ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಚೇತನ್ ಶರ್ಮಾ ಮರು ನೇಮಕ

ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ತೋರಿದ ನಂತರ ಇಡೀ ಆಯ್ಕೆ ಮಂಡಳಿಯನ್ನೇ ವಿಸರ್ಜನೆ ಮಾಡಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), ಎರಡು ತಿಂಗಳ ನಂತರ ನೂತನ ಆಯ್ಕೆ ಸಮಿತಿಯನ್ನು...
ಚೇತನ್ ಶರ್ಮಾ
ಚೇತನ್ ಶರ್ಮಾ

ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ತೋರಿದ ನಂತರ ಇಡೀ ಆಯ್ಕೆ ಮಂಡಳಿಯನ್ನೇ ವಿಸರ್ಜನೆ ಮಾಡಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ), ಎರಡು ತಿಂಗಳ ನಂತರ ನೂತನ ಆಯ್ಕೆ ಸಮಿತಿಯನ್ನು ಪ್ರಕಟಿಸಿದ್ದು, ಹಿರಿಯರ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಶನಿವಾರ ಚೇತನ್ ಶರ್ಮಾ ಅವರನ್ನು ಮರು ನೇಮಕ ಮಾಡಿದೆ.

ಹೊಸ ಆಯ್ಕೆ ಸಮಿತಿಯಲ್ಲಿ ಚೇತನ್ ಶರ್ಮಾ ಮಾತ್ರ ಹಳೆಯ ಮುಖವಾಗಿದ್ದು, ಉಳಿದ ನಾಲ್ವರು ಮೊದಲ ಬಾರಿಗೆ ಹಿರಿಯ ಆಯ್ಕೆ ಸಮಿತಿಯ ಭಾಗವಾಗಲಿದ್ದಾರೆ.

ಚೇತನ್ ಅವರ ಹೊಸ ತಂಡವು ಸಂಪೂರ್ಣವಾಗಿ ಹೊಸ ಮುಖಗಳನ್ನು ಹೊಂದಿದ್ದು, ದಕ್ಷಿಣ ವಲಯದ ಆಯ್ಕೆಗಾರರ ಎಸ್ ಶರತ್‌ ಅವರಿಗೆ ಬಡ್ತಿ ನೀಡಲಾಗಿದೆ.

ಪ್ಯಾನೆಲ್‌ನಲ್ಲಿರುವ ಇತರರೆಂದರೆ ಪೂರ್ವ ವಲಯದಿಂದ ಸುಬ್ರೋತೊ ಬ್ಯಾನರ್ಜಿ, ಪಶ್ಚಿಮ ವಲಯದಿಂದ ಸಲೀಲ್ ಅಂಕೋಲಾ ಮತ್ತು ಕೇಂದ್ರ ವಲಯದಿಂದ ಟೆಸ್ಟ್ ಆರಂಭಿಕ ಆಟಗಾರ ಶಿವಸುಂದರ್ ದಾಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಬಿಸಿಸಿಐ ಹೊಸ ಆಯ್ಕೆ ಸಮಿತಿಗಾಗಿ ನವೆಂಬರ್ 18, 2022 ರಂದು ಅರ್ಜಿ ಆಹ್ವಾನಿಸಿದ ನಂತರ ಐದು ಪೋಸ್ಟ್‌ಗಳಿಗೆ ಸುಮಾರು 600 ಅರ್ಜಿಗಳು ಬಂದಿದ್ದವು" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com