ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಸ್ವಾರ್ಥ: ಪಾಕ್ ಮಾಜಿ ಕ್ರಿಕೆಟಿಗ ಹಫೀಜ್ ಗೆ ನೆಟ್ಟಿಗರ ತರಾಟೆ!

ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನ ಬಳಿಕ ಭಾರತ ವಿಶ್ವಕಪ್-2023 ಟೂರ್ನಿಯ ಅಂಕಪಟ್ಟಿಯಲ್ಲಿ ಅಂಕಗಳನ್ನು ಹೆಚ್ಚಿಸಿಕೊಂಡಿದ್ದು, ಸುಭದ್ರ ಸ್ಥಿತಿಯಲ್ಲಿದೆ.
ಪಾಕ್ ಕ್ರಿಕೆಟಿಗ ಹಫೀಜ್- ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
ಪಾಕ್ ಕ್ರಿಕೆಟಿಗ ಹಫೀಜ್- ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)

ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನ ಬಳಿಕ ಭಾರತ ವಿಶ್ವಕಪ್-2023 ಟೂರ್ನಿಯ ಅಂಕಪಟ್ಟಿಯಲ್ಲಿ ಅಂಕಗಳನ್ನು ಹೆಚ್ಚಿಸಿಕೊಂಡಿದ್ದು, ಸುಭದ್ರ ಸ್ಥಿತಿಯಲ್ಲಿದೆ.
 
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 100 ರನ್ ಗಳಿಸುವ ಮೂಲಕ 49 ನೇ ಶತಕ ದಾಖಲಿಸಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದದಾರೆ. ವಿರಾಟ್ ಕೊಹ್ಲಿ ಸಾಧನೆಗೆ ಮೆಚ್ಚುಗೆ, ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದ್ದರೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಕೊಂಕು ಮಾತನಾಡಿ ನೆಟ್ಟಿಗರು, ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದನ್ನೂ ಓದಿ: Timed-out dismissal: ಯುದ್ಧದಲ್ಲಿದ್ದಂತೆ ಭಾಸವಾಯಿತು, ತಂಡವನ್ನು ಗೆಲ್ಲಿಸಲು ಏನು ಮಾಡಬೇಕೋ ಅದನ್ನು ಮಾಡಿದೆ- ಶಕೀಬ್ ಅಲ್ ಹಸನ್
 
ಕ್ರಿಕೆಟ್ ಶೋ ಒಂದರಲ್ಲಿ ವಿಶ್ಲೇಷಣೆ ಮಾಡುತ್ತಿದ್ದ ಹಫೀಜ್, ಕೊಹ್ಲಿ ಅವರ ಇನ್ನಿಂಗ್ಸ್ ನ್ನು "ಸ್ವಾರ್ಥ" ಎಂದು ಹೇಳಿದ್ದು, ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಹೋಲಿಕೆ ಮಾಡಿದ್ದಾರೆ. 

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಫೀಲ್ಡ್ ನಿರ್ಬಂಧಗಳನ್ನು ಉತ್ತಮವಾಗಿ ಬಳಸಿಕೊಂಡು ಶುಭ್ಮನ್ ಗಿಲ್ ಅವರೊಂದಿಗೆ ಉತ್ತಮವಾದ ಸ್ಥಿತಿ ನಿರ್ಮಿಸಿದರು. 

ಈ ಬಗ್ಗೆ ಮಾತನಾಡಿರುವ ಮೊಹಮ್ಮದ್ ಹಫೀಜ್, ಈ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ 3 ನೇ ಬಾರಿ ಸ್ವಾರ್ಥವನ್ನು ಕಂಡಿದ್ದೆನೆ ಎಂದು ಹೇಳಿದ್ದಾರೆ. 49 ನೇ ಓವರ್ ನಲ್ಲಿ ಅವರು 100 ರನ್ ಗಳಿಸುವುದಕ್ಕಾಗಿ ಸಿಂಗಲ್ ರನ್ ಪಡೆಯುವತ್ತ ಗಮನ ಹರಿಸಿದ್ದರು. ಅವರು ತಂಡವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಲಿಲ್ಲ ಎಂದು ಹೇಳಿದ್ದಾರೆ.

