ಐಪಿಎಲ್ 2023: ಬಡ ಕ್ರಿಕೆಟಿಗರಿಗಾಗಿ ಹಾಸ್ಟೆಲ್ ನಿರ್ಮಾಣಕ್ಕೆ ಕೆಕೆಆರ್ ಸ್ಟಾರ್ ಆಟಗಾರ ರಿಂಕು ಸಿಂಗ್ ಮುಂದು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಲವು ಮಧ್ಯಮ- ಬಡ ಕ್ರೀಡಾಪಟುಗಳನ್ನು ಖ್ಯಾತಿಯಲ್ಲಿ ಹಾಗೂ ಆರ್ಥಿಕ ವಿಷಯದಲ್ಲಿ ಶ್ರೀಮಂತಗೊಳಿಸಿರುವ ಅನೇಕ ಉದಾಹರಣೆಗಳಿವೆ. 
ಅಲಿಘರ್ ನಲ್ಲಿರುವ ಹಾಸ್ಟೆಲ್
ಅಲಿಘರ್ ನಲ್ಲಿರುವ ಹಾಸ್ಟೆಲ್
Updated on

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಲವು ಮಧ್ಯಮ- ಬಡ ಕ್ರೀಡಾಪಟುಗಳನ್ನು ಖ್ಯಾತಿಯಲ್ಲಿ ಹಾಗೂ ಆರ್ಥಿಕ ವಿಷಯದಲ್ಲಿ ಶ್ರೀಮಂತಗೊಳಿಸಿರುವ ಅನೇಕ ಉದಾಹರಣೆಗಳಿವೆ. 

ಐಪಿಎಲ್ ಮೂಲಕ ಗುರುತಿಸಿಕೊಂಡು ಭಾರತೀಯ ಕ್ರಿಕೆಟ್ ತಂಡವನ್ನೂ ಹಲವು ಕ್ರಿಕೆಟಿಗರು ಪ್ರವೇಶಿಸಿದ್ದಾರೆ. ಆದರೆ ಇಲ್ಲೊಬ್ಬ ಐಪಿಎಲ್ ತಾರೆ ತಾನಿನ್ನೂ ಭಾರತೀಯ ಕ್ರಿಕೆಟ್ ತಂಡ ಪ್ರವೇಶಿಸದೇ ಇದ್ದರೂ ಐಪಿಎಲ್ ನಿಂದ ತಾನು ಪಡೆದಿದ್ದನ್ನು ಸಮಾಜಕ್ಕೆ ವಾಪಸ್ ನೀಡಲು ಮುಂದಾಗಿದ್ದಾರೆ. ಆತ ಕೆಕೆಆರ್ ತಂಡದ ಆಟಗಾರ ರಿಂಕು ಸಿಂಗ್, 

ಎಲ್ ಪಿಜಿ ಸಿಲಿಂಡರ್ ಡೆಲಿವರಿ ನೀಡುವ ಖನ್ಚಂದ್ರ ಸಿಂಗ್ ಪುತ್ರನಾಗಿರುವ ರಿಂಕು ಸಿಂಗ್ ಗೆ ಸೋನು (ಆಟೋ ರಿಕ್ಷಾ ಚಾಲಕ) ಮುಕುಲ್ (ಕೋಚಿಂಗ್ ಕೇಂದ್ರದಲ್ಲಿ ಸ್ವಚ್ಛತಾ ಸಿಬ್ಬಂದಿ) ಎಂಬ ಇಬ್ಬರು ಸಹೋದರರಿದ್ದು, ಜೀವನ ನಡೆಸಲು ಕುಟುಂಬಕ್ಕೆ ಸಹಕಾರಿಯಾಗಿದ್ದರು. ಈ ರೀತಿಯ ಹಿನ್ನೆಲೆ ಹೊಂದಿರುವ ರಿಂಕು ಸಿಂಗ್ ಗೆ ಕ್ರಿಕೆಟಿಗನಾಗುವಾಗಿನ ಆರಂಭಿಕ ದಿನಗಳು ಸುಲಭದ್ದಾಗಿರಲಿಲ್ಲ. 

