• Tag results for mangaluru

ಮಂಗಳೂರು: ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ಮೂವರಲ್ಲಿ ಕೊರೋನಾ ಪಾಸಿಟಿವ್

ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ ಒಂದೇ ದಿನದಲ್ಲಿ ಸೋಂಕು ಪತ್ತೆಯಾಗಿದೆ.  ಕತಾರ್ ನಿಂದ ಬಂದಿದ್ದ ಇಬ್ಬರನ್ನು ಬೆಂಗಳೂರಿನಲ್ಲಿ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು,  ಮತ್ತೊಬ್ಬರು ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದರು.

published on : 1st June 2020

ಮಂಗಳೂರಲ್ಲಿ ಗ್ಯಾಂಗ್ ವಾರ್: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಬರ್ಬರ ಹತ್ಯೆ!

ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದ ಪರಿಣಾಮ ಒಬ್ಬ ವ್ಯಕ್ತಿಯ ಕೊಲೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ನಡೆದಿದೆ. 

published on : 1st June 2020

ಮಂಗಳೂರು: ಲಾರಿಗೆ ಕಾರು ಢಿಕ್ಕಿ, ಓರ್ವ ಸಾವು, ಐವರಿಗೆ ಗಾಯ

ಮೇ 31 ರ ಭಾನುವಾರ ನಸುಕಿನ ಜಾವ ಇಲ್ಲಿನ ಕಳ್ಳಪು ಸಮೀಪದ ಸೇತುವೆಯಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ ಐದು ಮಂದಿ ಗಾಯಗೊಂಡಿದ್ದಾರೆ.

published on : 31st May 2020

ಜೂನ್ 15ರವರೆಗೆ ಮೀನುಗಾರಿಕೆಗೆ ಕೇಂದ್ರ ಅನುಮತಿ: ಕೋಟ ಶ್ರೀನಿವಾಸ ಪೂಜಾರಿ

ವಿದ್ಯುತ್ ಗ್ರಾಹಕರಿಗೆ ಅಧಿಕ ಬಿಲ್ ಬಂದಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ಪಂದಿಸಲು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

published on : 30th May 2020

ಕೊರೋನಾ ಕ್ರೌರ್ಯ: ಗರ್ಭಿಣಿಗೆ ಚಿಕಿತ್ಸೆ ನೀಡದ ಆರೋಪ, ಹೊಟ್ಟೆಯಲ್ಲೇ ಮಗು ಸಾವು

ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲೇ ಮಗು ಮೃತಪಟ್ಟ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ.

published on : 29th May 2020

ಜೈ ಶ್ರೀರಾಮ್ ಹೇಳುವಂತೆ ಹಲ್ಲೆ: ಬಜರಂಗದಳದ ಮುಖಂಡ ಸೇರಿ ನಾಲ್ವರ ವಿರುದ್ಧ ಎಫ್ ಐಆರ್ 

ಬಾಲಕನೊಬ್ಬನಿಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳದ ಮುಖಂಡ ಸಹಿತ ನಾಲ್ವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

published on : 28th May 2020

2010 ಮಂಗಳೂರು ಏರ್ ಇಂಡಿಯಾ ಅಪಘಾತ: ಮೃತನ ಕುಟುಂಬಕ್ಕೆ 7.64 ಕೋಟಿ ರು. ಪರಿಹಾರ ನೀಡಿದ ಸುರ್ಪೀಂ ಕೋರ್ಟ್

 ಮೇ  22, 2010 ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ 812 ರ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರಿಗೆ ಸುಪ್ರೀಂ ಕೋರ್ಟ್ 7.64 ಕೋಟಿ ರೂ. ಪರಿಹಾರ ನೀಡಿದೆ. ಅಪಘಾತದಲ್ಲಿ ವಿಮಾನದಲ್ಲಿದ್ದ  166 ಪ್ರಯಾಣಿಕರಲ್ಲಿ 158 ಮಂದಿ ಸಾವಿಗೀಡಾಗಿದ್ದರು.

published on : 21st May 2020

ಮಂಗಳೂರು: ಕ್ವಾರಂಟೈನ್ ಗೆ ಹೆದರಿ ವ್ಯಕ್ತಿ ಆತ್ಮಹತ್ಯೆಗೆ ಶರಣು!

ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಕಡಂದಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರು ಗುರುವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

published on : 21st May 2020

ಮಂಗಳೂರಿಗೆ ಮಸ್ಕತ್ ನಿಂದ ಆಗಮಿಸಿದ ವಿಮಾನ: 178 ಪ್ರಯಾಣಿಕರು ತಾಯ್ನಾಡಿಗೆ 

ಕೊರೋನಾ ಸೋಂಕಿನಿಂದ ಹಲವು ದೇಶಗಳಲ್ಲಿ ಸಂಕಷ್ಟಕ್ಕೊಳಗಾಗಿರುವ ಅನಿವಾಸಿ ಭಾರತೀಯರನ್ನು ವಾಪಸ್ ಕರೆತರಲು ಕೇಂದ್ರ ಸರ್ಕಾರ ಆರಂಭಿಸಿರುವ ವಂದೇ ಭಾರತ ಅಭಿಯಾನದಡಿ ಮೂರನೇ ವಿಮಾನ ಮಸ್ಕತ್ ನಿಂದ ಆಗಮಿಸಿದೆ.  

published on : 20th May 2020

ರಾಜ್ಯಗಳನ್ನು, ಚೆಕ್ ಪಾಯಿಂಟ್ ಗಳನ್ನು ದಾಟಿ ಬಂದು ಮಂಗಳೂರು ಜಿಲ್ಲೆಗೆ ತಲೆನೋವು ತಂದ ಕೊರೋನಾ ಸೋಂಕಿತ!