ರೋಹಿತ್ ಶರ್ಮಾ ಸಹ ಸ್ವಾರ್ಥದ ಕ್ರಿಕೆಟ್ ನ್ನಾಡಬಹುದಿತ್ತು. ಆದರೆ ಅವರು ಹಾಗೆ ಮಾಡದೇ ತಮಗಾಗಿ ಪಂದ್ಯವನ್ನಾಡದೇ ಟೀಂ ಇಂಡಿಯಾಗಾಗಿ ಪಂದ್ಯವನ್ನಾಡಿದರು. ಅದರ ಕೀರ್ತಿ ರೋಹಿತ್ ಶರ್ಮಾ ಗೆ ಸಲ್ಲಿಸಬೇಕು. ಸರಿಯಾದ ಉದ್ದೇಶದಿಂದ ಅವರ ಇನ್ನಿಂಗ್ಸ್ ನ್ನು ತ್ಯಾಗ ಮಾಡಿದ ರೀತಿ ಮೊದಲ 6 ಓವರ್ ಗಳಲ್ಲಿ ಅವರ ಬ್ಯಾಟಿಂಗ್ ಶೈಲಿ ಶ್ಲಾಘನೀಯ ಎಂದಿರುವ ಹಫೀಜ್, ಪಿಚ್ ಕಠಿಣವಾಗುತ್ತಾ ಹೋಗುತ್ತದೆ, ಚೆಂಡು ಹೊಸದಾಗಿದ್ದಾಗ, ಕಠಿಣವಾಗಿದ್ದಾಗ ಆಕ್ರಮಣಕಾರಿಯಾಗಿರಬೇಕು ಎಂಬುದು ರೋಹಿತ್ ಗೆ ಚೆನ್ನಾಗಿ ತಿಳಿದಿತ್ತು. ನಿಮ್ಮ ತಂಡದ ನಾಯಕನೂ ನಿಮ್ಮಂತೆಯೇ ಆಡಬಹುದು ಆದರೆ ಅವರ ಉದ್ದೇಶ ವೈಯಕ್ತಿಕ ಸಾಧನೆಗಿಂತ ದೊಡ್ಡದು, ರೋಹಿತ್ ಸಹ ಶತಕಗಳನ್ನು ದಾಖಲಿಸಬಲ್ಲರು ಎಂದು ಹಫೀಜ್ ಅಭಿಪ್ರಾಯಪಟ್ಟಿದ್ದಾರೆ.

ನಾನು ಕೊಹ್ಲಿ ಚೆನ್ನಾಗಿ ಆಡಲಿಲ್ಲ ಎಂದು ಹೇಳುತ್ತಿಲ್ಲ. 97 ರನ್ ಗಳಿಸುವವರೆಗೆ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ಆದರೆ ಕೊನೆಯ 3 ಸಿಂಗಲ್ ರನ್ ಗಳನ್ನು ಪಡೆಯುವಾಗಿನ ಅವರ ಉದ್ದೇಶದ ಬಗ್ಗೆ ಮಾತನಾಡುತ್ತಿದ್ದೇನೆ. ಬೌಂಡರಿ ದಾಖಲಿಸದೇ ಸಿಂಗಲ್ ರನ್ ಗಾಗಿ ಎದುರು ನೋಡುತ್ತಿದ್ದರು. ಒಂದು ವೇಳೆ ಅವರು 97, 99 ರನ್ ಗಳಿಗೆ ಅವರು ಔಟ್ ಆದರೆ ಯಾರು ತಲೆಕೆಡಿಸಿಕೊಳ್ಳುತ್ತಾರೆ? ವೈಯಕ್ತಿಕ ಸಾಧನೆಗಿಂತ ತಂಡ ಆದ್ಯತೆಯಾಗಿರಬೇಕು ಎಂದು ಹಫೀಜ್ ಹೇಳಿದ್ದಾರೆ.

