ಭಾರತ ತಂಡದ ಮಾರಕ ಬೌಲಿಂಗ್
ಭಾರತ ತಂಡದ ಮಾರಕ ಬೌಲಿಂಗ್

ಮೊದಲ ಏಕದಿನ: ಅರ್ಶ್ ದೀಪ್ ಸಿಂಗ್, ಆವೇಶ್ ಖಾನ್ ಮಾರಕ ಬೌಲಿಂಗ್, ಅಲ್ಪ ಮೊತ್ತಕ್ಕೆ ದಕ್ಷಿಣ ಆಫ್ರಿಕಾ ಆಲೌಟ್

ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅರ್ಶ್ ದೀಪ್ ಸಿಂಗ್, ಆವೇಶ್ ಖಾನ್ ಮಾರಕ ಬೌಲಿಂಗ್ ಗೆ ತತ್ತರಿಸಿ ಕೇವಲ 116 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ.

ಜೋಹಾನ್ಸ್ ಬರ್ಗ್: ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅರ್ಶ್ ದೀಪ್ ಸಿಂಗ್, ಆವೇಶ್ ಖಾನ್ ಮಾರಕ ಬೌಲಿಂಗ್ ಗೆ ತತ್ತರಿಸಿ ಕೇವಲ 116 ರನ್ ಗಳ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾಗೆ ಅರ್ಶ್ ದೀಪ್ ಸಿಂಗ್ 2ನೇ ಓವರ್ ನಲ್ಲಿ ಡಬಲ್ ಆಘಾತ ನೀಡಿದರು. 2ನೇ ಓವರ್ ನಲ್ಲಿ ಅರ್ಶ್ ದೀಪ್ ಸಿಂಗ್ ದಕ್ಷಿಣ ಆಫ್ರಿಕಾದ ರೀಜಾ ಹೆಂಡ್ರಿಕ್ಸ್ (0) ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (0) ಔಟ್ ಮಾಡುವ ಮೂಲಕ ದಕ್ಷಿಣ ಆಫ್ರಿಕಾಗೆ ಮರ್ಮಾಘಾತ ನೀಡಿದರು. ಬಳಿಕ ದಕ್ಷಿಣ ಆಫ್ರಿಕಾ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. 

ಟೋನಿ ಡಿ ಜೋರ್ಜಿ 28 ರನ್ ಗಳಿಸಿ ಔಟಾದರೆ, ನಾಯಕ ಐಡೆನ್ ಮಾರ್ಕ್ರಾಮ್ ಕೇವಲ 12 ರನ್ ಗಳಿಗೆ ಔಟಾದರು. ಅಂತಿಮ ಹಂತದಲ್ಲಿ ಆಂಡಿಲ್ ಫೆಹ್ಲುಕ್ವಾಯೊ 33 ರನ್ ಗಳಿಸಿ ಏಕಾಂಗಿ ಹೋರಾಟ ಮಾಡಿದರಾದರೂ ಅವರಿಗೆ ಇತರೆ ಆಟಗಾರರಿಂದ ಸಾಥ್ ದೊರೆಯಲಿಲ್ಲ. 

ಅಂತಿಮವಾಗಿ ದಕ್ಷಿಣ ಆಫ್ರಿಕಾ 116 ರನ್ ಗಳಿಗೆ ಆಲೌಟ್ ಆಯಿತು. ಆಫ್ರಿಕಾದ 10 ಮಂದಿ ಬ್ಯಾಟರ್ ಗಳ ಪೈಕಿ 3 ಮಂದಿ ಡಕೌಟ್ ಆದರೆ, 4 ಮಂದಿ ಒಂದಂಕಿ ಮೊತ್ತ ಸುತ್ತಿರುವುದು ಭಾರತದ ಮಾರಕ ಬೌಲಿಂಗ್ ದಾಳಿಗೆ ಸಾಕ್ಷಿಯಾಗಿದೆ. 

ಭಾರತದ ಪರ ಅರ್ಶ್ ದೀಪ್ ಸಿಂಗ್ 5 ವಿಕೆಟ್ ಕಬಳಿಸಿದರೆ, ಆವೇಶ್ ಖಾನ್ 4 ಮತ್ತು ಕುಲದೀಪ್ ಯಾದವ್ 1 ವಿಕೆಟ್ ಪಡೆದರು.

Related Stories

No stories found.

Advertisement

X
Kannada Prabha
www.kannadaprabha.com