ICC Cricket World Cup 2023 Final: 'ಭಾವನಾತ್ಮಕವಾಗಿ ದೊಡ್ಡ ಪಂದ್ಯ, ಕೋಚ್ ದ್ರಾವಿಡ್ ಗಾಗಿ ಗೆಲ್ಲಬೇಕು': ನಾಯಕ ರೋಹಿತ್ ಶರ್ಮಾ

ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಭಾವನಾತ್ಮಕವಾಗಿ ದೊಡ್ಡ ಪಂದ್ಯವಾಗಿದ್ದು, ನಮ್ಮ ಕೋಚ್ ರಾಹುಲ್ ದ್ರಾವಿಡ್ ಗಾಗಿ ನಾವು ಇದನ್ನು ಗೆಲ್ಲಬೇಕಿದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ದ್ರಾವಿಡ್ ಮತ್ತು ರೋಹಿತ್ ಶರ್ಮಾ
ದ್ರಾವಿಡ್ ಮತ್ತು ರೋಹಿತ್ ಶರ್ಮಾ
Updated on

ಅಹ್ಮದಾಬಾದ್: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಭಾವನಾತ್ಮಕವಾಗಿ ದೊಡ್ಡ ಪಂದ್ಯವಾಗಿದ್ದು, ನಮ್ಮ ಕೋಚ್ ರಾಹುಲ್ ದ್ರಾವಿಡ್ ಗಾಗಿ ನಾವು ಇದನ್ನು ಗೆಲ್ಲಬೇಕಿದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

2011ರಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಾಗಿ ಟೀಮ್ ಇಂಡಿಯಾ ವಿಶ್ವಕಪ್ ಜಯಿಸಿತ್ತು. ಈ ಬಾರಿ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗಾಗಿ ವಿಶ್ವಕಪ್ ಗೆಲ್ಲಬೇಕು ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಕನ್ನಡಿಗ ದ್ರಾವಿಡ್ ಅವರಿಗೆ ಭಾರತಕ್ಕಾಗಿ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. 2007ರಲ್ಲಿ ದ್ರಾವಿಡ್ ನಾಯಕತ್ವದಲ್ಲಿ ಭಾರತ ಹೀನಾಯ ಸೋಲು ಕಂಡಿತ್ತು. ಈಗ ಟೀಮ್ ಇಂಡಿಯಾದ ಮುಖ್ಯ ತರಬೇತುದಾರನ ಕರ್ತವ್ಯ ಅಚ್ಚುಕಟ್ಟಾಗಿ ನಿಭಾಯಿಸಿರುವ ದ್ರಾವಿಡ್, ತಂಡವನ್ನು ಫೈನಲ್‌ನತ್ತ ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯಕ್ಕೂ ನಡೆದ ಸುದ್ದಿಗೋಷ್ಠಿಯಲ್ಲೂ ನಾಯಕ ರೋಹಿತ್ ಶರ್ಮಾ ಇದನ್ನೇ ಪ್ರತಿಪಾದಿಸಿದ್ದಾರೆ. 

ಪ್ರತಿಯೊಬ್ಬ ಆಟಗಾರನಿಗೂ ನಿರ್ದಿಷ್ಟ ಜವಾಬ್ದಾರಿ ನೀಡುವ ಕುರಿತಂತೆ ತಂಡದಲ್ಲಿ ಕೋಚ್ ರಾಹುಲ್ ಪಾತ್ರ ಅತ್ಯಂತ ಮಹತ್ವದೆನಿಸಿದೆ. ನಾನು ಆಲೋಚಿಸುವ ಎಲ್ಲ ವಿಚಾರಗಳಿಗೆ ಕೋಚ್ ಒಪ್ಪಬೇಕೆಂದಿಲ್ಲ. ಆದರೆ ನನ್ನ ನಿರ್ಧಾರವನ್ನು ಒಪ್ಪಿಕೊಂಡು ನನಗೆ ಸ್ವಾತಂತ್ರ್ಯವನ್ನು ನೀಡಿರುವುದು ಅವರ ದೊಡ್ಡಗುಣಕ್ಕೆ ಸಾಕ್ಷಿಯಾಗಿದೆ ಎಂದು ಹೊಗಳಿದ್ದಾರೆ. ಕಷ್ಟದ ಸಮಯದಲ್ಲಿ ದ್ರಾವಿಡ್ ಸದಾ ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ವರ್ಷ ಟ್ವೆಂಟಿ-20 ವಿಶ್ವಕಪ್‌ ಸೆಮಿಫೈನಲ್ ಸೋಲಿನ ಬಳಿಕವಂತೂ ಆಟಗಾರರಿಗೆ ನೆರವಾಗಿದ್ದರು. ಭಾರತ ಕ್ರಿಕೆಟ್ ತಂಡಕ್ಕೆ ದ್ರಾವಿಡ್ ನೀಡಿರುವ ಕೊಡುಗೆ ಅಪಾರ. ಈಗ ದ್ರಾವಿಡ್ ಅವರಿಗಾಗಿ ನಾವು ಈ ವಿಶ್ವಕಪ್ ಗೆಲ್ಲಬೇಕಿದೆ ಎಂದು ಹೇಳಿದ್ದಾರೆ. 

