ಇಂಗ್ಲೆಂಡ್ ನೆಲದಲ್ಲಿ ಮೊಟ್ಟಮೊದಲ ಸರಣಿ ಸ್ವೀಪ್ ದಾಖಲೆ ಬರೆದ ಭಾರತ ಮಹಿಳಾ ತಂಡ, ಗೋಸ್ವಾಮಿಗೆ ಗೆಲುವಿನ ವಿದಾಯ!

ಮೂರನೇ ಹಾಗೂ ಅಂತಿಮ ಮಹಿಳಾ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 16 ರನ್‌ಗಳಿಂದ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಜೂಲನ್ ಗೋಸ್ವಾಮೀ
ಜೂಲನ್ ಗೋಸ್ವಾಮೀ

ಲಂಡನ್: ಮೂರನೇ ಹಾಗೂ ಅಂತಿಮ ಮಹಿಳಾ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 16 ರನ್‌ಗಳಿಂದ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

3ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 169 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಗಿತ್ತು. ಸ್ಮೃತಿ ಮಂದಾನ 50 ಹಾಗೂ ದೀಪ್ತಿ ಶರ್ಮಾ ಅಜೇಯ 68 ರನ್ ಪೇರಿಸಿದ್ದರು. ಇನ್ನು ಪೂಜಾ 22 ರನ್ ಪೇರಿಸಿದ್ದು ತಂಡ 160 ರನ್ ದಾಟಲು ನೆರವಾಯಿತು. 

ಭಾರತ ನೀಡಿದ 170 ರನ್ ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೆ ರೇಣುಕಾ ಸಿಂಗ್ ಮಾರಕ ಹೊಡೆತ ನೀಡಿದರು. ರೇಣುಕಾ 4 ವಿಕೆಟ್ ಗಳನ್ನು ಪಡೆಯುವ ಮೂಲಕ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು. ಇನ್ನು ತಮ್ಮ ವಿದಾಯದ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ 2 ವಿಕೆಟ್ ಪಡೆದಿದ್ದು ವಿಶೇಷವಾಗಿತ್ತು.

ಇಂಗ್ಲೆಂಡ್ ಪರ ಎಮ್ಮಾ ಲ್ಯಾಂಬ್ 21, ಆಮಿ ಜೋನ್ಸ್ 28, ಚಾರ್ಲಿ ಡೀನ್ 47 ಮತ್ತು ಕೇಟ್ ಕ್ರಾಸ್ 10 ರನ್ ಪೇರಿಸಿದ್ದಾರೆ.

ಟೀಂ ಇಂಡಿಯಾದ ಹಿರಿಯ ವೇಗಿ ಜೂಲನ್ ಗೋಸ್ವಾಮಿಗೆ ಗೆಲುವಿನ ವಿದಾಯ
ಟೀಂ ಇಂಡಿಯಾ ಜೊತೆಗಿನ 20 ವರ್ಷಗಳ ತಮ್ಮ ಸುದೀರ್ಘ ಪ್ರಯಾಣವನ್ನು ಗೋಸ್ವಾಮಿ ಅಂತ್ಯಗೊಳಿಸಿದ್ದಾರೆ. ಟೆಸ್ಟ್ ಪರ 12 ಪಂದ್ಯಗಳಲ್ಲಿ 44 ವಿಕೆಟ್ ಪಡೆದಿದ್ದಾರೆ. 200 ಏಕದಿನ ಪಂದ್ಯಗಳನ್ನಾಡಿರುವ ಗೋಸ್ವಾಮಿ 255 ವಿಕೆಟ್ ಪಡೆದಿದ್ದಾರೆ. 31 ರನ್ ಗೆ 6 ವಿಕೆಟ್ ಪಡೆದಿದ್ದು ಅವರ ಅತ್ಯುತ್ತಮ ದಾಖಲೆಯಾಗಿದೆ. ಇನ್ನು 68 ಟಿ20 ಪಂದ್ಯಗಳ ಪೈಕಿ 56 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com