ದೋಷಪೂರಿತ ಸರ್ಕಾರಿ ಪ್ರೆಗ್ನೆನ್ಸಿ ಕಿಟ್: ತಪ್ಪಾಗಿ 13 ವರ್ಷದ ಬಾಲಕಿ ಗರ್ಭಿಣಿ ಎಂದ ವೈದ್ಯರಿಗೆ ವಾರ್ನಿಂಗ್!

ಜುಲೈ 1, 2025 ರಂದು ಅಪ್ರಾಪ್ತ ಬಾಲಕಿ ಜ್ವರ ಮತ್ತು ತೀವ್ರವಾದ ವಾಂತಿಯೊಂದಿಗೆ PHC ಗೆ ಭೇಟಿ ನೀಡಿದ್ದಳು.
Casual Images
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ದಕ್ಷಿಣ ಕನ್ನಡದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ((PHC) ಸರ್ಕಾರದಿಂದ ಪೂರೈಕೆ ಮಾಡಲಾದ ದೋಷಪೂರಿತ ಗರ್ಭಧಾರಣೆ ಪರೀಕ್ಷೆ ಕೀಟ್ ಗಳಿಂದ 13 ವರ್ಷದ ಬಾಲಕಿಯೊಬ್ಬಳು ಗರ್ಭಿಣಿ ಎಂದು ತಪ್ಪಾಗಿ ಹೇಳಲಾಗಿದೆ. ಆಕೆಯ ಕುಟುಂಬದಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ, ವೈದ್ಯರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಜುಲೈ 1, 2025 ರಂದು ಅಪ್ರಾಪ್ತ ಬಾಲಕಿ ಜ್ವರ ಮತ್ತು ತೀವ್ರವಾದ ವಾಂತಿಯೊಂದಿಗೆ PHC ಗೆ ಭೇಟಿ ನೀಡಿದ್ದಳು. ಎರಡು ಬಾರಿ ನಡೆಸಿದ ಮೂತ್ರದ ಗರ್ಭಧಾರಣೆಯ ಪರೀಕ್ಷೆಯಲ್ಲಿ (UPT)'ಪಾಸಿಟಿವ್' ಎಂದು ವರದಿಯಾಗಿದೆ ಮತ್ತು ನಂತರ ಹೆಚ್ಚಿನ ಪರಿಶೀಲನೆಗಾಗಿ ಆಕೆಯನ್ನು ಸುಳ್ಯ ತಾಲೂಕು ಆಸ್ಪತ್ರೆಗೆ ಕಳುಹಿಸಲಾಗಿತ್ತು.

ತದನಂತರ ಖಾಸಗಿ ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಗಳು ಗರ್ಭಧಾರಣೆಯನ್ನು ದೃಢಪಡಿಸಲಿಲ್ಲ. ಬಳಿಕ ಬಾಲಕಿ ತಂದೆ ರಾಜ್ಯ ಮಾನವ ಹಕ್ಕುಗಳ ಆಯೋಗ (KSHRC)ದಲ್ಲಿ ನೀಡಿದ ದೂರಿನ ಮೇರೆಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಮೂತ್ರ ಪರೀಕ್ಷೆ ವೇಳೆಯಲ್ಲಿ ಎರಡು ಬಾರಿ ಪಾಸಿಟಿವ್ ಅಂತಾ ತೋರಿಸಿದರೆ ವೈದ್ಯರು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ಮಾಹಿತಿಯನ್ನು ಬಹಿರಂಗಪಡಿಸುವ ಮೊದಲು ದೃಢೀಕರಣ ಸ್ಕ್ಯಾನಿಂಗ್‌ಗಾಗಿ ಕಾಯಬೇಕು ಎಂಬುದನ್ನು ಕೆಎಸ್ ಹೆಚ್ ಆರ್ ಸಿಗೆ ಸಲ್ಲಿಸಲಾದ ತನಿಖಾ ವರದಿಯಲ್ಲಿ ಹೇಳಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ತಪ್ಪಾದ ಮಾಹಿತಿ ನೀಡುವ ಮೂಲಕ ತಮ್ಮ ಕುಟುಂಬಕ್ಕೆ ತೀವ್ರ ಮಾನಸಿಕ ಆಘಾತ ಉಂಟು ಮಾಡಿದೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

ಈ ಸಂಬಂಧ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿಗೆ ಎಚ್ಚರಿಕೆ ನೀಡಲಾಗಿದ್ದು, ಭವಿಷ್ಯದಲ್ಲಿ ಇಂತಹ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಒಂದು ನಿರ್ದಿಷ್ಟ ಬ್ಯಾಚ್ ನ ಪ್ರೆಗ್ನೆನ್ಸಿ ಕಿಟ್‌ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ತದನಂತರ ಗರ್ಭ ಧಾರಣೆ ಪರೀಕ್ಷೆ ನಡೆಸಲು ಸ್ಥಳೀಯವಾಗಿ ಹೆಚ್ಚುವರಿ ಕಿಟ್‌ಗಳನ್ನು ಖರೀದಿಸಿದ್ದೇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹೇಳಿದ್ದಾರೆ.

Casual Images
ಚಿಕ್ಕಬಳ್ಳಾಪುರ: 10ನೇ ತರಗತಿ ಬಾಲಕಿ ಗರ್ಭಿಣಿ, ಆರೋಪಿ ಬಂಧನ

ಆ ಪ್ರದೇಶದಲ್ಲಿ ಚಿಕ್ಕ ವಯಸ್ಸಿನಲ್ಲಿ ಗರ್ಭಧಾರಣೆಯ ಪ್ರಕರಣಗಳು ಹೆಚ್ಚಿರುವುದರಿಂದ ಪಿಎಚ್‌ಸಿ ವೈದ್ಯರು ಗರ್ಭಧಾರಣೆಯ ಪರೀಕ್ಷೆ ನಡೆಸಿದ್ದಾರೆ. ಆದರೆ, ವಿವೇಕಯುತವಾಗಿ ಕಾರ್ಯನಿರ್ವಹಿಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಅವರು ಒಪ್ಪಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com