ಸ್ಪಿರಿಟ್ ಆಫ್ ಕ್ರಿಕೆಟ್: ಹಾರ್ದಿಕ್ ಶೂ ಲೇಸ್ ಕಟ್ಟಿದ ಪಾಕ್ ಕ್ರಿಕೆಟಿಗ ಶದಾಬ್ ಖಾನ್, ಮೆಚ್ಚುಗೆಯ ಮಹಾಪೂರ!

ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ಮಳೆಯಿಂದಾಗಿ ರದ್ದಾದರೂ, ಉಭಯ ತಂಡಗಳ ನಡುವಿನ ಪರಸ್ಪರ ಗೌರವ ಕ್ರಿಕೆಟ್ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 
ಹಾರ್ದಿಕ್ ಶೂ ಲೇಸ್ ಕಟ್ಟಿದ ಪಾಕ್ ಕ್ರಿಕೆಟಿಗ ಶದಾಬ್ ಖಾನ್
ಹಾರ್ದಿಕ್ ಶೂ ಲೇಸ್ ಕಟ್ಟಿದ ಪಾಕ್ ಕ್ರಿಕೆಟಿಗ ಶದಾಬ್ ಖಾನ್
Updated on

ಪಲ್ಲೆಕೆಲೆ: ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ಮಳೆಯಿಂದಾಗಿ ರದ್ದಾದರೂ, ಉಭಯ ತಂಡಗಳ ನಡುವಿನ ಪರಸ್ಪರ ಗೌರವ ಕ್ರಿಕೆಟ್ ಪ್ರಿಯರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. 

ಪಂದ್ಯದ ವೇಳೆ ಪಾಕ್ ಆಟಗಾರ ಶದಾಬ್ ಖಾನ್ ಅವರು ಟೀಂ ಇಂಡಿಯಾದ ಬ್ಯಾಟರ್ ಹಾರ್ದಿಕ್ ಪಾಂಡ್ಯ ಅವರ ಶೂ ಲೇಸ್ ಗಳನ್ನು ಕಟ್ಟುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸ್ಪೀರಿಟ್ ಆಫ್ ಕ್ರಿಕೆಟ್ ಗೆದ್ದಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಮಳೆಯಿಂದಾಗಿ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗಿದ್ದು, ಪಾಕಿಸ್ತಾನ ಮೂರು ಅಂಕ ಪಡೆದು ಸೂಪರ್ 4ರ ಹಂತ ಪ್ರವೇಶಿಸಿದೆ. ಮುಂದಿನ ಪಂದ್ಯದಲ್ಲಿ ಭಾರತ ನೇಪಾಳ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಸೂಪರ್ 4 ರ ಹಂತ ಪ್ರವೇಶಿಸಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com