ಟಿ20 ಶತಕದ ಮೂಲಕ ಕೊಹ್ಲಿ ದಾಖಲೆ ಪುಡಿಗಟ್ಟಿದ ಶುಭ್ಮನ್ ಗಿಲ್
ನ್ಯೂಜಿಲ್ಯಾಂಡ್ ವಿರುದ್ಧದ 3 ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಶತಕ ದಾಖಲಿಸಿದ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ.
Published: 02nd February 2023 03:16 AM | Last Updated: 02nd February 2023 03:18 AM | A+A A-

ಶುಭ್ಮನ್ ಗಿಲ್
ಅಹ್ಮದಾಬಾದ್:ನ್ಯೂಜಿಲ್ಯಾಂಡ್ ವಿರುದ್ಧದ 3 ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಶತಕ ದಾಖಲಿಸಿದ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ.
63 ಎಸೆತಗಳಲ್ಲಿ 126 ರನ್ ಗಳಿಸಿದ ಶುಭ್ಮನ್ ಗಿಲ್, 200 ರ ಸ್ಟ್ರೈಕ್ ರೇಟ್ ನಲ್ಲಿ ಶತಕ ದಾಖಲಿಸಿದ್ದಾರೆ. ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಡೆದ ಏಷ್ಯಾ ಕಪ್ ಸರಣಿಯಲ್ಲಿ ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ 122 ರನ್ ಗಳಿಸಿದ್ದರು.
ಇದನ್ನೂ ಓದಿ: ICC T20 Ranking: ಅಗ್ರಸ್ಥಾನದಲ್ಲಿ ಸೂರ್ಯ ಕುಮಾರ್ ಯಾದವ್ ಮುಂದುವರಿಕೆ, ರೇಟಿಂಗ್ ಹೆಚ್ಚಿಸಿಕೊಂಡ ಗಿಲ್
23 ವರ್ಷದ ಗಿಲ್ ಕ್ರಿಕೆಟ್ ನ ಪ್ರತಿ ಫಾರ್ಮ್ಯಾಟ್ ನಲ್ಲೂ ಶತಕ ಹೊಂದಿರುವ ಅತ್ಯಂತ ಕಿರಿಯ ಬ್ಯಾಟ್ಸ್ ಮನ್ ಆಗಿದ್ದಾರೆ. ಎಲ್ಲಾ ಫಾರ್ಮಾಟ್ ಗಳಲ್ಲೂ ಶತಕ ದಾಖಲಿಸಿರುವ ಭಾರತದ 5 ನೇ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೂ ಶುಭ್ಮನ್ ಗಿಲ್ ಪಾತ್ರರಾಗಿದ್ದಾರೆ. ಸುರೇಶ್ ರೈನಾ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಎಲ್ಲಾ ಫಾರ್ಮಾಟ್ ಗಳಲ್ಲೂ ಶತಕ ದಾಖಲಿಸಿದ್ದಾರೆ.