• Tag results for ಮಂಗಳೂರು

ಮಂಗಳೂರು ವಿಮಾನ ನಿಲ್ದಾಣದಲ್ಲಿ 2.15 ಕೆಜಿ ಚಿನ್ನ ವಶ: ಇಬ್ಬರ ಬಂಧನ

ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎಂಐಎ ಕಸ್ಟಮ್ಸ್ ಅಧಿಕಾರಿಗಳು ಶುಕ್ರವಾರ ಇಬ್ಬರನ್ನು ಬಂಧಿಸಿ, ಅವರಿಂದ ಸುಮಾರು 1.09 ಕೋಟಿ ರೂ. ಮೌಲ್ಯದ 2.15 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.

published on : 15th January 2021

ಮಂಗಳೂರು-ಮಂತ್ರಾಲಯ ನಡುವೆ ನೂತನ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಪ್ರಾರಂಭ

 ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ನವರಿ 14 ರ ಗುರುವಾರ ಮಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುವ  ಕೆಎಸ್‌ಆರ್‌ಟಿಸಿ (ನಾನ್ ಎಸಿ ಸ್ಲೀಪರ್) ಬಸ್ ಸೇವೆಗೆ ಚಾಲನೆ ನೀಡಿದ್ದಾರೆ.

published on : 14th January 2021

ಮಂಗಳೂರು: ಮೀನುಗಾರಿಕಾ ದೋಣಿಯಲ್ಲಿ ಬೆಂಕಿ, ತಮಿಳುನಾಡು ಮೂಲದ 11 ಮೀನುಗಾರರ ರಕ್ಷಣೆ

ನ್ಯೂ ಮಂಗಳೂರು ಬಂದರಿನಿಂದ ಪಶ್ಚಿಮಕ್ಕೆ 140 ಮೈಲಿ ದೂರದಲ್ಲಿ ಮೀನುಗಾರಿಕಾ ದೋಣಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅದಲ್ಲಿದ್ದ ತಮಿಳುನಾಡು ಮೂಲದ ಹನ್ನೊಂದು ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ.

published on : 11th January 2021

ಮಂಗಳೂರು:ಎಚ್ಚರಿಕೆ ನಿರ್ಲಕ್ಷಿಸಿ ಬೀಚ್ ನಲ್ಲಿ ಆಡಲು ಹೋದ ಓರ್ವ ಮೃತ್ಯು, ಇನ್ನೊಬ್ಬ ನಾಪತ್ತೆ

ಬೀಚ್ ನಲ್ಲಿ ಆಟವಾಡುತ್ತಿದ್ದ ಎಂಟು ಮಂದಿಯ ಗುಂಪು ನೀರಲ್ಲಿ ಕೊಚ್ಚಿ ಹೋಗಿದ್ದ ಪರಿಣಾಮ ಒರ್‍ವ ಮೃತಪಟ್ಟು ಇನ್ನೋರ್ವ ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸಮೀಪದ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ನಡೆದಿದೆ.

published on : 10th January 2021

ಬೀಫ್ ಮಾರಾಟ ಅಂಗಡಿಗೆ ದುಷ್ಕರ್ಮಿಗಳಿಂದ ಬೆಂಕಿ

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದಲ್ಲಿ ಬೀಫ್ ಸ್ಟಾಲೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

published on : 9th January 2021

ಪಕ್ಷ ಸಂಘಟನೆಗೆ ಸಮಯ ಕೊಡಲಾಗದವರು ಬೇರೆಯವರಿಗೆ ಅವಕಾಶ ನೀಡಿ: ಸ್ಥಳೀಯ ನಾಯಕರಿಗೆ ಡಿಕೆಶಿ ಎಚ್ಚರಿಕೆ

ಪಕ್ಷ ಸಂಘಟನೆಗೆ ಸಮಯ ಮೀಸಲಿರಿಸಲು ಸಾಧ್ಯವಾಗದವರು ಬೇರೆಯವರಿಗೆ ಅವಕಾಶ ನೀಡಿ ಎಂದು ಸ್ಥಳೀಯ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಾರ್ನಿಂಗ್ ನೀಡಿದ್ದಾರೆ. 

published on : 7th January 2021

ಒಂದು ದೇಶ, ಒಂದು ಗ್ಯಾಸ್ ಗ್ರಿಡ್ ಸಾಕಾರಕ್ಕೆ ಬದ್ಧ: ಪ್ರಧಾನಿ ನರೇಂದ್ರ ಮೋದಿ

ಒಂದು ದೇಶ,ಒಂದು ಗ್ಯಾಸ್ ಗ್ರಿಡ್ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಮೂಲಕ ದೇಶದಲ್ಲಿ ನೈಸರ್ಗಿಕ ಅನಿಲದ ಬಳಕೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಭಾರತ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

