ಐಪಿಎಲ್ 2023 ಫೈನಲ್: ಬಿಗ್ ಸ್ಕ್ರೀನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರನ್ನರ್ ಅಪ್, ಅಭಿಮಾನಿಗಳ ಆಕ್ರೋಶ!
ಅಹ್ಮದಾಬಾದ್: ಐಪಿಎಲ್ 2023 ಫೈನಲ್ ಪಂದ್ಯಕ್ಕೆ ಮಳೆಕಾಟದ ನಡುವೆಯೇ ಆಯೋಜಕರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾದ ಘಟನೆ ನಡೆದಿದೆ.
ಹೌದು.. ಭಾರೀ ನಿರೀಕ್ಷೆ ಹುಟ್ಟಿಸಿದ ಗುಜರಾತ್-ಚೆನ್ನೈ ನಡುವಿನ ಫೈನಲ್ ಪಂದ್ಯಕ್ಕೆ ಮಳೆ ಎದುರಾಗಿ ಪಂದ್ಯ ನಾಳೆ ಮುಂದೂಡಿಕೆಯಾಗಿದೆ. ಈ ಆತಂಕದ ನಡುವೆಯೇ ಅಹ್ಮದಾಬಾದ್‌ನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿರುವ ಬಿಗ್ ಸ್ಕ್ರೀನ್ ಮೇಲೆ ಎಲ್ಲರೂ ಅಚ್ಚರಿಪಡುವಂಥ, ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ಎದುರಾಗುವಂತಹ ಬರಹವೊಂದು ಮೂಡಿಬಂದಿದೆ. “ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್’ ಎಂಬ 3 ಸಾಲು ದಿಢೀರನೇ ಪ್ರತ್ಯಕ್ಷವಾಗಿದ್ದು, ಇದರ ಚಿತ್ರವೀಗ ವೈರಲ್ ಆಗಿದೆ.
ಇದನ್ನೂ ಓದಿ: IPL–2023: ಸತತ ಮಳೆ; ಫೈನಲ್ ಪಂದ್ಯ ನಾಳೆಗೆ ಮುಂದೂಡಿಕೆ
ಕೆಲವೇ ಸೆಕೆಂಡ್ ಗಳಲ್ಲಿ ಈ ಬರಹ ಕಾಣಿಸಿಕೊಂಡಿದ್ದು, ಕೂಡಲೇ ಎಚ್ಚೆತ್ತ ಆಯೋಜಕರು ತಾಂತ್ರಿಕ ದೋಷ ಸರಿಪಡಿಸಿದ್ದಾರೆ. ತಾಂತ್ರಿಕ ದೋಷದಿಂದ ಇದು ಎದುರಾಗಿತ್ತಾದರೂ ಆಯೋಜಕರ ಎಡವಟ್ಟು ಸಿಎಸ್ ಕೆ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದೆ.
ಫೈನಲ್ ಪಂದ್ಯದ ಮೇಲೆ ಫಿಕ್ಸಿಂಗ್ ಆರೋಪ?
ಈ ಸಾಲುಗಳು ಉದ್ದೇಶಪೂರ್ವಕವಾಗಿದ್ದೇ.. 2023ರ ಐಪಿಎಲ್ ಫಿಕ್ಸ್ ಆಗಿದೆಯೇ? ಇಲ್ಲವಾದರೆ ದೈತ್ಯ ಪರದೆಯಲ್ಲಿ ಇಂಥ ಸಾಲು ಏಕೆ ಕಾಣಿಸಿಕೊಂಡಿತು? ಇದಕ್ಕೇನು ಕಾರಣ? ಹಾಲಿ ಚಾಂಪಿಯನ್ ಗುಜರಾತ್ ತಂಡ ಪ್ರಶಸ್ತಿ ಉಳಿಸಿಕೊಳ್ಳುವುದೇ? ಚೆನ್ನೈ ಫೈನಲ್‌ನಲ್ಲಿ ಸೋಲುವುದೇ? ಇಂಥ ಹತ್ತಾರು ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳನ್ನು ಕಾಡತೊಡಗಿವೆ.
ಬಿಗ್ ಫೈನಲ್‌ಗೂ ಮುನ್ನ “ಸ್ಕ್ರೀನ್ ಟೆಸ್ಟ್’ ನಡೆಸುವಾಗ ಈ ಬರಹ ಕಂಡುಬಂದಿತ್ತು. “ಸಿನೆಮಾದ ಟ್ರೇಲರ್ ಬದಲು ಕ್ಲೈಮ್ಯಾಕ್ಸನ್ನು ಅಲ್‌ಪೋಡ್ ಮಾಡಿದಂತಿದೆ’ ಎಂಬುದಾಗಿ ನೆಟ್ಟಿಗರು ಆಯೋಜಕರ ಕಾಲೆಳೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