U-19 Asia Cup: ಅಜಾನ್ ಶತಕದ ನೆರವಿನಿಂದ ಪಾಕಿಸ್ತಾನಕ್ಕೆ ಭಾರತದ ವಿರುದ್ಧ 8 ವಿಕೆಟ್‌ ಗೆಲುವು

ಅಜಾನ್ ಓವೈಸ್ ಅವರ ಅಜೇಯ ಶತಕದ ನೆರವಿನಿಂದ ಪಾಕಿಸ್ತಾನ ತಂಡ 19 ವರ್ಷದೊಳಗಿನವರ ಏಷ್ಯಾಕಪ್‌ನಲ್ಲಿ  ಭಾರತವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ದುಬೈ: ಅಜಾನ್ ಓವೈಸ್ ಅವರ ಅಜೇಯ ಶತಕದ ನೆರವಿನಿಂದ ಪಾಕಿಸ್ತಾನ ತಂಡ 19 ವರ್ಷದೊಳಗಿನವರ ಏಷ್ಯಾಕಪ್‌ನಲ್ಲಿ  ಭಾರತವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. 

42 ಎಸೆತಗಳಲ್ಲಿ ಮೂರು ಸಿಕ್ಸರ್‌ಗಳೊಂದಿಗೆ 58 ರನ್ ಗಳಿಸಿದ ಸಚಿನ್ ದಾಸ್ ಅವರ ಇನ್ನಿಂಗ್ಸ್ ಹೊರತಾಗಿಯೂ, ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 259 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಉದಯ್ ಶರಣ್ (98 ಎಸೆತಗಳಲ್ಲಿ 60 ರನ್) ಮತ್ತು ಆರಂಭಿಕ ಆದರ್ಶ್ ಸಿಂಗ್ (62 ರನ್, 81 ಎಸೆತ) 20 ಓವರ್‌ಗಳಲ್ಲಿ 93 ರನ್‌ಗಳ ಜೊತೆಯಾಟ ನೀಡಿದರು. ಆದರೆ ರನ್ ಮೊತ್ತ ಹೆಚ್ಚಿಸಲು ವಿಫಲರಾದರು.

ಸರ್ಫರಾಜ್ ಖಾನ್ ಅವರ ಕಿರಿಯ ಸಹೋದರ ಮುಶೀರ್ (02) ಮೊದಲ ಪಂದ್ಯದ ಪ್ರದರ್ಶನವನ್ನು ಪುನರಾವರ್ತಿಸಲು ವಿಫಲರಾದರು. ಇದಕ್ಕೆ ಉತ್ತರವಾಗಿ ಎಡಗೈ ಬ್ಯಾಟ್ಸ್‌ಮನ್ ಅಜಾನ್ ಅವರ ಅಜೇಯ ಶತಕದ ನೆರವಿನಿಂದ ಪಾಕಿಸ್ತಾನ 47 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 263 ರನ್ ಗಳಿಸುವ ಮೂಲಕ ಗುರಿಯನ್ನು ಸಾಧಿಸಿತು. ಅಜನ್ 130 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ಅಜೇಯ 105 ರನ್ ಗಳಿಸಿದರು.

ಭಾರತ ಮಂಗಳವಾರ ನೇಪಾಳ ವಿರುದ್ಧ ತನ್ನ ಕೊನೆಯ ಗ್ರೂಪ್ ಲೀಗ್ ಪಂದ್ಯವನ್ನು ಆಡಲಿದ್ದು, ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಪಾಕಿಸ್ತಾನ ಎರಡು ಪಂದ್ಯಗಳಲ್ಲಿ ಎರಡು ಗೆಲುವು ದಾಖಲಿಸಿದೆ. ಸೆಮಿಫೈನಲ್‌ಗೆ ಪ್ರವೇಶಿಸಲು ದೊಡ್ಡ ಸೋಲನ್ನು ತಪ್ಪಿಸಬೇಕಾಗಿದೆ. ನೇಪಾಳ ತಂಡವು ಹೆಚ್ಚು ಬಲಿಷ್ಠವಾಗಿಲ್ಲ ಮತ್ತು ತನ್ನ ಎರಡೂ ಪಂದ್ಯಗಳಲ್ಲಿ ಸೋತಿರುವ ಕಾರಣ ಭಾರತಕ್ಕೆ ಗೆಲುವು ದಾಖಲಿಸುವುದು ಕಷ್ಟವೇನಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com