ಚಹಾದಲ್ಲೂ ಪಾನ್! ಮೈಸೂರಿನ ದಂಪತಿಗಳಿಂದ ಸಾವಯವ 'ವೀಳ್ಯದೆಲೆ ಚಹಾ' ಅಭಿವೃದ್ಧಿ!

ಚಹಾದಲ್ಲೂ ಪಾನ್! ಭಾರತೀಯರ ಅಚ್ಚುಮೆಚ್ಚು ಆದ ಇವೆರಡೂ 'ವೀಳ್ಯದೆಲೆ ಚಹಾ'ದ ರೂಪದಲ್ಲಿ ಒಟ್ಟಿಗೆ ಬಂದಿವೆ. ಮೈಸೂರು ಜಿಲ್ಲೆಯ ವಿಜಯನಗರದ ಸಂದೀಪ್ ಎಶಾನ್ಯಾ (30) ನಿಟ್ಟೆ ವಿಶ್ವವಿದ್ಯಾನಿಲಯದ ಡಿಎಸ್‌ಟಿ ತಂತ್ರಜ್ಞಾನ ಕೇಂದ್ರದ (TEC) ಮೂಲಕ  ವಿಶಿಷ್ಟ ಚಹಾವನ್ನು ಅಭಿವೃದ್ಧಿಪಡಿಸಿದ್ದಾರೆ. 
ಸಂದೀಪ್ ಹಾಗೂ ಅವರ ಪತ್ನಿಯ ಚಿತ್ರ
ಸಂದೀಪ್ ಹಾಗೂ ಅವರ ಪತ್ನಿಯ ಚಿತ್ರ

ಮಂಗಳೂರು: ಚಹಾದಲ್ಲೂ ಪಾನ್! ಭಾರತೀಯರಿಗೆ ಅಚ್ಚುಮೆಚ್ಚು ಆದ ಇವೆರಡೂ 'ವೀಳ್ಯದೆಲೆ ಚಹಾ'ದ ರೂಪದಲ್ಲಿ ಒಟ್ಟಿಗೆ ಬಂದಿವೆ. ಮೈಸೂರು ಜಿಲ್ಲೆಯ ವಿಜಯನಗರದ ಸಂದೀಪ್ ಎಶಾನ್ಯಾ (30) ನಿಟ್ಟೆ ವಿಶ್ವವಿದ್ಯಾನಿಲಯದ ಡಿಎಸ್‌ಟಿ ತಂತ್ರಜ್ಞಾನ ಕೇಂದ್ರದ (TEC) ಮೂಲಕ ವಿಶಿಷ್ಟ ಚಹಾವನ್ನು ಅಭಿವೃದ್ಧಿಪಡಿಸಿದ್ದಾರೆ. 

ವೀಳ್ಯದೆಲೆಯಲ್ಲಿ ಫೈಬಲ್, ವಿಟಮಿನ್ ಎ, ಬಿ, ಸಿ ಮತ್ತು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಪೊಟ್ಯಾಸಿಯಮ್‌ನಂತಹ ಖನಿಜಾಂಶ ಸಮೃದ್ಧವಾಗಿರುತ್ತದೆ. ಆದರೆ, ಇದನ್ನು ಆಹಾರ ಉತ್ಪನ್ನವಾಗಿ ಬಳಸದೆ ಅಗಿಯಲು ಉಪಯೋಗಿಸುವುದರಿಂದ ತನ್ನ ಪ್ರಾಮುಖ್ಯತೆ ಕಳೆದುಕೊಂಡಿದೆ. ವೀಳ್ಯದೆಲೆಯನ್ನು ಹೇಗೆ ನಿರ್ಲಕ್ಷಿಸಲಾಗಿದೆ ಎಂಬ ಲೇಖನವನ್ನು ಓದಿ, ಅದರೊಂದಿಗೆ ಏನಾದರೂ ಹೊಸ ಉತ್ಪನ್ನ ಅಭಿವೃದ್ಧಿಪಡಿಸಬೇಕು ಎಂದು ನಿರ್ಧರಿಸಿದೆ. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ, ವೀಳ್ಯದೆಲೆಗಳ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಏನಾನಾದರೂ ಮಾಡುತ್ತಿದ್ದೆ ಎಂದು ಸಂದೀಪ್ ತಿಳಿಸಿದರು. 

