ರೋಹಿತ್ ಶರ್ಮಾ ನಾಯಕತ್ವದ ಜೊತೆಗೆ ಆರಂಭಿಕನಾಗಿ ಅದ್ಬುತ ಬ್ಯಾಟಿಂಗ್: ರಾಹುಲ್ ದ್ರಾವಿಡ್ 

ರೋಹಿತ್ ಶರ್ಮಾ ಅವರ ನಾಯಕತ್ವದ ಜೊತೆಗೆ ಆರಂಭಿಕನಾಗಿ ಅದ್ಬುತ ಬ್ಯಾಟಿಂಗ್ ನಿಂದಾಗಿ ಈ ಬಾರಿಯ ವಿಶ್ವಕಪ್ ನಲ್ಲಿ ಭಾರತ ಎಂಟು ಪಂದ್ಯಗಳನ್ನು ಗೆದ್ದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಶನಿವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್
ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್

ಬೆಂಗಳೂರು: ರೋಹಿತ್ ಶರ್ಮಾ ಅವರ ನಾಯಕತ್ವದ ಜೊತೆಗೆ ಆರಂಭಿಕನಾಗಿ ಅದ್ಬುತ ಬ್ಯಾಟಿಂಗ್ ನಿಂದಾಗಿ ಈ ಬಾರಿಯ ವಿಶ್ವಕಪ್ ನಲ್ಲಿ ಭಾರತ ಎಂಟು ಪಂದ್ಯಗಳನ್ನು ಗೆದ್ದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಶನಿವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೋಹಿತ್ ಶರ್ಮಾ ಭಾರತ ತಂಡವನ್ನು ಮುಂಚೂಣಿಯಲ್ಲಿ ಮುನ್ನಡೆಸುತ್ತಿರುವಂತೆಯೇ, ಆರಂಭಿಕನಾಗಿ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ. ವಾಸ್ತವವಾಗಿ ಅವರು ಎಂಟು ಪಂದ್ಯಗಳಿಂದ 122 ಸ್ಟ್ರೈಕ್ ರೇಟ್‌ನಲ್ಲಿ 443 ರನ್‌ ಗಳಿಸಿದ್ದಾರೆ, ಇದು ಎದುರಾಳಿ ಬೌಲರ್‌ಗಳನ್ನು ಆರಂಭದಲ್ಲಿಯೇ ಮಬ್ಬುಗೊಳಿಸುತ್ತದೆ. 

ಭಾರತದ ಅಂತಿಮ ಲೀಗ್ ಪಂದ್ಯದ ಮುನ್ನಾ ದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್, ನಿಸ್ಸಂಶಯವಾಗಿ ರೋಹಿತ್ ಉತ್ತಮ ನಾಯಕ.  ಅವರು ಮೈದಾನದ ಒಳಗೆ ಮತ್ತು ಹೊರಗೆ ಎರಡೂ ಕಡೆ ಮಾದರಿಯೆಂಬಂತೆ ತಂಡವನ್ನು ಮುನ್ನಡೆಸಿದ್ದಾರೆ ಎಂದರು. 

ರೋಹಿತ್ ಅವರ ಬ್ಯಾಟಿಂಗ್ ವಿಧಾನ ನಮಗೆ ಕೆಲಸ ಸುಲಭ ಮಾಡಿದೆ. ಅಲ್ಲದೇ ಬಳಿಕ ಬರುವ ಬ್ಯಾಟರ್ ಗಳಿಗೂ ಅನುಕೂಲವಾಗುವಂತೆ ಮಾಡಿದೆ. ತಂಡದ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಳ್ಳುವ ಮೂಲಕ ರೋಹಿತ್ ಇತರರಿಗೆ ಮಾದರಿಯಾಗುತ್ತಾರೆ. ಇದು ಭಾರತೀಯ ಡ್ರೆಸ್ಸಿಂಗ್ ರೂಮ್ ನಲ್ಲಿ ಭಾರಿ ಪ್ರಭಾವವನ್ನು ಸೃಷ್ಟಿಸಿದೆ ಎಂದು ದ್ರಾವಿಡ್ ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com