ವಿಶ್ವಕಪ್ ಗೆಲ್ಲದಿದ್ದರೂ ಹೃದಯ ಗೆದ್ದಿದ್ದೀರಿ, ಯಾವಾಗಲೂ ನಿಮ್ಮೊಂದಿಗಿದ್ದೇವೆ: ಫೈನಲ್ ಸೋತ ಭಾರತ ತಂಡಕ್ಕೆ ಪ್ರಧಾನಿ ಮೋದಿ ಸಾಂತ್ವನ

ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ನಲ್ಲಿ ಸೋತ ಭಾರತ ತಂಡದ ಪರವಾಗಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವಕಪ್ ಗೆಲ್ಲದಿದ್ದರೂ ಹೃದಯ ಗೆದ್ದಿದ್ದೀರಿ, ಯಾವಾಗಲೂ ನಿಮ್ಮೊಂದಿಗಿದ್ದೇವೆ ಎಂದು ಸಂತೈಸಿದ್ದಾರೆ.
ಫೈನಲ್ ಸೋತ ಭಾರತ ತಂಡಕ್ಕೆ ಪ್ರಧಾನಿ ಮೋದಿ ಸಾಂತ್ವನ
ಫೈನಲ್ ಸೋತ ಭಾರತ ತಂಡಕ್ಕೆ ಪ್ರಧಾನಿ ಮೋದಿ ಸಾಂತ್ವನ
Updated on

ಅಹ್ಮದಾಬಾದ್​: ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ನಲ್ಲಿ ಸೋತ ಭಾರತ ತಂಡದ ಪರವಾಗಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವಕಪ್ ಗೆಲ್ಲದಿದ್ದರೂ ಹೃದಯ ಗೆದ್ದಿದ್ದೀರಿ, ಯಾವಾಗಲೂ ನಿಮ್ಮೊಂದಿಗಿದ್ದೇವೆ ಎಂದು ಸಂತೈಸಿದ್ದಾರೆ.

ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್​ಗಳ ಸೋಲು ಕಂಡಿತು. ಆ ಮೂಲಕ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್​ ಫೈನಲ್ ನಲ್ಲಿ ಮತ್ತೆ ಭಾರತ ತಂಡ ಸೋತಿದೆ. ಈ ಸೋಲಿನ ಬೆನ್ನಲ್ಲೇ ತಂಡಕ್ಕೆ ಸಮಾಧಾನದ ಮಾತುಗಳನ್ನಾಡಿರುವ ಪ್ರಧಾನಿ ಮೋದಿ ಅವರು, ವಿಶ್ವಕಪ್ ಗೆಲ್ಲದಿದ್ದರೂ ಹೃದಯ ಗೆದ್ದಿದ್ದೀರಿ, ಯಾವಾಗಲೂ ನಿಮ್ಮೊಂದಿಗಿದ್ದೇವೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಆತ್ಮೀಯ ಟೀಮ್ ಇಂಡಿಯಾ, ವಿಶ್ವಕಪ್ ಮೂಲಕ ನಿಮ್ಮ ಪ್ರತಿಭೆ ಮತ್ತು ಸಂಕಲ್ಪ ದೇಶದ ಗಮನ ಸೆಳೆಯಿತು. ನೀವು ಉತ್ತಮ ಉತ್ಸಾಹದಿಂದ ಆಡಿದ್ದೀರಿ ಮತ್ತು ರಾಷ್ಟ್ರಕ್ಕೆ ಅಪಾರ ಹೆಮ್ಮೆ ತಂದಿದ್ದೀರಿ. ಕಪ್​ ಗೆಲ್ಲದಿದ್ದರೂ ನೀವು ಶತಕೋಟಿ ಭಾರತೀಯರ ಹೃದಯ ಗೆದ್ದಿದ್ದೀರಿ. ನಾವು ಎಂದೂ ನಿಮ್ಮೊಂದಿಗೆ ಇರುತ್ತೇವೆ” ಎಂದು ಮೋದಿ ಟ್ವೀಟ್​ ಮೂಲಕ ಸಂತೈಸಿದ್ದಾರೆ.

ಇದೇ ವೇಳೆ 6ನೇ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿದ್ದಾರೆ. ‘ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ಶ್ಲಾಘನೀಯ. ನಿಮ್ಮ ಈ ಪ್ರದರ್ಶನ ವಿಜಯೋತ್ಸವದಲ್ಲಿ ಕೊನೆಗೊಂಡಿತು. ಟ್ರಾವಿಸ್ ಹೆಡ್ ಅವರ ಇಂದಿನ ಗಮನಾರ್ಹ ಆಟಕ್ಕೆ ಅಭಿನಂದನೆಗಳು” ಎಂದು ಮೋದಿ ಶುಭ ಹಾರೈಸಿದರು.

ಪ್ರಧಾನಿ ಮೋದಿ ಕೂಡ ಈ ಈ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಇವರ ಜತೆ ಅಮೀತ್​ ಶಾ, ಆಸ್ಟ್ರೇಲಿಯಾದ ಉಪ ಪ್ರಧಾನಿ ರಿಚರ್ಡ್ ಮಾರ್ಲ್ಸ್(Richard Marles) ಕೂಡ ಉಪಸ್ಥಿತರಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com