದ್ದಾರೆ.

ಹೌದು.. ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಕೆಟ್​ಗಳ ರೋಚಕ ಜಯ ಸಾಧಿಸಿದ್ದು, ಭಾರತದ ಈ ರೋಚಕ ಗೆಲುವಿನಲ್ಲಿ ಎಡಗೈ ದಾಂಡಿಗ ತಿಲಕ್ ವರ್ಮಾ ಮಹತ್ತರ ಪಾತ್ರವಹಿಸಿದ್ದು, ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 165 ರನ್ ಬಾರಿಸಿದರೆ, ಟೀಮ್ ಇಂಡಿಯಾ 19.2 ಓವರ್​ಗಳಲ್ಲಿ 166 ರನ್​ ಗಳಿಸಿ ಗೆಲುವಿನ ನಗೆ ಬೀರಿತು. ಅಂತೆಯೇ ಈ ಗೆಲುವಿನೊಂದಿಗೆ ತಿಲಕ್ ವರ್ಮಾ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದು, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡು ಔಟ್​ಗಳ ನಡುವೆ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆಗೆ ತಿಲಕ್ ವರ್ಮಾ ಸೇರ್ಪಡೆಯಾಗಿದ್ದಾರೆ. ಈ ಪಂದ್ಯದಲ್ಲಿ ಭಾರತದ ತಿಲಕ್ ವರ್ಮಾ 55 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 4 ಬೌಂಡರಿ​ಗಳೊಂದಿಗೆ ಅಜೇಯ 72 ರನ್ ಬಾರಿಸಿದರು.

Tilka Varma joins Elite group
ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ದ ಕೊನೆಯ ಎರಡು ಓವರ್‌: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 2 ವಿಕೆಟ್‌ ರೋಚಕ ಗೆಲುವು!

ಈ 72 ರನ್​​ಗಳೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಎರಡು ಔಟ್​​ಗಳ ನಡುವೆ ಅಜೇಯರಾಗಿ ಉಳಿದು ಅತೀ ಹೆಚ್ಚು ರನ್ ಬಾರಿಸಿದ ವಿಶ್ವ ದಾಖಲೆಗೆ ತಿಲಕ್ ವರ್ಮಾ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ಅಪರೂಪದ ವರ್ಲ್ಡ್ಡ್ ರೆಕಾರ್ಡ್​ ನ್ಯೂಝಿಲೆಂಡ್​ನ ಮಾರ್ಕ್​ ಚಾಪ್ಮನ್ ಹೆಸರಿನಲ್ಲಿತ್ತು. ಮಾರ್ಕ್​ ಚಾಪ್ಮನ್ 5 ಇನ್ನಿಂಗ್ಸ್ ಗಳಲ್ಲಿ ಅಜೇಯ ಆಟವಾಡಿ 271ರನ್ ಕಲೆಹಾಕಿದ್ದರು.

ಇದೀಗ ಈ ದಾಖಲೆಯನ್ನು ಭಾರತದ ತಿಲಕ್ ವರ್ಮಾ ಹಿಂದಿಕ್ಕಿದ್ದು, ತಿಲಕ್ ತಾವಾಡಿದ ಕಳೆದ 4 ಇನ್ನಿಂಗ್ಸ್ ಗಳಲ್ಲಿ ಬರೊಬ್ಬರಿ 318ರನ್ ಕಲೆಹಾಕಿದ್ದಾರೆ. ಈ ಹಿಂದೆ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಎರಡು ಅಜೇಯ ಶತಕಗಳನ್ನು (120*, 107*) ಬಾರಿಸಿದ್ದ ತಿಲಕ್ ವರ್ಮಾ, ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಅಜೇಯ 19* ಮತ್ತು ಎರಡನೇ ಮ್ಯಾಚ್​ನಲ್ಲಿ ಅಜೇಯ 72* ರನ್ ಕಲೆಹಾಕಿದ್ದಾರೆ.

Most runs bw two dismissals in T20Is (FM teams)

  • 318* Tilak Varma (107*, 120*, 19*, 72*)

  • 271 Mark Chapman (65*, 16*, 71*, 104*, 15)

  • 240 Aaron Finch (68*, 172)

  • 240 Shreyas Iyer (57*, 74*, 73*, 36)

  • 239 David Warner (100*, 60*, 57*, 2*, 20)

ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಎರಡು ಔಟ್​ಗಳ ನಡುವೆ 318* ಬಾರಿಸಿ, ತಿಲಕ್ ವರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. ವಿಶೇಷ ಎಂದರೆ ಕಳೆದ 4 ಇನಿಂಗ್ಸ್​ಗಳಲ್ಲಿ ತಿಲಕ್ ಔಟ್ ಆಗಿಲ್ಲ. ಹೀಗಾಗಿ ಈ ದಾಖಲೆ ಮುಂದಿನ ಪಂದ್ಯದಲ್ಲೂ ಮುಂದುವರೆಯಲಿದೆ.

ಎಲೈಟ್ ಗ್ರೂಪ್ ಸೇರ್ಪಡೆ

ಅಂತೆಯೇ ಈ ಇನ್ನಿಂಗ್ಸ್ ಮೂಲಕ ತಿಲಕ್ ವರ್ಮಾ ಭಾರತದ ಮತ್ತೊಂದು ಎಲೈಟ್ ಗ್ರೂಪ್ ಸೇರ್ಪಡೆಯಾಗಿದ್ದು, ಕ್ರಿಕೆಟ್ ದೇವರು ಸಚಿನ್ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇರುವ ಎಲೈಟ್ ಗ್ರೂಪ್ ಸೇರಿದ್ದಾರೆ.

ಸಚಿನ್ ತೆಂಡೂಲ್ಕರ್ ಟೆಸ್ಟ್ ನಲ್ಲಿ ಅಜೇಯ ದಾಖಲೆ ನಿರ್ಮಿಸಿದ್ದು, ಸಚಿನ್ ಸತತ ಮೂರು ಇನ್ನಿಂಗ್ಸ್ ಗಳಲ್ಲಿ ಅಜೇಯ ಆಟವಾಡಿ 495ರನ್ ಕಲೆಹಾಕಿದ್ದಾರೆ. ಅಂತೆಯೇ ಏಕದಿನ ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿ 6 ಇನ್ನಿಂಗ್ಸ್ ಗಳಲ್ಲಿ ಸತತ ಅಜೇಯ ಆಟವಾಡಿ 495ರನ್ ಕಲೆಹಾಕಿದ್ದಾರೆ. ಇದೀಗ ಈ ಪಟ್ಟಿಗೆ ತಿಲಕ್ ವರ್ಮಾ ಸೇರ್ಪಡೆಯಾಗಿದ್ದು, ಟಿ20ಯಲ್ಲಿ ತಿಲಕ್ ವರ್ಮಾಈ ಸಾಧನೆ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com