published on : 6th January 2021

ಕೊಚ್ಚಿ- ಮಂಗಳೂರು ಅನಿಲ ಪೈಪ್ ಲೈನ್ ನಿಂದ ಕರ್ನಾಟಕ, ಕೇರಳದಲ್ಲಿ ಜನಜೀವನ ಸುಲಭ: ಪ್ರಧಾನಿ ಮೋದಿ

ಕೊಚ್ಚಿ- ಮಂಗಳೂರು ಅನಿಲ ಪೈಪ್ ಲೈನ್ ನಿಂದ ಉಭಯ ರಾಜ್ಯಗಳಲ್ಲಿ ಜೀವನ ಮತ್ತಷ್ಟು ಸುಲಭವಾಗಲಿದ್ದು, ಬಡ, ಮಧ್ಯಮ ಹಾಗೂ ಕೈಗಾರಿಕೋದ್ಯಮಿಗಳ ವೆಚ್ಚ ಕಡಿಮೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

published on : 5th January 2021

ಕೊಚ್ಚಿ- ಮಂಗಳೂರು ನೈಸರ್ಗಿಕ ಅನಿಲ ಪೈಪ್ ಲೈನ್ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್ ಲೋಕಾರ್ಪಣೆಗೊಳಿಸಿದ್ದಾರೆ. 

published on : 5th January 2021

ಕೊಚ್ಚಿ-ಮಂಗಳೂರು ಸಿಎನ್'ಜಿ ಸೇವೆಗೆ ಇಂದು ಪ್ರಧಾನಿ ಮೋದಿ ಚಾಲನೆ

ಕೊಚ್ಚಿ-ಮಂಗಳೂರು ನಡುವಿನ ಸಿಎನ್'ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಪೈಪ್ ಲೈನ್ ಯೋಜನಯನ್ನು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ. 

published on : 5th January 2021

ದಕ್ಷಿಣ ಕನ್ನಡ: ಎದೆ ನಡುಗಿಸುವ ದೃಶ್ಯ; ಮುಳುಗುತ್ತಿದ್ದ ಮಕ್ಕಳನ್ನು ಹಿಡಿದೆತ್ತಿ ತಾನು ಪ್ರಾಣಬಿಟ್ಟ ತಂದೆ, ವಿಡಿಯೋ ವೈರಲ್!

ಈಜುತ್ತಿದ್ದ ವೇಳೆ ನೀರು ಹೆಚ್ಚಾಗಿದ್ದರಿಂದ ಮುಳುಗುತ್ತಿದ್ದ ಮಕ್ಕಳನ್ನು ಹಿಡಿದೆತ್ತಿ ತಂದೆಯೋರ್ವ ಪ್ರಾಣ ಬಿಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

published on : 4th January 2021

ಜನವರಿ 5ಕ್ಕೆ ಪ್ರಧಾನಿ ಮೋದಿಯಿಂದ ಕೊಚ್ಚಿ-ಮಂಗಳೂರು ನೈರ್ಸಗಿಕ ಅನಿಲ ಪೈಪ್ ಲೈನ್ ಉದ್ಘಾಟನೆ

ಜನವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಕೊಚ್ಚಿ- ಮಂಗಳೂರು ನಡುವಣ ನೈಸರ್ಗಿಕ ಅನಿಲ ಪೈಪ್ ಲೈನ್ ನ್ನು ವರ್ಚುಯಲ್ ನಲ್ಲಿ ಉದ್ಘಾಟಿಸಲಿದ್ದಾರೆ ಎಂದು ಗೇಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಜೈನ್ ಶನಿವಾರ ತಿಳಿಸಿದ್ದಾರೆ.

published on : 2nd January 2021

ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬ್ರೇಕ್: ಸಂಜೆ 6 ಗಂಟೆಯಿಂದ ಮಂಗಳೂರಿನಲ್ಲಿ‌ ನಿಷೇಧಾಜ್ಞೆ ಜಾರಿ

ರೂಪಾಂತರಿ ಕೊರೋನಾ ಸೋಂಕು ಭೀತಿ ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿ ಮಂಗಳೂರಿನಲ್ಲಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ನಡೆಸುವುದನ್ನು ನಿಷೇಧಿಸಲಾಗಿದೆ.

published on : 31st December 2020

ಮಂಗಳೂರಿನಲ್ಲಿ ಗೋಡೆಬರಹದ ಮಾಸ್ಟರ್ ಮೈಂಡ್ ಅಬ್ದುಲ್ ಮಾಥೀನ್ ಅಹ್ಮದ್ ತಾಹಾ: ಪೊಲೀಸರು

ಮಂಗಳೂರಿನಲ್ಲಿ ಬರೆದಿದ್ದ ವಿವಾದಾತ್ಮಕ ಗೋಡೆ ಬರಹದ ಮಾಸ್ಟರ್ ಮೈಂಡ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಉಗ್ರ ಅಬ್ದುಲ್ ಮಾಥೀನ್ ಅಹ್ಮದ್ ತಾಹಾ ಕೈವಾಡವಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ

published on : 22nd December 2020

ಮಂಗಳೂರು: ಮಗನಿಂದ ಹಲ್ಲೆಗೊಳಗಾದ ವೃದ್ದ ಆಸ್ಪತ್ರೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

ವೃದ್ದನೊಬ್ಬ ಆಸ್ಪತ್ರೆಯ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಡೆದಿದೆ.

published on : 20th December 2020
1 2 3 4 5 6 >