2023 ವಿಶ್ವಕಪ್ ಪ್ರೊಮೋಷನಲ್ ವೀಡಿಯೋದಲ್ಲಿ ಇಮ್ರಾನ್ ಖಾನ್ ಮರೆತ ಪಿಸಿಬಿ; ಆಕ್ರೋಶದ ಬಳಿಕ ಹೊಸ ವೀಡಿಯೋ

ಅಕ್ಟೋಬರ್ 5 ರಿಂದ ಭಾರತದಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಗೆ ತಮ್ಮ ತಂಡದ ಪ್ರೊಮೋಷನಲ್ ವೀಡಿಯೋದಲ್ಲಿ ಭಾರಿ ಯಡವಟ್ಟು ಮಾಡಿಕೊಂಡಿದ್ದ ಪಾಕ್ ಕ್ರಿಕೆಟ್ ಮಂಡಳಿ ಈಗ ಅದನ್ನು ಸರಿಪಡಿಸಿಕೊಂಡಿದೆ. 
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ಅಕ್ಟೋಬರ್ 5 ರಿಂದ ಭಾರತದಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಗೆ ತಮ್ಮ ತಂಡದ ಪ್ರೊಮೋಷನಲ್ ವೀಡಿಯೋದಲ್ಲಿ ಭಾರಿ ಯಡವಟ್ಟು ಮಾಡಿಕೊಂಡಿದ್ದ ಪಾಕ್ ಕ್ರಿಕೆಟ್ ಮಂಡಳಿ ಈಗ ಅದನ್ನು ಸರಿಪಡಿಸಿಕೊಂಡಿದೆ. 

ಹಳೆಯ ಪ್ರೊಮೋಷನಲ್ ವೀಡಿಯೋದಲ್ಲಿ 1992 ರಲ್ಲಿ ವಿಶ್ವಕಪ್ ನ್ನು ಗೆದ್ದ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದ ಇಮ್ರಾನ್ ಖಾನ್ ಅವರನ್ನು ಈ ಹಿಂದಿನ ವೀಡಿಯೋದಲ್ಲಿ ಕೈಬಿಡಲಾಗಿತ್ತು. ಆದರೆ ಈಗ ಹೊಸ ವೀಡಿಯೋದಲ್ಲಿ ಇಮ್ರಾನ್ ಖಾನ್ ನೇತೃತ್ವದ 1992 ರ ವಿಶ್ವಕಪ್ ತಂಡದ ವೀಡಿಯೋ ತುಣುಕುಗಳನ್ನು ಸೇರಿಸಲಾಗಿದೆ. 

ಅಲ್ಲಿನ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ಅಭಿಯಾನದ ವೀಡಿಯೊವನ್ನು ಆಗಸ್ಟ್ 14 ರಂದು ಅಪ್‌ಲೋಡ್ ಮಾಡಲಾಗಿತ್ತು. ಆದರೆ ಅದರಲ್ಲಿ ಇಮ್ರಾನ್ ಖಾನ್ ಇಲ್ಲದೇ ಇದ್ದದ್ದು ಪಾಕ್ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. 

ಈಗ ಹೊಸ ವೀಡಿಯೋದಲ್ಲಿ ಇಮ್ರಾನ್ ಖಾನ್ ನೇತೃತ್ವದ 1992 ರ ತಂಡದ ಸಾಧನೆಯನ್ನು ತೋರಿಸಿರುವ ಪಿಸಿಬಿ ದೀರ್ಘಾವಧಿಯ ವೀಡೀಯೋ ಆಗಿದ್ದರಿಂದ ಪ್ರಮುಖ ಅಂಶಗಳು ತಪ್ಪಿಹೋಗಿತ್ತು ಎಂದು ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದೆ.

ಹೊಸ ವೀಡಿಯೊ ಇಮ್ರಾನ್ ತನ್ನ ಸಹ ಆಟಗಾರರೊಂದಿಗೆ ವಿಶ್ವಕಪ್ ಗೆಲುವನ್ನು ಆಚರಿಸುತ್ತಿರುವ ಮತ್ತು WC ಟ್ರೋಫಿಯನ್ನು ಹಿಡಿದಿರುವ ಫ್ರೇಮ್‌ಗಳನ್ನು ಒಳಗೊಂಡಿದೆ.

ಗಮನಾರ್ಹವಾಗಿ, ಪಾಕಿಸ್ತಾನದ ಲೆಜೆಂಡರಿ ವೇಗಿ ವಾಸಿಂ ಅಕ್ರಮ್ ಇತ್ತೀಚೆಗೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ ದೇಶದ ಕ್ರಿಕೆಟ್ ಇತಿಹಾಸದಲ್ಲಿ ಮಾಜಿ ನಾಯಕ ಇಮ್ರಾನ್ ಖಾನ್ ಅವರ ಕೊಡುಗೆಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನ್ನು ಟೀಕಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com