ಭಾವನಾತ್ಮಕವಾಗಿ ದೊಡ್ಡ ಪಂದ್ಯ
ಇದೇ ವೇಳೆ ಟೀಮ್ ಇಂಡಿಯಾದಿಂದ ದೊಡ್ಡ ನಿರೀಕ್ಷೆಗಳಿವೆ. ಪಂದ್ಯದ ಸಮಯದಲ್ಲಿ ಆಟಗಾರರು ಗಮನಹರಿಸುವುದು ಮುಖ್ಯವಾಗಿದೆ. 50 ಓವರ್‌ಗಳ ಫಾರ್ಮ್ಯಾಟ್ ಕ್ರಿಕೆಟ್ ನೋಡುತ್ತಾ ಬೆಳೆದಿದ್ದರಿಂದ ವಿಶ್ವಕಪ್‌ನ ಅಂತಿಮ ಪಂದ್ಯವನ್ನು ಆಡುವುದು ಅವರಿಗೆ ದೊಡ್ಡ ವಿಷಯವಾಗಿದೆ. ಭಾವನಾತ್ಮಕವಾಗಿ ನೋಡಿ ಇದು ದೊಡ್ಡ ಆಟವಾಗಿದೆ. ದೊಡ್ಡ ನಿರೀಕ್ಷೆಗಳಿವೆ. ಆಟಗಾರನಾಗಿ, ನಾವು ಗಮನವನ್ನು ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಸಂದರ್ಭದ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ ಅದು ನಿಮ್ಮ ಮನಸ್ಸಿನಲ್ಲಿ ಉಳಿದಿದೆ, ನಾವು ಮರೆಮಾಡಲು ಸಾಧ್ಯವಿಲ್ಲ. ಅದರಿಂದ. ನನಗೆ ಇದು ಅತ್ಯಂತ ದೊಡ್ಡ ಕ್ಷಣವಾಗಿದೆ. ನಾನು ಏಕದಿನ ಕ್ರಿಕೆಟ್ ನೋಡುತ್ತಾ ಬೆಳೆದಿದ್ದೇನೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

"ಇದು ಉತ್ತಮ ಫೈನಲ್ ಆಗಲಿದೆ. ಎರಡೂ ತಂಡಗಳು ತಲುಪಿವೆ ಮತ್ತು ಫೈನಲ್‌ಗೆ ಅರ್ಹವಾಗಿವೆ. ಮೈದಾನದಲ್ಲಿ ಸಹ ನಾವು ಒತ್ತಡದಲ್ಲಿದ್ದಾಗ ನಾವು ಶಾಂತವಾಗಿರುತ್ತೇವೆ. ನಾವು ಈ ದಿನಕ್ಕಾಗಿ ಸಾಕಷ್ಟು ಮುಂಚಿತವಾಗಿ ತಯಾರಿ ನಡೆಸಿದ್ದೇವೆ. ನಾವು T20 ವಿಶ್ವಕಪ್ ಮತ್ತು WTC ಫೈನಲ್‌ನಲ್ಲಿ ಆಡಿದ್ದೇವೆ. ಎಲ್ಲಾ ಮೂರು ಸ್ವರೂಪಗಳಲ್ಲಿ, ನಾವು ಸರಿಯಾದ ಆಟಗಾರರನ್ನು ಆಯ್ಕೆ ಮಾಡಲು ಬಯಸಿದ್ದೇವೆ. ನಾವು ಕಳೆದ ಎರಡೂವರೆ ವರ್ಷಗಳಿಂದ ಇದನ್ನು ಮಾಡುತ್ತಿದ್ದೇವೆ. ನಾವು ಎಲ್ಲರಿಗೂ ತಮ್ಮ ಪಾತ್ರದ ಸ್ಪಷ್ಟತೆ ನೀಡಿದ್ದೇವೆ. ಇದು ನಮಗೆ ಬಹಳಷ್ಟು ಸಹಾಯ ಮಾಡಿದೆ. ಇದೆಲ್ಲವೂ ಇಲ್ಲಿಯವರೆಗೆ ನಮಗೆ ಸಹಾಯ ಮಾಡಿದೆ ಮತ್ತು ನಾವು ಫೈನಲ್‌ನಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಅವರು ಹೇಳಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com