WPL: ಆರ್ ಸಿಬಿ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್ ನೇಮಕ

ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್‌ಗೆ ಮುನ್ನ ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ಕಳಪೆ ಪ್ರದರ್ಶನ ನಂತರ  ಬೆನ್ ಸಾಯರ್ ಅವರನ್ನು ಬದಲಾಯಿಸಲಾಗಿದೆ ಎಂದು ವರದಿಯಾಗಿದೆ. 
ಆರ್ ಸಿಬಿ ತಂಡ ಸಾಂದರ್ಭಿಕ ಚಿತ್ರ
ಆರ್ ಸಿಬಿ ತಂಡ ಸಾಂದರ್ಭಿಕ ಚಿತ್ರ

ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್‌ನ ಎರಡನೇ ಸೀಸನ್‌ಗೆ ಮುನ್ನ ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಆರ್ ಸಿಬಿ ಕಳಪೆ ಪ್ರದರ್ಶನ ನಂತರ  ಬೆನ್ ಸಾಯರ್ ಅವರನ್ನು ಬದಲಾಯಿಸಲಾಗಿದೆ ಎಂದು ವರದಿಯಾಗಿದೆ. 

ಭಾರತದ ಸ್ಮೃತಿ ಮಂಧಾನ, ಆಸ್ಟ್ರೇಲಿಯಾದ ದಂತಕಥೆ ಎಲ್ಲಿಸ್ ಪೆರ್ರಿ, ನ್ಯೂಜಿಲೆಂಡ್‌ನ ಸೋಫಿ ಡಿವೈನ್ ಮತ್ತು ಇಂಗ್ಲೆಂಡ್‌ನ ಹೀದರ್ ನೈಟ್ ಅವರನ್ನು ಒಳಗೊಂಡ ಆರ್‌ಸಿಬಿ ಐದು ತಂಡಗಳ ಟೂರ್ನಿಯಲ್ಲಿ ನಿರಾಶಾದಾಯಕ ನಾಲ್ಕನೇ ಸ್ಥಾನ ಗಳಿಸಿತು. ಎಂಟು ಪಂದ್ಯಗಳಲ್ಲಿ ಆರ್‌ಸಿಬಿ ಕೇವಲ ಎರಡರಲ್ಲಿ ಗೆಲುವು ಸಾಧಿಸಿತ್ತು. 

43 ವರ್ಷದ ವಿಲಿಯಮ್ಸ್  ಮಹಿಳೆಯರ ಬಿಗ್ ಬ್ಯಾಷ್ ಲೀಗ್ ನಲ್ಲಿ  ಅಡಿಲೇಡ್ ಸ್ಟ್ರೈಕರ್ಸ್‌ನ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ತಂಡ 2022-23 ಋತುವಿನಲ್ಲಿ ಪ್ರಶಸ್ತಿ ಗೆಲುವಿನಲ್ಲಿ ಮಾರ್ಗದರ್ಶನ ನೀಡಿದ್ದರು.

ಈ ವರ್ಷದ ಡಬ್ಲ್ಯುಪಿಎಲ್‌ಗೆ ಮುಂಚಿತವಾಗಿ, ಆರ್ ಸಿಬಿ  3.4 ಕೋಟಿ ರೂ.ಗಳಿಗೆ ಮಂಧಾನ ಅವರನ್ನು ಖರೀದಿಸಿತ್ತು. ಆದರೆ, ಮಂಧಾನಎಂಟು ಇನ್ನಿಂಗ್ಸ್‌ಗಳಲ್ಲಿ ಕೇವಲ 149 ರನ್‌ ಮಾತ್ರ ಗಳಿಸಿದ್ದರು.  ಐಪಿಎಲ್ ಪ್ರಶಸ್ತಿಯನ್ನು ಇನ್ನೂ ಗೆಲ್ಲದಿರುವ ಆರ್ ಸಿಬಿಯ ಪುರುಷರ ತಂಡವು ಕಳೆದ ತಿಂಗಳು ಸಂಜಯ್ ಬಂಗಾರ್ ಬದಲಿಗೆ ಆಂಡಿ ಫ್ಲವರ್ ಅವರನ್ನು ಮುಖ್ಯ ತರಬೇತುದಾರರನ್ನಾಗಿ ನೇಮಿಸಿತು. ಮೈಕ್ ಹೆಸ್ಸನ್ ಸಹ ಫ್ರಾಂಚೈಸಿಯ ಕ್ರಿಕೆಟ್ ನಿರ್ದೇಶಕರ ಸ್ಥಾನವನ್ನು ತ್ಯಜಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com