ವಿರಾಟ್ ಕೊಹ್ಲಿ ದಾಖಲೆಗಳು ಇನ್ನೂ ಮುಗಿದಿಲ್ಲ: ಸೌರವ್ ಗಂಗೂಲಿ, ರವಿಶಾಸ್ತ್ರೀ

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಏಕದಿನ ಕ್ರಿಕೆಟ್ ನಲ್ಲಿ 50 ನೇ ಶತಕ ದಾಖಲಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಅವರ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿಯ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಕೊಹ್ಲಿ, ಗಂಗೂಲಿ, ರವಿಶಾಸ್ತ್ರಿ
ಕೊಹ್ಲಿ, ಗಂಗೂಲಿ, ರವಿಶಾಸ್ತ್ರಿ

ಮುಂಬೈ:  ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಏಕದಿನ ಕ್ರಿಕೆಟ್ ನಲ್ಲಿ 50 ನೇ ಶತಕ ದಾಖಲಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಅವರ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿಯ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ವಿರಾಟ್ ಕೊಹ್ಲಿ ಶತಕ ಕುರಿತು  ಮಾತನಾಡಿದ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಅಂತಹ ದಾಖಲೆಯನ್ನು ಯಾರಾದರೂ ಮುರಿಯುತ್ತಾರೆ ಎಂಬುದು ನನಗೆ ತಿಳಿದಿಲ್ಲ. ವಿರಾಟ್ ಕೊಹ್ಲಿ ಆಟ ಇನ್ನೂ ಮುಗಿದಿಲ್ಲ. ಅವರಿಗೆ ಇನ್ನೂ ಕೇವಲ 35 ವರ್ಷ ಮತ್ತು ಅವರು ಭಾರತಕ್ಕಾಗಿ ಹೆಚ್ಚು ಆಡುತ್ತಾರೆ. ಇದು ಒಂದು ಅತ್ಯುತ್ತಮ ಸಾಧನೆಯಾಗಿದೆ ಎಂದು ಕೊಂಡಾಡಿದರು. 

ಇನ್ನೂ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ  ಭಾರತ ತಂಡದ  ಪ್ರದರ್ಶನದ ಕುರಿತು  ಮಾತನಾಡಿದ ಗಂಗೂಲಿ, ಈ ವಿಶ್ವಕಪ್‌ನಲ್ಲಿ ತಂಡ  ಅದ್ಬುತವಾಗಿ ಆಡಿದ್ದು, ನಾಳಿನ ಫೈನಲ್ ಪಂದ್ಯ ಆಡಲಿರುವ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಶುಭ ಕೋರುವುದಾಗಿ ತಿಳಿಸಿದರು. 

ಮತ್ತೊಂದೆಡೆ ಮಾತನಾಡಿದ ಮಾಜಿ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಮುಂದಿನ 10 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ ಮತ್ತೆ500 ರನ್ ಗಳಿಸುವ ಸಾಧ್ಯತೆಯಿದ್ದು, ಸಚಿನ್ ಅವರ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಭರವಸೆ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com