2ನೇ ಟೆಸ್ಟ್: ಜಡೇಜಾ ಮಾರಕ ಬೌಲಿಂಗ್: ಕೇವಲ 113 ರನ್ ಗಳಿಗೆ ಆಸಿಸ್ ಪಡೆ ಆಲೌಟ್, ಭಾರತಕ್ಕೆ ಗೆಲ್ಲಲು 115 ರನ್ ಗುರಿ

ದೆಹಲಿಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತದ ಮಾರಕ ಬೌಲಿಂಗ್ ಪತರಗುಟ್ಟಿರುವ ಆಸ್ಟ್ರೇಲಿಯಾ ತಂಡ ಕೇವಲ 113ರನ್ ಗಳಿಗೆ ಆಲೌಟ್ ಆಗಿದ್ದು ಆ ಮೂಲಕ ಭಾರತಕ್ಕೆ ಗೆಲ್ಲಲು 115 ರನ್ ಸಮಾನ್ಯ ಗುರಿ ನೀಡಿದೆ.
ಜಡೇಜಾ ಮಾರಕ ಬೌಲಿಂಗ್
ಜಡೇಜಾ ಮಾರಕ ಬೌಲಿಂಗ್

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭಾರತದ ಮಾರಕ ಬೌಲಿಂಗ್ ಪತರಗುಟ್ಟಿರುವ ಆಸ್ಟ್ರೇಲಿಯಾ ತಂಡ ಕೇವಲ 113ರನ್ ಗಳಿಗೆ ಆಲೌಟ್ ಆಗಿದ್ದು ಆ ಮೂಲಕ ಭಾರತಕ್ಕೆ ಗೆಲ್ಲಲು 115 ರನ್ ಸಮಾನ್ಯ ಗುರಿ ನೀಡಿದೆ.

ಮೊದಲ ಇನ್ನಿಂಗ್ಸ್ ನಲ್ಲಿ 1ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಆಸ್ಟೇಲಿಯಾ ತಂಡ ನಿನ್ನೆ ಎರಡನೇ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 61 ರನ್ ಪೇರಿಸಿತ್ತು. ಇಂದು 3ನೇ ದಿನದಾಟ ಆರಂಭವಾದ ಬಳಿಕ ಭಾರತ ರವೀಂದ್ರ ಜಡೇಜಾ ಅವರ ಮಾರಕ ಬೌಲಿಂಗ್ ಗೆ ತತ್ತರಿಸಿದ ಆಸ್ಟ್ರೇಲಿಯಾ ಕೇವಲ 113 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಭಾರತಕ್ಕೆ 2ನೇ ಟೆಸ್ಟ್ ಗೆಲ್ಲಲು 115 ರನ್ ಗಳ ಗುರಿ ನೀಡಿದೆ.

2ನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ರವೀಂದ್ರ ಜಡೇಜಾ 7 ವಿಕೆಟ್ ಪಡೆದು ಮಿಂಚಿದರೆ, ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದು ಆಸಿಸ್ ಪತನಕ್ಕೆ ಕಾರಣರಾದರು. ಆಸ್ಟ್ರೇಲಿಯಾ ಪರ ಹೆಡ್ (43 ರನ್) ಮತ್ತು ಲಾಬುಶ್ಚಾಗ್ನೆ (36ರನ್) ಹೊರತು ಪಡಿಸಿದರೆ ಇನ್ನಾವ ಆಟಗಾರರೂ ಎರಡಂಕಿ ಮೊತ್ತ ದಾಟಲಿಲ್ಲ. 4 ಮಂದಿ ಬ್ಯಾಟರ್ ಗಳು ಶೂನ್ಯ ಸುತ್ತಿದ್ದು ಆಸಿಸ್ ಗೆ ಮಾರಕವಾಗಿ ಪರಿಣಮಿಸಿತು.

ಭಾರತಕ್ಕೆ ಆರಂಭಿಕ ಆಘಾತ
ಇನ್ನು ಆಸ್ಟ್ರೇಲಿಯಾ ನೀಡಿರುವ 115ರನ್ ಗಳ ಗುರಿ ಬೆನ್ನು ಹತ್ತಿರುವ ಭಾರತಕ್ಕೂ ಆರಂಭಿಕ ಆಘಾತ ಎದುರಾಗಿದ್ದು, 1 ರನ್ ಗಳಿಸಿದ್ದ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿದ್ದಾರೆ. ಇದೀಗ ಪೂಜಾರ ಮತ್ತು ರೋಹಿತ್ ಶರ್ಮಾ ಕ್ರೀಸ್ ನಲ್ಲಿದ್ದು, ಇತ್ತೀಚಿನ ವರದಿ ಬಂದಾಗ ಭಾರತ 1 ವಿಕೆಟ್ ನಷ್ಟಕ್ಕೆ  6ರನ್ ಗಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com