ಮುಂಬೈ ಇಂಡಿಯನ್ಸ್‌ಗೆ ಪಾಂಡ್ಯ ಕ್ಯಾಪ್ಟನ್: ಘೋಷಿಸಿದ 1 ಗಂಟೆಯಲ್ಲೇ 4 ಲಕ್ಷ ಫಾಲೋವರ್ಸ್ ಕಳೆದುಕೊಂಡ ಫ್ರಾಂಚೈಸಿ!

ಮುಂಬೈ ಇಂಡಿಯನ್ಸ್‌ ತಂಡ 2024ರ ಐಪಿಎಲ್‌ಗೆ ತನ್ನ ನಾಯಕನನ್ನು ಬದಲಾವಣೆ ಮಾಡಿದೆ. ಮುಂದಿನ ಐಪಿಎಲ್‌ನಲ್ಲಿ ಅನುಭವಿ ರೋಹಿತ್‌ ಶರ್ಮ ಬದಲು, ಇತ್ತೀಚೆಗೆ ಗುಜರಾತ್‌ ಟೈಟಾನ್ಸ್‌ ತಂಡದಿಂದ ಮುಂಬೈ ತಂಡ ಕೂಡಿಕೊಂಡಿರುವ ಆಲ್ ರೌಂಡರ್ ಹಾರ್ದಿಕ್‌ ಪಾಂಡ್ಯ ಅವರನ್ನು 2024ರ ಐಪಿಎಲ್‌ಗೆ ನಾಯಕನನ್ನಾಗಿ ಘೋಷಣೆ ಮಾಡಿದೆ.
ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ
ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ

ನವದೆಹಲಿ:  ಮುಂಬೈ ಇಂಡಿಯನ್ಸ್‌ ತಂಡ 2024ರ ಐಪಿಎಲ್‌ಗೆ ತನ್ನ ನಾಯಕನನ್ನು ಬದಲಾವಣೆ ಮಾಡಿದೆ. ಮುಂದಿನ ಐಪಿಎಲ್‌ನಲ್ಲಿ ಅನುಭವಿ ರೋಹಿತ್‌ ಶರ್ಮ ಬದಲು, ಇತ್ತೀಚೆಗೆ ಗುಜರಾತ್‌ ಟೈಟಾನ್ಸ್‌ ತಂಡದಿಂದ ಮುಂಬೈ ತಂಡ ಕೂಡಿಕೊಂಡಿರುವ ಆಲ್ ರೌಂಡರ್ ಹಾರ್ದಿಕ್‌ ಪಾಂಡ್ಯ ಅವರನ್ನು 2024ರ ಐಪಿಎಲ್‌ಗೆ ನಾಯಕನನ್ನಾಗಿ ಘೋಷಣೆ ಮಾಡಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮುಂಬರುವ ಆವೃತ್ತಿಗೆ ಮುಂಬೈ ಇಂಡಿಯನ್ಸ್‌ ತಂಡ ರೋಹಿತ್‌ ಶರ್ಮಾ ಅವರನ್ನು ಕೈಬಿಟ್ಟು ಹಾರ್ದಿಕ್‌ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ. ಹಾರ್ದಿಕ್‌ ಪಾಂಡ್ಯ ನೇಮಕದ ಕೆಲವೇ ಕ್ಷಣಗಳಲ್ಲಿ ಮುಂಬೈ ಇಂಡಿಯನ್ಸ್‌  ತಂಡದ ಟ್ವೀಟರ್‌ನಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಕಳೆದುಕೊಂಡಿದೆ.

IPL 2024ರ ಹರಾಜಿಗೂ ಮೊದಲೇ ಗುಜರಾತ್‌ನ ಟೈಟಾನ್ಸ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡ ಖರೀದಿ ಮಾಡಿತ್ತು. ಡಿಸೆಂಬರ್ 15 ರಂದು ಮುಂಬೈ ಇಂಡಿಯನ್ಸ್ ಹಾರ್ದಿಕ್‌ ಪಾಂಡ್ಯ ಅವರನ್ನು ನಾಯಕನನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಇದು ರೋಹಿತ್‌ ಶರ್ಮಾ ಅವರ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ.

