26 ಇನ್ನಿಂಗ್ಸ್ ನಲ್ಲಿ ಗರಿಷ್ಠ ರನ್; ಪಾಕಿಸ್ತಾನದ ಬಾಬರ್​ ಅಜಂ ದಾಖಲೆ ಮುರಿದ ಭಾರತದ ಶುಭ್‌ಮನ್‌ ಗಿಲ್!

ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಾಡುತ್ತಿರುವ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಶುಭ್ ಮನ್ ಗಿಲ್ ಅರೂಪದ ದಾಖಲೆಯೊಂದನ್ನು ನಿರ್ಮಿಸಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂರ ಅಪರೂಪದ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಶುಭ್ ಮನ್ ಗಿಲ್
ಶುಭ್ ಮನ್ ಗಿಲ್

ಬಾರ್ಬಡೋಸ್: ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಾಡುತ್ತಿರುವ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಶುಭ್ ಮನ್ ಗಿಲ್ ಅರೂಪದ ದಾಖಲೆಯೊಂದನ್ನು ನಿರ್ಮಿಸಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂರ ಅಪರೂಪದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಬಾರ್ಬೋಡಾಸ್ ನಲ್ಲಿ ನಡೆದ 2ನೇ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಗಿಲ್ 34 ರನ್ ಗಳ ಅಟವಾಡಿದ್ದರು. ಈ ಪಂದ್ಯದಲ್ಲಿ ಭಾರತ ಕೇವಲ 181 ರನ್ ಗಳಿಸಿ 6 ವಿಕೆಟ್ ಗಳ ಅಂತರದಲ್ಲಿ ವಿಂಡೀಸ್ ವಿರುದ್ಧ ಮುಖಭಂಗ ಅನುಭವಿಸಿತ್ತು. ಆದರೂ ಈ ಪಂದ್ಯದಲ್ಲಿ ಗಿಲ್ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂರ ಅಪರೂಪದ ದಾಖಲೆಯನ್ನು ಹಿಂದಿಕ್ಕಿದ್ದು, ಕಡಿಮೆ ಇನ್ನಿಂಗ್ಸ್ ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕೇವಲ 26 ಏಕದಿನ ಇನ್ನಿಂಗ್ಸ್ ನಲ್ಲಿ ಶುಭ್ ಮನ್ ಗಿಲ್ 1352 ರನ್ ಗಳನ್ನು ಗಳಿಸಿದ್ದು ಈ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಇದೇ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದ ಬಾಬರ್ ಅಜಂ 26 ಇನ್ನಿಂಗ್ಸ್ ನಲ್ಲಿ 1322 ರನ್ ಗಳ ಮೂಲಕ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಾಬರ್​ ನಂತರ ಜೊನಾಥನ್ ಟ್ರಾಟ್ (1303 ರನ್), ಫಾಖರ್ ಜಮಾನ್ (1275 ರನ್) ಮತ್ತು ರಾಸ್ಸೀ ವ್ಯಾನ್ ಡೆರ್ ದುಸ್ಸೆನ್ (1267 ರನ್) ಇದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 2500 ರನ್​ ಪೂರೈಸಿದ ಗಿಲ್​​: 
ಮೂರು ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿರುವ ಗಿಲ್​ 2,500 ರನ್​ ಗಡಿಯನ್ನು ವಿಂಡೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ದಾಟಿದ್ದಾರೆ. ಟೆಸ್ಟ್​ನಲ್ಲಿ 18 ಪಂದ್ಯದಲ್ಲಿ 33 ಇನ್ನಿಂಗ್ಸ್​ ಆಡಿರುವ ಅವರು ಎರಡು ಶತಕಸಹಿತ 966 ರನ್​ ಗಳಿಸಿದ್ದ, 26 ಏಕದಿನ ಇನ್ನಿಂಗ್ಸ್​ನಿಂದ 1352 ರನ್​ ಕಲೆಹಾಕಿದ್ದಾರೆ. ಇನ್ನು ಟಿ20 ಮಾದರಿಯಲ್ಲಿ 6 ಇನ್ನಿಂಗ್ಸ್​​ನಿಂದ ಒಂದು ಶತಕ ಸಹಿತ 202 ರನ್​ ಗಳಿಸಿದ್ದಾರೆ. ಒಟ್ಟಾರೆ ಮೂರು ಮಾದರಿಯಿಂದ 2,520 ರನ್​ ಗಳಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com