ಐಸಿಸಿ ಏಕದಿನ ಕ್ರಿಕೆಟ್: ಲಂಕಾ ವಿರುದ್ಧ ಕಿವೀಸ್ ಗೆ ಐದು ವಿಕೆಟ್ ಗಳ ಜಯ, ಸೆಮಿಫೈನಲ್ ನಲ್ಲಿ ಭಾರತಕ್ಕೆ ಎದುರಾಳಿ ಸಾಧ್ಯತೆ!

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿಯ 41 ನೇ ಪಂದ್ಯದಲ್ಲಿ ಲಂಕಾ ವಿರುದ್ಧ ನ್ಯೂಜಿಲೆಂಡ್ ಐದು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. 
ನ್ಯೂಜಿಲೆಂಡ್ ತಂಡದ ಆಟಗಾರರು
ನ್ಯೂಜಿಲೆಂಡ್ ತಂಡದ ಆಟಗಾರರು

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿಯ 41 ನೇ ಪಂದ್ಯದಲ್ಲಿ ಲಂಕಾ ವಿರುದ್ಧ ನ್ಯೂಜಿಲೆಂಡ್ ಐದು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಸೆಮಿಫೈನಲ್ ಸ್ಥಾನವನ್ನು ಬಹುತೇಕವಾಗಿ ಭದ್ರಪಡಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ಕುಶಾಲ್ ಪೆರೆರಾ ಅವರ ಅರ್ಧಶತಕದ ನೆರವಿನಿಂದ 46.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 171 ರನ್ ಗಳಿಸಲಷ್ಟೇ ಶಕ್ತವಾಯಿತು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 3 ವಿಕೆಟ್ ಪಡೆದರೆ, ಲಕ್ಕಿ ಫರ್ಗ್ಯೂಸನ್, ಮಿಚೆಲ್ ಸಂತ್ನಾರ್, ರಚಿನ್ ರವೀಂದ್ರ 2, ಟಿಮ್ ಸೌಥಿ 1 ವಿಕೆಟ್ ಪಡೆದರು.

ಲಂಕಾ ನೀಡಿದ 172 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಡೆವೊನ್ ಕಾನ್ವೆ 45 ಮತ್ತು ರಚಿನ್ ರವೀಂದ್ರ  ಅವರ 42 ರನ್ ಗಳ ನೆರವಿನಿಂದ 23.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ನಿಗದಿತ ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

ಈ ಮೂಲಕ ಬಹುತೇಕವಾಗಿ ಸೆಮಿಫೈನಲ್ ಸ್ಥಾನ ಭದ್ರಪಡಿಸಿಕೊಂಡಿತು. ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್​ ತಂಡ ಭಾರತಕ್ಕೆ ಎದುರಾಳಿಯಾಗುವ ಸಾಧ್ಯತೆ ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com