ಯುವ ಸಮುದಾಯಕ್ಕೆ ಕೊಡುಗೆ ನೀಡಬೇಕೆಂಬ ಹಂಬಲವಿರುವ ರಿಂಕು ಸಿಂಗ್,  ಯುವ ಕ್ರೀಡಾಪಟುಗಳಿಗೆ ಹಾಸ್ಟೆಲ್ ನಿರ್ಮಿಸುವ ಕನಸು ಹೊಂದಿದ್ದರು. ಈ ಕನಸು ಮುಂದಿನ ತಿಂಗಳು ಕೊನೆಗೂ ನನಸಾಗುತ್ತಿದೆ.

ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವುದಕ್ಕೆ ಸಾಕಷ್ಟು ಆರ್ಥಿಕ ಅನುಕೂಲತೆಗಳಿಲ್ಲದೇ ಪರದಾಡುತ್ತಿರುವ ಯುವ ಕ್ರೀಡಾಪಟುಗಳಿಗೆ ನೆರವಾಗುವ ನಿಟ್ಟಿನಲ್ಲಿ ರಿಂಕು ಸಿಂಗ್ ಈ ಹಾಸ್ಟೆಲ್ ನಿರ್ಮಿಸಿದ್ದಾರೆ ಎಂದು ಅಲೀಘರ್ ನಲ್ಲಿರುವ ರಿಂಕು ಅವರ ಬಾಲ್ಯ ತರಬೇತುದಾರರಾಗಿರುವ ಮಸೂದ್ ಜಫರ್ ಅಮಿನಿ ಹೇಳಿದ್ದಾರೆ.


2016 ರಲ್ಲಿ ಮೊದಲ ಬಾರಿಗೆ ರಣಜಿ ಪಂದ್ಯವನ್ನಾಡಿದ್ದ ರಿಂಕು ಅವರನ್ನು ಪಂಜಾಬ್ ತಂಡ ಖರೀದಿಸಿತ್ತು. 2018 ರಲ್ಲಿ ಕೋಲ್ಕತ್ತಾ ತಂಡ ಆತನನ್ನು 80 ಲಕ್ಷ ರೂಪಾಯಿಗಳಿಗೆ ಖರೀದಿಸಿತ್ತು. ರಿಂಕುಗೆ 12-13 ವರ್ಷವಿದ್ದಾಗ ಅಮಿನಿ ಆತನಿಗೆ ತರಬೇತಿ ನೀಡಲು ಆರಂಭಿಸಿದ್ದರು. 

15 ಎಕರೆ ಭೂಮಿಯಲ್ಲಿರುವ ಅಲೀಘರ್ ಕ್ರಿಕೆಟ್ ಶಾಲೆ ಹಾಗೂ ಅಕಾಡೆಮಿಯನ್ನು ತರಬೇತುದಾರರಾಗಿರುವ ಕೋಚ್ ಈಗ ಮುನ್ನಡೆಸುತ್ತಿದ್ದು ಈ ಪ್ರದೇಶದಲ್ಲಿ ರಿಂಕು ಸಿಂಗ್ ನಿರ್ಮಿಸಿರುವ ಹಾಸ್ಟೆಲ್ ನಿರ್ಮಾಣಗೊಂಡಿದೆ. ಈ ಹಾಸ್ಟೆಲ್ ನಲ್ಲಿ 14 ಕೊಠಡಿಗಳಿದ್ದು ಪ್ರತಿ ಕೊಠಡಿಯಲ್ಲಿ 4 ಮಂದಿ ತರಬೇತಿ ಪಡೆಯುವ ಕ್ರೀಡಾಪಟುಗಳಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಶೆಡ್, ಪೆವಿಲಿಯನ್ ನ್ನೂ ನಿರ್ಮಿಸಲಾಗುತ್ತಿದ್ದು, ಪ್ರತ್ಯೇಕ ಶೌಚಾಲಯಗಳನ್ನೂ ಹೊಂದಿದೆ. ತರಬೇತಿ ಪಡೆಯುವ ಕ್ರೀಡಾಪಟುಗಳಿಗಾಗಿ ಕ್ಯಾಂಟಿನ್ ವ್ಯವಸ್ಥೆ ಮಾಡಲಾಗಿದ್ದು, 50 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈ ಎಲ್ಲಾ ವ್ಯವಸ್ಥೆಗಳನ್ನೂ ರಿಂಕು ಮಾಡಿಸಿದ್ದಾರೆ ಎಂದು ಕೋಚ್ ಹೇಳಿದ್ದಾರೆ.

