ಏಕದಿನ ಪಂದ್ಯದಲ್ಲಿ ದ್ವಿಶತಕ: ಟೀಂ ಇಂಡಿಯಾ ಆಯ್ಕೆಗಾರರ ಬಗ್ಗೆ ಯೋಚಿಸಿಲ್ಲ ಎಂದ ಪೃಥ್ವಿ ಶಾ!

ಕೌಂಟಿ ಮೈದಾನದಲ್ಲಿ ನಡೆದ ಸಾಮರ್‌ಸೆಟ್ ವಿರುದ್ಧದ ಏಕದಿನ ಕಪ್ ಪಂದ್ಯದಲ್ಲಿ ನಾರ್ಥಾಂಪ್ಟನ್‌ಶೈರ್‌ಗಾಗಿ ಹಲವಾರು ಲಿಸ್ಟ್ ಎ ದಾಖಲೆಗಳನ್ನು ಮುರಿದ ಟೀಮ್ ಇಂಡಿಯಾದ ಡ್ಯಾಶಿಂಗ್ ಓಪನರ್ ಪೃಥ್ವಿ ಶಾ, ಟೀಂ ಇಂಡಿಯಾ ಆಯ್ಕೆ ಸಮಿತಿಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದರು. 
ಪೃಥ್ವಿ ಶಾ
ಪೃಥ್ವಿ ಶಾ

ಲಂಡನ್: ಕೌಂಟಿ ಮೈದಾನದಲ್ಲಿ ನಡೆದ ಸಾಮರ್‌ಸೆಟ್ ವಿರುದ್ಧದ ಏಕದಿನ ಕಪ್ ಪಂದ್ಯದಲ್ಲಿ ನಾರ್ಥಾಂಪ್ಟನ್‌ಶೈರ್‌ಗಾಗಿ ಹಲವಾರು ಲಿಸ್ಟ್ ಎ ದಾಖಲೆಗಳನ್ನು ಮುರಿದ ಟೀಮ್ ಇಂಡಿಯಾದ ಡ್ಯಾಶಿಂಗ್ ಓಪನರ್ ಪೃಥ್ವಿ ಶಾ, ಟೀಂ ಇಂಡಿಯಾ ಆಯ್ಕೆ ಸಮಿತಿಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದರು. 

ಪೃಥ್ವಿ ಶಾ ಅವರ ಬೃಹತ್ ಇನ್ನಿಂಗ್ಸ್ ಆಡಿದ್ದು 153 ಎಸೆತಗಳಲ್ಲಿ 28 ಬೌಂಡರಿ ಹಾಗೂ 11 ಸಿಕ್ಸರ್‌ಗಳ ನೆರವಿನಿಂದ 244 ರನ್ ಗಳಿಸಿದ್ದು ನಾರ್ಥಾಂಪ್ಟನ್‌ಶೈರ್ 8 ವಿಕೆಟ್‌ಗೆ 415 ರನ್ ಗಳಿಸಿ 87 ರನ್‌ಗಳ ಜಯ ಸಾಧಿಸಿತು. ಅವರ ಇನ್ನಿಂಗ್ಸ್ ಯಾವುದೇ ಲಿಸ್ಟ್ A ಪಂದ್ಯದಲ್ಲಿ ಆರನೇ ಅತಿ ಹೆಚ್ಚು ವೈಯಕ್ತಿಕ ದಾಖಲೆ ರನ್ ಆಗಿದೆ.

ಏಕದಿನದಲ್ಲಿ ದ್ವಿಶತಕ ಸಿಡಿಸಿದ ಪೃಥ್ವಿ ಶಾ
ಪೃಥ್ವಿ ಶಾ ನಾರ್ಥಾಂಪ್ಟನ್‌ಶೈರ್‌ಗೆ ಕೊನೆಯ ಎರಡು ಅವಕಾಶಗಳಲ್ಲಿ 34 ಮತ್ತು 26 ರನ್ ಗಳಿಸಿದರು. ನಂತರ ಗೇರ್ ಬದಲಾಯಿಸಿದ ಅವರು ಮೊದಲು 81 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ನಂತರ ಕೇವಲ 129 ಎಸೆತಗಳಲ್ಲಿ ದ್ವಿಶತಕ ಬಾರಿಸಿದರು. ಪೃಥ್ವಿ ಶಾ, 'ವಾಸ್ತವವಾಗಿ ಭಾರತೀಯ ಆಯ್ಕೆದಾರರು ಏನು ಯೋಚಿಸುತ್ತಾರೆ ಎಂದು ನಾನು ಯೋಚಿಸುತ್ತಿಲ್ಲ, ಆದರೆ ನಾನು ಇಲ್ಲಿ ಉತ್ತಮ ಸಮಯವನ್ನು ಕಳೆಯಲು ಬಯಸುತ್ತೇನೆ. ಇಲ್ಲಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲು ಬಯಸುತ್ತೇನೆ. ನಾರ್ಥಾಂಪ್ಟನ್‌ಶೈರ್ ನನಗೆ ಈ ಅವಕಾಶವನ್ನು ನೀಡಿದೆ. ಅವರು ನಿಜವಾಗಿಯೂ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ನಾನು ಅದನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ ಎಂದರು.

ಕೆಲವೊಮ್ಮೆ ನೀವು ಅದೃಷ್ಟವಂತರಾಗಿರಬೇಕು
ಪೃಥ್ವಿ ಶಾ, 'ಅಲ್ಲಿ ಸೂರ್ಯನ ಬೆಳಿಕಿತ್ತು. ಒಂದು ಮಾದರಿ ಭಾರತೀಯ ಹವಾಗುಣ ಎದುರಾದಂತೆ ಕಂಡುಬಂದಿತು. ಇದೇ ಕಾರಣಕ್ಕೆ ಇನ್‌ಸೈಡ್‌ ಎಡ್ಜ್ ಆದರೂ ಕೂಡ ನಾನು ಔಟ್‌ ಆಗಲಿಲ್ಲ. ಆನಂತರ ನಾನು ಆತ್ಮವಿಶ್ವಾಸದಿಂದ ಆಡಲು ಶುರು ಮಾಡಿದೆ. ಕೆಲವೊಮ್ಮೆ ಈ ರೀತಿಯ ಅದೃಷ್ಟ ಕೈ ಹಿಡಿಯಬೇಕಾಗುತ್ತದೆ. ಇಂದು ಅದೃಷ್ಟ ನನ್ನದಾಗಿತ್ತು. ಅದನ್ನು ಬಳಸಿಕೊಂಡೆ ಎಂದು ಹೇಳಿಕೊಂಡಿದ್ದಾರೆ.

194 ರನ್‌ಗಳ ಬೃಹತ್ ಜೊತೆಯಾಟ
2021ರ ಫೆಬ್ರವರಿಯಲ್ಲಿ ನಡೆದ ವಿಜಯ್ ಹಝಾರೆ ಟ್ರೋಫಿ ವೇಳೆ ಮುಂಬೈ ತಂಡದ ಪರ ಅಬ್ಬರಿಸಿದ್ದ ಪೃಥ್ವಿ ಶಾ 152 ಎಸೆತಗಳಲ್ಲಿ 227 ರನ್‌ ಬಾರಿಸಿದ್ದರು. ಇದೀಗ ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿನ ತಮ್ಮ ವೈಯಕ್ತಿಕ ರನ್ ಅನ್ನು ಮತ್ತಷ್ಟು ಸುಧಾರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com