ಭಾರತ-ಕಿವೀಸ್ ಸೆಮೀಸ್ ಪಂದ್ಯ: ರೂ.1.2 ಲಕ್ಷ ಮೌಲ್ಯದ ಕಾಂಪ್ಲಿಮೆಂಟರಿ ಟಿಕೆಟ್ ಹೊಂದಿದ್ದ ವ್ಯಕ್ತಿಯ ಬಂಧನ

ನಾಳೆ ನಡೆಯಲಿರುವ ಭಾರತ- ನ್ಯೂಜಿಲೆಂಡ್ ನಡುವಣ ಸೆಮಿಫೈನಲ್ ಪಂದ್ಯದ ಎಲ್ಲಾ ಟಿಕೆಟ್ ಗಳು ಬಿಕರಿಯಾಗಿದ್ದು, ಬ್ಲಾಕ್ ಮಾರ್ಕೆಟ್ ನಲ್ಲಿ ಟಿಕೆಟ್ ಖರೀದಿ ಪ್ರಯತ್ನ ನಡೆಯುತ್ತಿದೆ.
ಕಿವೀಸ್, ಭಾರತೀಯ ಆಟಗಾರರ ಸಾಂದರ್ಭಿಕ ಚಿತ್ರ
ಕಿವೀಸ್, ಭಾರತೀಯ ಆಟಗಾರರ ಸಾಂದರ್ಭಿಕ ಚಿತ್ರ

ಮುಂಬೈ: ನಾಳೆ ನಡೆಯಲಿರುವ ಭಾರತ- ನ್ಯೂಜಿಲೆಂಡ್ ನಡುವಣ ಸೆಮಿಫೈನಲ್ ಪಂದ್ಯದ ಎಲ್ಲಾ ಟಿಕೆಟ್ ಗಳು ಬಿಕರಿಯಾಗಿದ್ದು, ಬ್ಲಾಕ್ ಮಾರ್ಕೆಟ್ ನಲ್ಲಿ ಟಿಕೆಟ್ ಖರೀದಿ ಪ್ರಯತ್ನ ನಡೆಯುತ್ತಿದೆ. ಈ ಕುರಿತ ಪ್ರಕರಣವೊಂದನ್ನು ತನಿಖೆ ನಡೆಸುತ್ತಿದ್ದ ಮುಂಬೈ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು,  ರೂ. 1.2 ಲಕ್ಷ ಮೌಲ್ಯದ ಕಾಂಪ್ಲಿಮೆಂಟರಿ ಟಿಕೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯ ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.ಜೆಜೆ ಮಾರ್ಗ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಯಿಂದ ಎರಡು ಟಿಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅವು ವಿಐಪಿ ವ್ಯಕ್ತಿಗಳು ಅಥವಾ ವಿಶೇಷ ಆಹ್ವಾನಿತರಿಗೆ ಮೀಸಲಾದ ತಲಾ 1.2 ಲಕ್ಷ ರೂಪಾಯಿ ಮೌಲ್ಯದ ಕಾಂಪ್ಲಿಮೆಂಟರಿ ಟಿಕೆಟ್‌ಗಳಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವಿಶ್ವಕಪ್ ಸೆಮಿಫೈನಲ್ ಪಂದ್ಯದ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟ ಮಾಡುತ್ತಿದ ಆರೋಪದ ಮೇಲೆ ಪೊಲೀಸರು ಈ ಹಿಂದೆ ಈವೆಂಟ್ ಆಯೋಜಕ ಆಕಾಶ್ ಕೊಠಾರಿಯನ್ನು ಬಂಧಿಸಿದ್ದರು. ಕೊಠಾರಿ ಮೂಲ ಬೆಲೆಗಿಂತ ನಾಲ್ಕೈದು ಪಟ್ಟು ಹೆಚ್ಚಿನ ಬೆಲೆಗೆ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮೊದಲು ತಿಳಿಸಿದ್ದಾರೆ.

ಕೊಠಾರಿ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿರುವಾಗ ಇತರ ಆರೋಪಿಗಳ ಬಗ್ಗೆ ಪೊಲೀಸರಿಗೆ ತಿಳಿದುಬಂದಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com