ಗುಜರಾತ್ ಟೈಟಾನ್ಸ್ ಬಿಟ್ಟು ಮುಂಬೈ ಇಂಡಿಯನ್ಸ್ ಗೆ ಮರಳಿದ ಹಾರ್ದಿಕ್ ಪಾಂಡ್ಯ!

ಪ್ರಬಲ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ 2024ಕ್ಕೂ ಮೊದಲು ಮುಂಬೈ ಇಂಡಿಯನ್ಸ್ (MI) ಗೆ ಮರಳಿದ್ದಾರೆ. 
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ

ಪ್ರಬಲ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ 2024ಕ್ಕೂ ಮೊದಲು ಮುಂಬೈ ಇಂಡಿಯನ್ಸ್ (MI) ಗೆ ಮರಳಿದ್ದಾರೆ. 

72 ಗಂಟೆಗಳ ಹೈ ಡ್ರಾಮಾ ನಂತರ ಭಾನುವಾರ ಮುಂಬೈ ಸೇರಿದ್ದಾರೆ. ಇದು ಸಂಪೂರ್ಣ ನಗದು ವ್ಯವಹಾರವಾಗಿತ್ತು. ಹಾರ್ದಿಕ್ ಗುಜರಾತ್ ಟೈಟಾನ್ಸ್ (GT) ಜೊತೆ ಎರಡು ಋತುಗಳ ನಂತರ MI ಗೆ ಮರಳಿದ್ದಾರೆ. ಅವರು 2015 ರಲ್ಲಿ MI ಗಾಗಿ IPL ಗೆ ಪಾದಾರ್ಪಣೆ ಮಾಡಿದರು. ಅವರು ಐಪಿಎಲ್ 2022 ಹರಾಜಿನ ಮೊದಲು ಹೊಸ ಫ್ರಾಂಚೈಸಿ ಜಿಟಿಗೆ ಸೇರಿದ್ದರು. ಹಾರ್ದಿಕ್ ಅವರ ನಾಯಕತ್ವದಲ್ಲಿ, GT ತನ್ನ ಚೊಚ್ಚಲ ಋತುವಿನಲ್ಲಿ ಟ್ರೋಫಿಯನ್ನು ಗೆದ್ದು ಬೀಗಿತ್ತು. ನಂತರ IPL 2023 ರಲ್ಲಿ ರನ್ನರ್ ಅಪ್ ಆಗಿತ್ತು.

ಹಾರ್ದಿಕ್ ಸೋಮವಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಎಕ್ಸ್' ನಲ್ಲಿ ಭಾವನಾತ್ಮಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದು ಮುಂಬೈ ಅವರನ್ನು ಹರಾಜಿನಲ್ಲಿ ಖರೀದಿಸಿದ ದೃಶ್ಯಗಳನ್ನು ಸಹ ಒಳಗೊಂಡಿದೆ. 'ಇದು ಅನೇಕ ಉತ್ತಮ ನೆನಪುಗಳನ್ನು ಮರಳಿ ತಂದಿತು' ಎಂದು ಅವರು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ. ಮುಂಬೈ, ವಾಂಖೆಡೆ, ಪಲ್ಟಾನ್, ಹಿಂತಿರುಗಲು ಸಂತೋಷವಾಗಿದೆ.'' ಐಪಿಎಲ್ 2015ರ ಹರಾಜಿನಲ್ಲಿ ಹಾರ್ದಿಕ್ ಅವರನ್ನು MI ಕೇವಲ 10 ಲಕ್ಷಕ್ಕೆ ಖರೀದಿಸಿತ್ತು.

ಕಳೆದ ಹಲವು ದಿನಗಳಿಂದ ಹಾರ್ದಿಕ್ ಮುಂಬೈಗೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವುದು ಗಮನಾರ್ಹ. ಆದರೆ, ಭಾನುವಾರ ಸಂಜೆ 5 ಗಂಟೆಗೆ ಬೀಡ್ ವಿಂಡೋ ಮುಚ್ಚಿದಾಗಲೂ ಗುಜರಾತ್‌ನ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ಹಾರ್ದಿಕ್ ಹೆಸರೂ ಇತ್ತು. ಇದನ್ನು ನೋಡಿದ ಎಲ್ಲರಿಗೂ ಸಾಕಷ್ಟು ಆಶ್ಚರ್ಯವಾಯಿತು. ಆದರೆ ಔಪಚಾರಿಕ ದಾಖಲೆಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ನಂತರ ತಿಳಿದುಬಂದಿದೆ. ಇದರಿಂದಾಗಿ ಈ ಅಡಚಣೆ ಸಂಭವಿಸಿದೆ. ಹಾರ್ದಿಕ್ ಗಾಗಿ ಮುಂಬೈ ಕ್ಯಾಮರೂನ್ ಗ್ರೀನ್ ರನ್ನು ಬಲಿಕೊಟ್ಟಿದೆ. ಗ್ರೀನ್ ಅನ್ನು MI ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಖರೀದಿಸಿದೆ. ಕಳೆದ ಹರಾಜಿನಲ್ಲಿ ಮುಂಬೈ ಗ್ರೀನ್ ಅನ್ನು 17.5 ಕೋಟಿಗೆ ಖರೀದಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com