ರೋಹಿತ್‌ ಶರ್ಮ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಐದು ಬಾರಿ ಐಪಿಎಲ್‌ ಪ್ರಶಸ್ತಿ ಗೆದ್ದಿತ್ತು. 2013ರ ಐಪಿಎಲ್‌ನ ನಡುವೆಯೇ ರೋಹಿತ್‌ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ನಾಯಕರನ್ನಾಗಿ ಘೋಷಣೆ ಮಾಡಿತ್ತು. 2013ರ ಋತುವಿನ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್ ಪರವಾಗಿ 92 ಪಂದ್ಯವಾಡಿದ್ದರು. ಆ ಬಳಿಕ ಅವರು ಗುಜರಾತ್‌ ಟೈಟಾನ್ಸ್‌ ತಂಡಕ್ಕೆ ವರ್ಗಾವಣೆಯಾಗಿದ್ದರು. 2022 ಹಾಗೂ 2023ರಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಅವರು ಮುನ್ನಡೆಸಿದ್ದರು. ಇವರ ನಾಯಕತ್ವದಲ್ಲಿ ತಂಡ ಎರಡೂ ಭಾರಿಯೂ ಫೈನಲ್‌ನಲ್ಲಿ ಅಡಿತ್ತು. 2022ರಲ್ಲಿ ಪಾದಾರ್ಪಣೆ ಮಾಡಿದ್ದ ಋತುವಿನಲ್ಲಿಯೇ ತಂಡ ಚಾಂಪಿಯನ್ ಆಗಿತ್ತು.

ಅತೀ ಹೆಚ್ಚು ಬಾರಿ ಐಪಿಎಲ್‌ ಟ್ರೋಫಿಯನ್ನು ಗೆಲ್ಲಿಸಿಕೊಟ್ಟ ರೋಹಿತ್‌ ಶರ್ಮಾ ಅವರನ್ನು ಕೈಬಿಟ್ಟು ಹಾರ್ದಿಕ್‌ ಪಾಂಡ್ಯ ಅವರನ್ನು ತಂಡದ ನಾಯಕತ್ವ ನೀಡಿರುವ ಮುಂಬೈ ಇಂಡಿಯನ್ಸ್‌ ತಂಡದ ನಿರ್ಧಾರ ಅಭಿಮಾನಿಗಳಿಗೆ ಸಹಜವಾಗಿ ಬೇಸರ ಮೂಡಿಸಿದೆ. ಹಾರ್ದಿಕ್‌ ಪಾಂಡ್ಯ ನಾಯಕನಾಗಿ ನೇಮಕವಾಗುತ್ತಲೇ ನಾಲ್ಕು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಮುಂಬೈ ಇಂಡಿಯನ್ಸ್‌ಗೆ ಟಾಟಾ ಹೇಳಿದ್ದಾರೆ.

ರೋಹಿತ್‌ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗೆ ಇಳಿಸುತ್ತಿದ್ದಂತೆಯೇ ಹಲವು ಅಭಿಮಾನಿಗಳು ಮುಂಬೈ ಇಂಡಿಯನ್ಸ್‌ ತಂಡದ ಬಗೆಗಿನ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ. ಡಿಸೆಂಬರ್ 15 ರ ಸಂಜೆ ಕೇವಲ ಒಂದು ಗಂಟೆಯ ಅವಧಿಯಲ್ಲಿ, ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಅನುಯಾಯಿಗಳ ಸಂಖ್ಯೆ 8.6 ಮಿಲಿಯನ್‌ನಿಂದ 8.2 ಮಿಲಿಯನ್‌ಗೆ ಇಳಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com