ಕೊರೋನಾ ಸೋಂಕಿತರಲ್ಲಿ ಬಹುಪಾಲು ಮಂದಿ ಅಂತರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿರುವುದು ಆತಂಕದ ಸಂಗತಿ.ಇತ್ತೀಚೆಗೆ ದೆಹಲಿಯಿಂದ ಮಂಗಳೂರಿಗೆ ಬಂದ ವ್ಯಕ್ತಿ ಹಲವು ರಾಜ್ಯಗಳಲ್ಲಿ ಚೆಕ್ ಪಾಯಿಂಟ್ ಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿಕೊಂಡು ಕೊರೋನಾ ಸೋಂಕು ತಗಲಿಸಿಕೊಂಡು ಬಂದಿರುವುದು ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ.

published on : 19th May 2020

ದುಬೈನಿಂದ ಮಂಗಳೂರಿಗೆ ಎರಡನೇ ವಿಶೇಷ ವಿಮಾನ ಆಗಮನ, 178  ಮಂದಿ ತಾಯ್ನಾಡಿಗೆ

ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ದುಬೈನಿಂದ ಮಂಗಳೂರಿಗೆ ಎರಡನೇ ವಿಶೇಷ ವಿಮಾನ ಆಗಮನವಾಗಿದ್ದು ಮೇ 18 ರ ಸೋಮವಾರ ಸಂಜೆ 7.45 ಕ್ಕೆ 178 ಪ್ರಯಾಣಿಕರು ಮಂಗಳೂರಿಗೆ ಬಂದಿಳಿದಿದ್ದಾರೆ.   

published on : 18th May 2020

ದುಬೈಯಿಂದ ಮಂಗಳೂರಿಗೆ ವಿಮಾನದಲ್ಲಿ ಬಂದಿಳಿದವರಲ್ಲಿ 20 ಮಂದಿಗೆ ಕೊರೋನಾ ಸೋಂಕು!

ಎರಡು ದಿನಗಳ ಹಿಂದೆ ಮಂಗಳೂರಿಗೆ ದುಬೈಯಿಂದ ಬಂದಿಳಿದ 20 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇನ್ನೂ 9 ಮಂದಿಯ ಶಂಕೆಯಿದ್ದು ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

published on : 15th May 2020

ಮಂಗಳೂರು: ಲಾರಿಯಲ್ಲಿ ಊರಿಗೆ ಹೊರಟಿದ್ದ 120 ಕಾರ್ಮಿಕರು ಪೊಲೀಸ್ ವಶಕ್ಕೆ

ಮಂಗಳೂರಿನಿಂದ ಅಕ್ರಮವಾಗಿ ಉತ್ತರ ಭಾರತದ ಕಡೆಗೆ ಲಾರಿಯಲ್ಲಿ ಹೊರಟಿದ್ದ 120 ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದು ಹಾಸ್ಟೆಲ್ ಒಂದರಲ್ಲಿ ಇರಿಸಿದ್ದಾರೆ.

published on : 9th May 2020

ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ: ಡಿ.ವಿ. ಸದಾನಂದ ಗೌಡ

ದುಬೈನಿಂದ ಮಂಗಳೂರಿಗೆ ಮೇ 14ರ ಬದಲಿಗೆ 12ರಂದೇ ವಿಮಾನ ಬಿಡಲು ಏರ್ ಇಂಡಿಯಾ ಒಪ್ಪಿದ್ದು, ಕನ್ನಡಿಗರು 2 ದಿನ ಮುಂಚಿತವಾಗಿಯೇ ತಾಯ್ನಾಡಿಗೆ ಮರಳಲಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

published on : 9th May 2020

ಉಸಿರಾಡಲು ಸಾಧ್ಯವಾಗದೆ ನರಳುವ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಹೆಲ್ಮೆಟ್: ಇದು ಮಂಗಳೂರು ವೈದ್ಯರ ಸಾಧನೆ!

ಕೊರೋನಾ ಸೋಂಕಿಗೊಳಗಾಗಿ ಉಸಿರಾಡಲು ಸಾಧ್ಯವಾಗದೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ನೆರವಿಗೆ ಧಾವಿಸಿರುವ ಮಂಗಳೂರೂ ವೈದ್ಯರು, ಜೀವ ರಕ್ಷಕ ಸಾಧನ ಆಕ್ಸಿಜನ್ ಹೆಲ್ಮೆಟ್ ವೊಂದನ್ನು ಆವಿಷ್ಕರಿಸಿದ್ದಾರೆ. 

published on : 8th May 2020
1 2 3 4 5 6 >