ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಗೆಲ್ಲುವ ತಂಡದ ಬಗ್ಗೆ ಭವಿಷ್ಯ ನುಡಿದ ಜಯವರ್ಧನೆ

ಗುರುವಾರದಿಂದ ನಾಗ್ಪುರದಲ್ಲಿ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ನಡುವಣ ನಾಲ್ಕು ಟೆಸ್ಟ್ ಪಂದ್ಯಗಳ ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿ ಬಗ್ಗೆ ಬ್ಯಾಟಿಂಗ್ ದಂತಕಥೆ ಮಹೇಲಾ ಜಯವರ್ಧನೆ ಭವಿಷ್ಯ ನುಡಿದಿದ್ದಾರೆ.
ಮಹೇಲ ಜಯವರ್ಧನೆ
ಮಹೇಲ ಜಯವರ್ಧನೆ
Updated on

ಮುಂಬೈ: ಗುರುವಾರದಿಂದ ನಾಗ್ಪುರದಲ್ಲಿ ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ನಡುವಣ ನಾಲ್ಕು ಟೆಸ್ಟ್ ಪಂದ್ಯಗಳ ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿ ಬಗ್ಗೆ ಬ್ಯಾಟಿಂಗ್ ದಂತಕಥೆ ಮಹೇಲಾ ಜಯವರ್ಧನೆ ಭವಿಷ್ಯ ನುಡಿದಿದ್ದಾರೆ.

 ಈ ಸರಣಿಯಲ್ಲಿ  ಭಾರತವನ್ನು ತವರಿನಲ್ಲಿಯೇ  ಸೋಲಿಸುವ ಅವಕಾಶ ಆಸ್ಟ್ರೇಲಿಯಾಕ್ಕೆ ಇದೆ ಎಂದು ಅವರು ಹೇಳಿದ್ದಾರೆ. 2004 ರಿಂದ ಆಸ್ಟ್ರೇಲಿಯಾ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲವಾದರೂ, ಅತಿಥೇಯರು ಪ್ರಬಲ ಬೌಲಿಂಗ್ ದಾಳಿಯನ್ನು ಹೊಂದಿದ್ದಾರೆ, ಇದು ಭಾರತೀಯ ಬ್ಯಾಟರ್‌ಗಳಿಗೆ ಕಠಿಣ ಸವಾಲು ಆಗಲಿದೆ ಎಂದು ಎಂದು ಜಯವರ್ಧನ ಅಭಿಪ್ರಾಯಪಟ್ಟಿದ್ದಾರೆ.

''ಇದು ಉತ್ತಮ ಸರಣಿಯಾಗಲಿದೆ ಎಂದು ನಾನು ಭಾವಿಸುತ್ತೇನೆ. ಆಸೀಸ್ ನಿಜವಾಗಿಯೂ ಉತ್ತಮ ಬೌಲಿಂಗ್ ವಿಭಾಗ ಹೊಂದಿದ್ದು, ಭಾರತೀಯ ಬ್ಯಾಟ್ಸ್‌ಮನ್‌ಗಳು ಅದನ್ನು ಹೇಗೆ ಎದುರಿಸುತ್ತಾರೆ ಎಂಬುದು ಪರಸ್ಪರ ತಂಡದ ಮೇಲೆ ಅವಲಂಬಿತವಾಗಿರುತ್ತದೆ. ಆದರೆ, ಈ ಸರಣಿ ಆಕರ್ಷಕವಾಗಿರುತ್ತದೆ ಎಂದು ಮಹೇಲಾ ಜಯವರ್ಧನೆ ಐಸಿಸಿ ರಿವ್ಯೂನ ಇತ್ತೀಚಿನ ಆವೃತ್ತಿಯಲ್ಲಿ ಹೇಳಿದ್ದಾರೆ.

ಸರಣಿ ಯಾರು ಗೆಲ್ಲುಬಹುದು ಎಂಬುದನ್ನು ಊಹಿಸುವುದು ಕಷ್ಟ. ಆದರೆ ಶ್ರೀಲಂಕಾದವನಾಗಿ, ಆಸ್ಟ್ರೇಲಿಯಾ ಗೆಲ್ಲಬಹುದು ಎಂದು ಭಾವಿಸುತ್ತೇನೆ. ಆಸ್ಟ್ರೇಲಿಯಾಕ್ಕೆ 2-1 ಅಂತರದಲ್ಲಿ ಗೆಲ್ಲಬಹುದು ಆದರೆ ಇದು ಕಠಿಣವಾಗಿರುತ್ತದೆ ಎಂದು ಅವರು  ತಿಳಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com