ಐಪಿಎಲ್ ಇತಿಹಾಸದಲ್ಲೇ ಅತೀ ದೊಡ್ಡ ಹೀನಾಯ ಸೋಲು ದಾಖಲಿಸಿದ ರಾಜಸ್ಥಾನ ರಾಯಲ್ಸ್

ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ ಆರ್ ಸಿಬಿ ವಿರುದ್ಧ ಹೀನಾಯ ಸೋಲು ದಾಖಲಿಸಿದ್ದು, ಆ ಮೂಲಕ ಐಪಿಎಲ್ ಇತಿಹಾಸದ ಕಳಪೆ ದಾಖಲೆ ನಿರ್ಮಿಸಿದೆ.
ಆರ್ ಆರ್ ಗೆ ಹೀನಾಯ ಸೋಲು
ಆರ್ ಆರ್ ಗೆ ಹೀನಾಯ ಸೋಲು

ಜೈಪುರ: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡ ಆರ್ ಸಿಬಿ ವಿರುದ್ಧ ಹೀನಾಯ ಸೋಲು ದಾಖಲಿಸಿದ್ದು, ಆ ಮೂಲಕ ಐಪಿಎಲ್ ಇತಿಹಾಸದ ಕಳಪೆ ದಾಖಲೆ ನಿರ್ಮಿಸಿದೆ.

ಜೈಪುರದಲ್ಲಿ ಇಂದು ನಡೆದ ಆರ್​ಸಿಬಿ ತಂಡದ ಘಾತಕ ಬೌಲಿಂಗ್​ ದಾಳಿಗೆ ತತ್ತರಿಸಿ ಹೋದ ರಾಜಸ್ತಾನ ರಾಯಲ್ಸ್ ತಂಡ ಕೇವಲ 59ರನ್ ಗಳಿಗೆ ಸರ್ವ ಸರ್ವಪತನ ಕಂಡಿದ್ದು, ರಾಜಸ್ಥಾನ​ ರಾಯಲ್ಸ್ ತಂಡ 112 ರನ್ ಗಳ ಅತ್ಯಂತ ಹೀನಾಯ ಸೋಲು ಕಂಡಿದೆ. 

ಜೈಪುರದ ಮಾನ್​ಸಿಂಗ್​ ಸವಾಯ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಭಾನುವಾರ ಮೊದಲ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ರಾಯಲ್​ ಚಾಜೆಂಜರ್ಸ್​ ಬೆಂಗಳೂರು ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 171 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್​ ಕೇವಲ 10.3 ಓವರ್​ಗಳಲ್ಲಿ 59 ರನ್​ಗೆ ಸರ್ವಪತನ ಕಂಡಿತು. ಗುರಿ ಬೆನ್ನಟಿದ ರಾಜಸ್ಥಾನ್​ ಪರ ಕೇವಲ ಎರಡು ಆಟಗಾರರು ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು. ಉಳಿದ ಎಲ್ಲರು ಒಂದಂಕಿಗೆ ಸೀಮಿತರಾದರು. ಇದರಲ್ಲಿ ನಾಲ್ಕು ಮಂದಿ ಶೂನ್ಯಕ್ಕೆ ಔಟಾದರು. ಅಂತಿಮವಾಗಿ ರಾಜಸ್ಥಾನ ತಂಡ 10.3 ಓವರ್ ನಲ್ಲಿ 59 ರನ್ ಗಳಿಗೆ ಸರ್ವಪತನವಾಯಿತು.

ಐಪಿಎಲ್ ಇತಿಹಾಸದಲ್ಲೇ ಅತೀ ದೊಡ್ಡ ಹೀನಾಯ ಸೋಲು
ಆರ್​ಸಿಬಿ ವಿರುದ್ಧ ರಾಜಸ್ಥಾನ್​ ತಂಡ ಐಪಿಎಲ್​ನಲ್ಲಿ ಬಾರಿಸಿದ ಎರಡನೇ ಅತಿ ಕಡಿಮೆ ಮೊತ್ತವಾಗಿದೆ. ಇದಕ್ಕೂ ಮುನ್ನ 2009ರಲ್ಲಿ ಕೇಪ್​ಟೌನ್​ನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ರಾಜಸ್ಥಾನ್​ 58 ರನ್​ಗೆ ಆಲೌಟ್​ ಆಗಿತ್ತು. ಐಪಿಎಲ್​ನಲ್ಲಿ ಅತಿ ಕಡಿಮೆ ರನ್​ಗೆ ಆಲೌಟ್​ ಆದ ದಾಖಲೆ ಆರ್​ಸಿಬಿ ತಂಡದ ಪರ ಇದೆ. 2017 ರಲ್ಲಿ ಕೆಕೆಆರ್​ ವಿರುದ್ಧ 49 ರನ್​ಗೆ ಆರ್​ಸಿಬಿ ಮಕಾಡೆ ಮಲಗಿತ್ತು. 

Lowest innings totals for RR
58 vs RCB, Cape Town, 2009
59 vs RCB, Jaipur, today
81 vs KKR, Kolkata, 2011
85 vs KKR, Sharjah, 2021

Lowest innings totals in the IPL
49 - RCB vs KKR, Kolkata, 2017
58 - RR vs RCB, Cape Town, 2009
59 - RR vs RCB, Jaipur, today
66 - DC vs MI, Delhi, 2017

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com