ಆಸ್ಟ್ರೇಲಿಯಾದಲ್ಲಿ ತಮ್ಮ ಲಗೇಜ್ ಅನ್ನು ತಾವೇ ಟ್ರಕ್ ಗೆ ಲೋಡ್ ಮಾಡಿದ ಪಾಕಿಸ್ತಾನ ಕ್ರಿಕೆಟಿಗರು: ವಿಡಿಯೋ ವೈರಲ್

ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸಕ್ಕೆ ತೆರಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್ ಅನ್ನು ತಾವೇ ಟ್ರಕ್ ತುಂಬುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ಲಗೇಜ್ ಅನ್ನು ತಾವೇ ಟ್ರಕ್ ಗೆ ಲೋಡ್ ಮಾಡಿದ ಪಾಕಿಸ್ತಾನ ಕ್ರಿಕೆಟಿಗರು
ಲಗೇಜ್ ಅನ್ನು ತಾವೇ ಟ್ರಕ್ ಗೆ ಲೋಡ್ ಮಾಡಿದ ಪಾಕಿಸ್ತಾನ ಕ್ರಿಕೆಟಿಗರು

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ಪ್ರವಾಸಕ್ಕೆ ತೆರಳಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್ ಅನ್ನು ತಾವೇ ಟ್ರಕ್ ತುಂಬುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.

ಪಾಕಿಸ್ತಾನದಿಂದ ತಂದಿರುವ ತಮ್ಮ ಕಿಟ್ ಗಳು ಹಾಗೂ ಲಗೇಜ್ ಗಳನ್ನು ಟ್ರಕ್ ತುಂಬುತ್ತಿದ್ದು, ಈ ವೇಳೆ ಪಾಕಿಸ್ತಾನ ತಂಡದ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮಹಮದ್ ರಿಜ್ವಾನ್ ಸಹ ಆಟಗಾರರಿಗೆ ನೆರವು ನೀಡಿದ್ದು ಮಾತ್ರವಲ್ಲದೇ ಅಲ್ಲಿ ಆಟಗಾರರನ್ನು ನೋಡಲು ನೆರೆದಿದ್ದ ಅಭಿಮಾನಿಗಳಿಗೂ ಸೆಲ್ಫಿ ತೆಗೆದುಕೊಳ್ಳಲು ನೆರವು ನೀಡಿದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.

ಅಂದಹಾಗೆ ಪಾಕಿಸ್ತಾನ ತಂಡ ಆಸ್ಟ್ರೇಲಿಯಾದಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ. ವಿಶ್ವಕಪ್ ಸೋಲಿನ ಬಳಿಕ ತಂಡದ ನಾಯಕ ಸ್ಥಾನದಿಂದ ಬಾಬರ್ ಅಜಂ ಕೆಳಗಿಳಿದ ಬಳಿಕ ಆ ಸ್ಥಾನಕ್ಕೆ ಶಾನ್ ಮಸೂದ್ ರನ್ನು ನೇಮಕ ಮಾಡಲಾಗಿದೆ. ಹೊಸ ನಾಯಕನ ನೇತೃತ್ವದಲ್ಲಿ ಪಾಕಿಸ್ತಾನ ತಂಡಕ್ಕೆ ಇದು ಮೊದಲ ವಿದೇಶಿ ಸರಣಿಯಾಗಿದ್ದು, ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನ ಈ ವರೆಗೂ ಟೆಸ್ಟ್ ಸರಣಿ ಗೆದ್ದಿಲ್ಲ. ಹೀಗಾಗಿ ಈ ಹೀನಾಯ ದಾಖಲೆಯನ್ನು ಹೊಸ ನಾಯಕ ನೇತೃತ್ವದ ಪಾಕಿಸ್ತಾನ ತಂಡ ಮುರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com