ಆದರೆ ಹಫೀಜ್ ಅವರ ಮಾತುಗಳನ್ನು ಅವರ ಸಹಕ್ರೀಡಾಪಟುಗಳಾಗಿದ್ದ ಪಾಕ್ ನ ಮಾಜಿ ಕ್ರಿಕೆಟಿಗರೇ ಒಪ್ಪಿಲ್ಲ! ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಹಾಬ್ ರಿಯಾಜ್ ಹಾಗೂ ರಶೀದ್ ಲತೀಫ್. ಒಬ್ಬೂಬ್ಬರ ಪಾತ್ರವೂ ಭಿನ್ನವಾಗಿರುತ್ತದೆ. ವಿರಾಟ್ ಅವರ ಪಾತ್ರ ಪಂದ್ಯವನ್ನು ಆಳಕ್ಕೆ ತೆಗೆದುಕೊಳ್ಳುವುದಾಗಿದೆ. ಕೊನೆಯ 8 ಓವರ್ ಗಳಲ್ಲಿ ಭಾರತ 75 ರನ್ ಗಳಿಸಿತ್ತು. ಸೂರ್ಯ ಹಾಗೂ ಜಡೇಜಾ ವೇಗಗತಿಯ ಆಟ ಪ್ರದರ್ಶಿಸಿದರು. ಆದರೆ ಕೊಹ್ಲಿ ತಾವು ಮತ್ತೊಂದು ಬದಿಯಲ್ಲಿರುವುದನ್ನು ಖಾತ್ರಿಪಡಿಸಿಕೊಂಡರು. ಒಂದು ವೇಳೆ ಕೊಹ್ಲಿ ವೇಗವಾಗಿ ಔಟ್ ಆಗಿದ್ದರೆ, ಭಾರತಕ್ಕೆ 300 ರನ್ ಗಳಿಸಲು ಸಾಧ್ಯವಾಗುತ್ತಿರಲಿಲ್ಲವೇನೋ ಎಂದು ರಿಯಾಜ್ ಅಭಿಪ್ರಾಯಪಟ್ಟಿದ್ದಾರೆ.

ನಾವು ತಂಡದಲ್ಲಿನ ಪಾತ್ರಗಳನ್ನು ಗುರುತಿಸಬೇಕು, ರೋಹಿತ್ ಹಾಗೂ ಶುಭ್ಮನ್ ಬಿರುಸಿನ ಬ್ಯಾಟಿಂಗ್ ಮಾಡುತ್ತಾರೆ. ಆ ಬಳಿಕ ವಿರಾಟ್ ಆ ಆವೇಗವನ್ನು ಕಾಯ್ದುಕೊಂಡು ಪಂದ್ಯವನ್ನು ಆಳವಾಗಿ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ರೋಹಿತ್ ಹಾಗೂ ಶುಭ್ಮನ್ ವೇಗವಾಗಿ ವಿಕೆಟ್ ಒಪ್ಪಿಸಿದರೆ, ಶ್ರೇಯಸ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಾರೆ. ಕೊಹ್ಲಿ, ಕೆಎಲ್ ರಾಹುಲ್ ವಿಕೆಟ್ ಕಾಯ್ದುಕೊಂಡು ದೀರ್ಘವಾದ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದರು ಎಂಬುದು ನಿಜ ಆದರೆ ಹಾಗೆ ಮಾಡದೇ ಇದ್ದಲ್ಲಿ ಭಾರತ 326 ರನ್ ಗಳ ಟಾರ್ಗೆಟ್ ನ್ನು ಎದುರಾಳಿ ತಂಡಕ್ಕೆ ನೀಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಲತೀಫ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com