ಕ್ರಿಕೆಟ್ ಆಟಗಾರರ ಮರ್ಯಾದೆ ಹರಾಜು: ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ
ನ್ಯೂಸ್ ಚಾನೆಲ್‌ನ ಕುಟುಕು ಕಾರ್ಯಾಚರಣೆಯ ನಂತರ ಭಾರತದ ವೇಗದ ಬೌಲರ್ ಚೇತನ್ ಶರ್ಮಾ ಅವರು ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Published: 17th February 2023 12:57 PM | Last Updated: 17th February 2023 03:46 PM | A+A A-

ಚೇತನ್ ಶರ್ಮಾ
ನವದೆಹಲಿ: ನ್ಯೂಸ್ ಚಾನೆಲ್‌ನ ಕುಟುಕು ಕಾರ್ಯಾಚರಣೆಯ ನಂತರ ಭಾರತದ ವೇಗದ ಬೌಲರ್ ಚೇತನ್ ಶರ್ಮಾ ಅವರು ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಅವರು ಸ್ಟಿಂಗ್ ಆಪರೇಷನ್ ನಲ್ಲಿ ನೀಡಿದ ಹೇಳಿಕೆಯಿಂದ ಉಂಟಾಗಿರುವ ವಿವಾದದ ನಡುವೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.
ಬಿಸಿಸಿಐ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಕಳುಹಿಸಿದ್ದಾರೆ, ಅವರು ಅದನ್ನು ಅಂಗೀಕರಿಸಿದ್ದಾರೆ. ಅವರಿಂದ ನಾವು ರಾಜಿನಾಮೆ ಕೇಳಿರಲಿಲ್ಲ, ಸ್ವತಃ ಅವರೇ ರಾಜಿನಾಮೆ ನೀಡಿದ್ದಾರ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ದಾದಾ ಗೆ ಪಾಠ ಕಲಿಸಲು ಬಯಸಿದ್ದ ಕೊಹ್ಲಿ!: ಸ್ಟಿಂಗ್ ಆಪರೇಶನ್ ನಲ್ಲಿ ಅಚ್ಚರಿಯ ಅಂಶಗಳು ಬಹಿರಂಗ!
ಬಂಗಾಳ ಮತ್ತು ಸೌರಾಷ್ಟ್ರ ನಡುವಿನ ರಣಜಿ ಟ್ರೋಫಿ ಫೈನಲ್‌ಗಾಗಿ ಚೇತನ್ ಶರ್ಮಾ ಇತರ ಆಯ್ಕೆ ಸಮಿತಿ ಸದಸ್ಯರೊಂದಿಗೆ ಕೋಲ್ಕತ್ತಾದಲ್ಲಿದ್ದರು. 2022ರ ಟಿ 20 ವಿಶ್ವಕಪ್‌ನಲ್ಲಿ ಭಾರತ ತಂಡದ ಕಳಪೆ ಪ್ರದರ್ಶನದ ನಂತರ, ಬಿಸಿಸಿಐ ಆಯ್ಕೆ ಸಮಿತಿಯನ್ನು ವಜಾಗೊಳಿಸಿತ್ತು. ಆಗಲೂ ಚೇತನ್ ಶರ್ಮಾ ಮುಖ್ಯ ಆಯ್ಕೆಗಾರರಾಗಿದ್ದರು. ಇದಾದ ಬಳಿಕ ಅವರಿಗೆ ಮತ್ತೆ ಈ ಜವಾಬ್ದಾರಿ ಸಿಕ್ಕಿತ್ತು. ಆದರೆ ಇದಾದ ಬಳಿಕ ವಿವಾದದಿಂದಾಗಿ ಕುರ್ಚಿ ಕಳೆದುಕೊಳ್ಳಬೇಕಾಯಿತು.
ಕುಟುಕು ಕಾರ್ಯಾಚರಣೆಯಲ್ಲಿ ಶರ್ಮಾ ಅವರು ವಿರಾಟ್ ಕೊಹ್ಲಿ, ಸೌರವ್ ಗಂಗುಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ತಂಡದ ಇತರ ಹಲವಾರು ಆಟಗಾರರ ಬಗ್ಗೆ ಕೆಲವು ವಿಚಿತ್ರವಾದ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.