ಮೊದಲ ಟೆಸ್ಟ್; ಕಾಗಿಸೋ ರಬಾಡ ಮಾರಕ ಬೌಲಿಂಗ್, ಮೊದಲ ದಿನದಾಟ ಅಂತ್ಯಕ್ಕೆ ಭಾರತ 208/8

ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 8 ವಿಕೆಟ್ ಗಳ ನಷ್ಟಕ್ಕೆ 208 ರನ್ ಗಳಿಸಿದೆ.
ಕಾಗಿಸೋ ರಬಾಡ ಮಾರಕ ಬೌಲಿಂಗ್
ಕಾಗಿಸೋ ರಬಾಡ ಮಾರಕ ಬೌಲಿಂಗ್

ಸೆಂಚೂರಿಯನ್: ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 8 ವಿಕೆಟ್ ಗಳ ನಷ್ಟಕ್ಕೆ 208 ರನ್ ಗಳಿಸಿದೆ.

ಸೆಂಚೂರಿಯನ್ ನ ಸೂಪರ್ ಸ್ಪೋರ್ಟ್ ಪಾರ್ಕ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ದಕ್ಷಿಣ ಆಫ್ರಿಕಾದ ಕಾಗಿಸೋ ರಬಾಡಾ ಮಾರಕ ಬೌಲಿಂಗ್ ಗೆ ತತ್ತರಿಸಿದ್ದು, ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿದೆ. ಭಾರತದ ಪರ ವಿಕೆಟ್ ಕೀಪರ್ ಕೆಎಲ್ ರಾಹುಲ್ 70ರನ್ ಗಳಿಸಿ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 

ಆಫ್ರಿಕಾದ ಮಾರಕ ಬೌಲಿಂಗ್ ತತ್ತರಿಸಿದ ಭಾರತ ತಂಡ ಕೇವಲ 107 ರನ್ ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 17 ರನ್ ಗಳಿಸಿದರೆ ನಾಯಕ ರೋಹಿತ್ ಶರ್ಮಾ 5 ರನ್ ಔಟಾದರು. ಬಳಿಕ ಬಂದ ಶುಭ್ ಮನ್ ಗಿಲ್ ಕೂಡ ಕೇವಲ 2 ರನ್ ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಭಾರತ ತೀವ್ರ ಆಘಾತ ಎದುರಿಸಿತು. ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ (38 ರನ್) ಮತ್ತು ಶ್ರೇಯಸ್ ಅಯ್ಯರ್ (31 ರನ್) ಆರಂಭಿಕ ಆಘಾತದಿಂದ ಮೇಲೆತ್ತುವ ಪ್ರಯತ್ನ ಪಟ್ಟರು. ಆದರೆ ರಬಾಡ ಮತ್ತೆ ಭಾರತ ತಂಡಕ್ಕೆ ಆಘಾತ ನೀಡಿದರು. ಕೊಹ್ಲಿ ಮತ್ತು ಅಯ್ಯರ್ ಇಬ್ಬರ ವಿಕೆಟ್ ಪಡೆದರು. 

ಬಳಿಕ ಕ್ರೀಸ್ ಗೆ ಬಂದ ಕೆಎಲ್ ರಾಹುಲ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಇದೇ ಹಂತದಲ್ಲಿ ಕ್ರೀಸ್ ನಲ್ಲಿದ್ದ ಆರ್ ಅಶ್ವಿನ್ 8 ರನ್ ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ರಾಹುಲ್ ಜೊತೆ ಗೂಡಿದ ಶಾರ್ದೂಲ್ ಠಾಕೂರ್ 24 ರನ್ ಗಳಿಸಿ ಭಾರತದ ಇನ್ನಿಂಗ್ಸ್ ಗೆ ಜೀವ ತುಂಬಿದರಾದರೂ ಅವರೂ ಕೂಡ ರಬಾಡಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಜಸ್ ಪ್ರೀತ್ ಬುಮ್ರಾ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಮಳೆ ಬಂದ ಕಾರಣ ಆಟ ಸ್ಥಗಿತವಾಯಿತು. ಅಂತಿಮವಾಗಿ ಭಾರತ 59 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 208 ಗಳಿಸಿತು.

ದಕ್ಷಿಣ ಆಫ್ರಿಕಾ ಪರ ಕಾಗಿಸೋ ರಬಾಡಾ 5 ವಿಕೆಟ್ ಕಬಳಿಸಿದರೆ, ನಂಡ್ರೆ ಬರ್ಗರ್ 2 ಮತ್ತು ಮಾರ್ಕೋ ಜೇನ್ಸನ್ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com