ಶುಕ್ರವಾರ ಮಂಗಳೂರಿನಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಸತೀಶ್ ಭಂಡಾರಿ ಅವರು ‘ಸಾವಯವ ವೀಳ್ಯದೆಲೆ ಚಹಾದ ಬ್ರ್ಯಾಂಡ್ ಅನ್ನು ಬಿಡುಗಡೆ ಮಾಡಿದರು. ಎಶಾನ್ಯಾ ಬೆವರೇಜಸ್ ಪ್ರೈ ಸ್ಟಾರ್ಟ್ ಅಪ್ ನಡೆಸುತ್ತಿರುವ ಉದ್ಯಮಿ ಸಂದೀಪ್, ನಿಟ್ಟೆ ವಿಶ್ವವಿದ್ಯಾಲಯದ ಡಿಎಸ್ ಟಿ ತಂತ್ರಜ್ಞಾನ ಕೇಂದ್ರವನ್ನು ಸಂಪರ್ಕಿಸಿ, ಅಧ್ಯಾಪಕರಾದ ಡಾ ಮಮತಾ ಬಿಎಸ್ ಅವರಿಂದ ಪೌಷ್ಠಿಕಾಂಶ ಹಾಳಾಗದಂತೆ ವೀಳ್ಯದೆಲೆ ಚಹಾ ತಯಾರಿಕೆ, ಪ್ರಾಯೋಗಿಕ ಪರೀಕ್ಷೆ, ಪೇಟೆಂಟ್ ಮತ್ತಿತರ ಎಲ್ಲಾ ಮಾಹಿತಿ ಪಡೆದಿದ್ದಾರೆ. ಒಪ್ಪಂದದ ಮೂಲಕ ತಂತ್ರಜ್ಞಾನವನ್ನು ಕಮರ್ಷಿಯಲ್ ಮಾಡಲು ನಿಟ್ಟೆ ವಿಶ್ವವಿದ್ಯಾಲಯ ಸಂದೀಪ್ ಅವರ ಸಂಸ್ಥೆಗೆ ಅಧಿಕಾರ ನೀಡಿದೆ. 

<strong>ವೀಳ್ಯದೆಲೆ ಚಹಾ ತಯಾರಿಕೆಯ ಚಿತ್ರ</strong>
ವೀಳ್ಯದೆಲೆ ಚಹಾ ತಯಾರಿಕೆಯ ಚಿತ್ರ

ಮೈಸೂರು ವೀಳ್ಯದೆಲೆ ಬಳಕೆ: ಮೈಸೂರಿನ ರೈತರಿಂದ ಜಿಐ ಟ್ಯಾಗ್ ಇರುವ ಮೈಸೂರು ವೀಳ್ಯದೆಲೆಯನ್ನು ಖರೀದಿಸಲಾಗುತ್ತದೆ. ಪ್ರಸ್ತುತ ಸುಮಾರು 15 ರೈತರು ವೀಳ್ಯದೆಲೆಯನ್ನು ಪೂರೈಸುತ್ತಿದ್ದಾರೆ. ನಾವು ಮೈಸೂರಿನಲ್ಲಿ ಲಭ್ಯವಿರುವ ಎರಡು ವಿಭಿನ್ನ ತಳಿಗಳನ್ನು ಬಳಸುತ್ತಿದ್ದೇವೆ. ಅದರ ಹೊರತಾಗಿ ಸ್ಥಳೀಯ ಮಹಿಳೆಯರು ಉತ್ಪನ್ನ ತಯಾರಿಕೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಸಂದೀಪ್ ತಿಳಿಸಿದರು.  ವಿಶಿಷ್ಟ ಚಹಾವನ್ನು ಒಂದು ತಿಂಗಳ ಹಿಂದೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಮೂಲ, ನಿಂಬೆ, ಗುಲಾಬಿ ಮತ್ತು ಕಿತ್ತಳೆ ನಾಲ್ಕು ವಿಭಿನ್ನ ರುಚಿಗಳೊಂದಿಗೆ ಸುಮಾರು 300 ಬಾಕ್ಸ್‌ಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ ಎಂದು ಅವರು ಹೇಳಿದರು.

15 ಪ್ಯಾಕೆಟ್ ಗಳ ಪ್ರತಿ ಬಾಕ್ಸ್‌ಗೆ ರೂ. 349 ಬೆಲೆಯಿದ್ದು, ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅಮೆಜಾನ್ ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಆನ್‌ಲೈನ್‌ನಲ್ಲಿ ಉತ್ಪನ್ನ ಲಭ್ಯವಿದೆ. ಇದರ ಮಾದರಿಗಳನ್ನು ಕನಿಷ್ಠ 10 ದೇಶಗಳಿಗೆ ಕಳುಹಿಸಿದ್ದೇವೆ, ಶೀಘ್ರದಲ್ಲೇ ಯುಎಸ್ ಮತ್ತು ಜಪಾನ್‌ಗೆ ರಫ್ತು ಮಾಡುತ್ತೇವೆ ಎಂದು ಅವರು ಹೇಳಿದರು.

ಹೆಚ್ಚಿನ ಉದ್ಯೋಗ ಸೃಷ್ಟಿಸುವ ಗುರಿ: ಪ್ರಸ್ತುತ ಸುಮಾರು 15 ರೈತರು ವೀಳ್ಯದೆಲೆ ಪೂರೈಸುತ್ತಿದ್ದು, ಇದರಿಂದ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಮೈಸೂರಿನಲ್ಲಿ ವ್ಯಾಪಕವಾಗಿ ವೀಳ್ಯದೆಲೆ ಬೆಳೆಯುವ ರೈತರಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com