ಅಕಾಡೆಮಿಯು ಪ್ರಸ್ತುತ, ಹತ್ತಿರದ ನಗರಗಳಿಂದ ಬಂದಿರುವ ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುವ ಪ್ರಶಿಕ್ಷಣಾರ್ಥಿಗಳನ್ನು ಹೊಂದಿದೆ. ಬಹುತೇಕರು ಸಾಧಾರಣ ಹಿನ್ನೆಲೆಯಿಂದ ಬಂದವರಾಗಿರುವುದರಿಂದ ಕನಿಷ್ಠ ದರದಲ್ಲಿ ವಸತಿ ಸೌಲಭ್ಯ ಪಡೆಯಲು ಹಾಸ್ಟೆಲ್ ನೆರವಾಗಲಿದೆ. "ನಮ್ಮ ಸುಮಾರು ಹನ್ನೆರಡು ಮಂದಿ ಪ್ರಶಿಕ್ಷಣಾರ್ಥಿಗಳು ಹಾಸ್ಟೆಲ್‌ಗೆ ಆಗಮಿಸುತ್ತಾರೆ ಆಗುತ್ತಾರೆ. ಪ್ರಸ್ತುತ, ಅವರು ಹೆಚ್ಚಿನ ಬಾಡಿಗೆಯನ್ನು ಪಾವತಿಸುತ್ತಿದ್ದಾರೆ. ಆದರೆ ಇಲ್ಲಿ ಅವರು ಕನಿಷ್ಠ ವೆಚ್ಚದಲ್ಲಿ ಕೊಠಡಿಗಳು ಮತ್ತು ಆಹಾರವನ್ನು ಪಡೆಯಬಹುದು. ಜೊತೆಗೆ, ಅವರು ಪ್ರಯಾಣದಲ್ಲಿ ಸಮಯ ಮತ್ತು ಹಣವನ್ನು ವ್ಯರ್ಥ ಮಾಡಬೇಕಾಗಿಲ್ಲ." ಎಂದು ತರಬೇತುದಾರ ಹೇಳಿದ್ದಾರೆ.

ಸೌಲಭ್ಯದಲ್ಲಿ ಸಣ್ಣ ಜಿಮ್ನಾಷಿಯಂ ನ್ನು ಸಹ ಯೋಜಿಸಲಾಗಿದೆ. "ಸುಮಾರು 90 ಪ್ರತಿಶತದಷ್ಟು ಕೆಲಸ ಮುಗಿದಿದೆ. ಮುಂದಿನ ತಿಂಗಳೊಳಗೆ ಅದು ಸಿದ್ಧವಾಗಲಿದೆ. ರಿಂಕು ಅವರು ಐಪಿಎಲ್‌ನಿಂದ ಹಿಂತಿರುಗಿದ ನಂತರ ಅದನ್ನು ಉದ್ಘಾಟಿಸಲಿದ್ದಾರೆ. ಈ ಸೌಲಭ್ಯವು ಈ ಯುವಕರಿಗೆ ಜೀವನವನ್ನು ಸುಲಭಗೊಳಿಸುತ್ತದೆ" ಎಂದು ಕೋಚ್ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com