ಕೊಹ್ಲಿಯನ್ನು ಕೆಣಕ್ಕಿದ್ದ ನವೀನ್ ಉಲ್ ಹಕ್ ನನ್ನು ಬೆಂಬಿಡದೆ ಕಿಚಾಯಿಸುತ್ತಿರುವ ಅಭಿಮಾನಿಗಳು, ವಿಡಿಯೋ ವೈರಲ್!

ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ನಿನ್ನೆ ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದು ಬೀಗಿದೆ. 
ಅಭಿಮಾನಿಗಳಿಂದ ಕೊಹ್ಲಿ-ಕೊಹ್ಲಿ ಘೋಷಣೆ
ಅಭಿಮಾನಿಗಳಿಂದ ಕೊಹ್ಲಿ-ಕೊಹ್ಲಿ ಘೋಷಣೆ

ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ನಿನ್ನೆ ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದು ಬೀಗಿದೆ. 

ಧರ್ಮಶಾಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 6 ವಿಕೆಟ್‌ಗಳಿಂದ ಏಕಪಕ್ಷೀಯ ಜಯ ಸಾಧಿಸಿತು. ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳು ನಿಷ್ಪರಿಣಾಮಕಾರಿಯಾಗಿದ್ದರು. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ನಡುವೆ ಪಂದ್ಯ ನಡೆದರೂ ಭಾರತದ ದಿಗ್ಗಜ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹೆಸರಲ್ಲಿ ಜೋರು ಘೋಷಣೆಗಳು ಕೇಳಿಬಂದಿದ್ದವು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು ಕೊಹ್ಲಿ-ಕೊಹ್ಲಿ ಘೋಷಣೆಗೆ ಕಾರಣ ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್-ಉನ್-ಹಕ್.

ಐಪಿಎಲ್ 2023ರಲ್ಲಿ ಕೊಹ್ಲಿ ಮತ್ತು ನವೀನ್ ನಡುವೆ ವಿವಾದ ಶುರುವಾಗಿತ್ತು. ಪಂದ್ಯದ ವೇಳೆ ಆರಂಭವಾದ ವಿವಾದ ಪಂದ್ಯ ಮುಗಿಯುವವರೆಗೂ ಮುಂದುವರೆಯಿತು. ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ನವೀನ್ ಲಖನೌ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಭಾಗವಾಗಿದ್ದರು. ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಪಂದ್ಯದ ನಂತರ ಕೊಹ್ಲಿ ಅವರನ್ನು ಭೇಟಿಯಾದಾಗ ನವೀನ್ ಅವರ ಕೈ ಕುಲುಕಲಿಲ್ಲ. 

ಈ ಘಟನೆಯ ನಂತರ ಲಕ್ನೋ ಮತ್ತು ಮುಂಬೈ ನಡುವೆ ಐಪಿಎಲ್ ಎಲಿಮಿನೇಟರ್ ಪಂದ್ಯ ನಡೆದಾಗ ಕೊಹ್ಲಿ ಅಭಿಮಾನಿಗಳು ನವೀನ್ ಅವರನ್ನು ತೀವ್ರ ಚುಡಾಯಿಸಿದ್ದಾರೆ. ಅದೇ ಸಮಯದಲ್ಲಿ, ವಿಶ್ವಕಪ್‌ನಲ್ಲಿಯೂ ಕೊಹ್ಲಿ ಅಭಿಮಾನಿಗಳು ನವೀನ್ ಅವರನ್ನು ಬಿಡಲಿಲ್ಲ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಬಳಿ ಫೀಲ್ಡಿಂಗ್ ಮಾಡಲು ನವೀನ್ ಬಂದಾಗ, ಅಭಿಮಾನಿಗಳು ಕೊಹ್ಲಿ-ಕೊಹ್ಲಿ ಎಂದು ಘೋಷಣೆಗಳನ್ನು ಕೂಗುವ ಮೂಲಕ ಅವರನ್ನು ಕಿಚಾಯಿಸಿದರು.

ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದ ಬಾಂಗ್ಲಾದೇಶ ಅಫ್ಘಾನಿಸ್ತಾನವನ್ನು 37.2 ಓವರ್‌ಗಳಲ್ಲಿ 156 ರನ್‌ಗಳಿಗೆ ಆಲೌಟ್ ಮಾಡಿತ್ತು. ರಹಮಾನುಲ್ಲಾ ಗುರ್ಬಾಜ್ 47 ರನ್ ಗಳಿಸಿ ಇನ್ನಿಂಗ್ಸ್ ಆಡಿದರು. ಇದಕ್ಕುತ್ತರವಾಗಿ ಬಾಂಗ್ಲಾದೇಶ 34.4 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 158 ರನ್‌ ಗಳಿಸಿ ಸುಲಭವಾಗಿ ಗುರಿ ಮುಟ್ಟಿತು. ಬಾಂಗ್ಲಾದೇಶ ಪರ ಮೆಹದಿ ಹಸನ್ ಮಿರಾಜ್ (57) ಮತ್ತು ನಜ್ಮುಲ್ ಹಸನ್ ಶಾಂಟೊ (ಔಟಾಗದೆ 59) ಅರ್ಧಶತಕ ಗಳಿಸಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ 97 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡದ ಗೆಲುವಿಗೆ ಅಡಿಪಾಯ ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com