ಭಾರತ ಕ್ರಿಕೆಟ್ ತಂಡದ ಉಪ ನಾಯಕ, ಬಲಗೈ ಬ್ಯಾಟ್ಸ್ ಮ್ಯಾನ್ ಕೆ ಎಲ್ ರಾಹುಲ್ ಮನೆಯಲ್ಲೀಗ ಮದುವೆ ತಯಾರಿ ಸಂಭ್ರಮ. ಇದೇ ಜನವರಿ 23ರಂದು ತನ್ನ ದೀರ್ಘಕಾಲದ ಸ್ನೇಹಿತೆ ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜೊತೆ ವಿವಾಹ ಬಂಧನಕ್ಕೊಳಗಾಗಲಿದ್ದಾರೆ.
ಈಗಾಗಲೇ ಕೆ ಎಲ್ ರಾಹುಲ್ ಅವರ ಮುಂಬೈ ನಿವಾಸದಲ್ಲಿ ಮದುವೆ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ರಾಹುಲ್ ಅವರ ನಿವಾಸಕ್ಕೆ ತೂಗುವ ಬಿಳಿ ಬಣ್ಣದ ದೀಪಗಳನ್ನು ನೇತಾಡಿಸಲಾಗಿದೆ. ಮುಂಬೈಯ ಖಂಡಾಲದಲ್ಲಿರುವ ಅಥಿಯಾ ಶೆಟ್ಟಿ ತಂದೆ ಸುನಿಲ್ ಶೆಟ್ಟಿ ಫಾರ್ಮ್ ಹೌಸ್ ನಲ್ಲಿ ವಿವಾಹ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ವಿವಾಹಕ್ಕೆ ಮುನ್ನ ಸಂಗೀತ ಮತ್ತು ಮೆಹಂದಿ ಕಾರ್ಯಕ್ರಮಗಳು ಜನವರಿ 21ರಂದು ಆರಂಭವಾಗಲಿದೆ. ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಭಾಗಿಯಾಗಲಿದ್ದಾರೆ. ಆರಂಭದಲ್ಲಿ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಎಲ್ಲಿಯೂ ಬಹಿರಂಗಪಡಿಸದ ಈ ಜೋಡಿ 2021ರಲ್ಲಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು.
Advertisement