ಪ್ರವೇಶ ಪಂದ್ಯದಲ್ಲಿ ದಾಖಲೆ ನಿರ್ಮಿಸಿದ ಭಾರತದ ಬೌಲರ್ ಶಿವಂ ಮಾವಿ 

ಭಾರತ-ಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ, ಭಾರತದ ಬೌಲಿಂಗ್ ಲೈನ್ ನಲ್ಲಿ ಮಹತ್ವದ ಪಾತ್ರ ವಹಿಸಿದ ಬೌಲರ್ ಶಿವಂ ಮಾವಿ, ಪ್ರವೇಶ ಪಂದ್ಯದಲ್ಲೇ ದಾಖಲೆಯನ್ನು ನಿರ್ಮಿಸಿದ್ದಾರೆ. 
ಶಿವಂ ಮಾವಿ (ಸಂಗ್ರಹ ಚಿತ್ರ)
ಶಿವಂ ಮಾವಿ (ಸಂಗ್ರಹ ಚಿತ್ರ)

ಮುಂಬೈ: ಭಾರತ-ಲಂಕಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ, ಭಾರತದ ಬೌಲಿಂಗ್ ಲೈನ್ ನಲ್ಲಿ ಮಹತ್ವದ ಪಾತ್ರ ವಹಿಸಿದ ಬೌಲರ್ ಶಿವಂ ಮಾವಿ, ಪ್ರವೇಶ ಪಂದ್ಯದಲ್ಲೇ ದಾಖಲೆಯನ್ನು ನಿರ್ಮಿಸಿದ್ದಾರೆ. 

ಅಂತಾರಾಷ್ಟ್ರೀಯ ಟಿ20 ಟೂರ್ನಿಯ ಪ್ರವೇಶ ಪಂದ್ಯದಲ್ಲೇ 4 ವಿಕೆಟ್ ಗಳಿಸಿದ ಭಾರತದ ಮೂರನೇ ಬೌಲರ್ ಎಂಬ ಹೆಗ್ಗಳಿಕೆ ಈಗ ಶಿವಂ ಮಾವಿ ಅವರದ್ದಾಗಿದೆ.

ಮುಂಬೈ ನ ವಾಂಖೆಡೆ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ  ಗೆಲುವಿನ ಹಾದಿಯಲ್ಲಿದ್ದ ಲಂಕಾ ಶಿವಂ ಮಾವಿ ಅವರ ಬೌಲಿಂಗ್ ನ ಪರಿಣಾಮವಾಗಿ ಕೊನೆಯ ಕ್ಷಣದಲ್ಲಿ ಭಾರತ ತಂಡದ ಎದುರು ಶರಣಾಯಿತು.

ಯುವ ವೇಗಿ ಪವರ್ ಪ್ಲೇ ನಲ್ಲಿ ಎರಡು ವಿಕೆಟ್ ಪಡೆದಿದ್ದು ಪಂದ್ಯದ ದಿಕ್ಕನ್ನು ಬದಲಿಸಿ ಲಂಕಾ ಮೊದಲ 6 ನಿರ್ಣಾಯಕ ಓವರ್ ಗಳಲ್ಲಿ ಕೇವಲ 35 ರನ್ ಗಳನ್ನಷ್ಟೇ ಪಡೆಯಲು ಸಾಧ್ಯವಾಯಿತು.15 ನೇ ಓವರ್ ನಲ್ಲಿ ಮತ್ತೆ ಲಂಕನ್ನರನ್ನು ಕಾಡಿದ ಬಲಗೈ ವೇಗಿ ಮಾವಿ, ವನಿಂದು ಹಸರಂಗ ವಿಕೆಟ್ ಕಬಳಿಸುವ ಮೂಲಕ 40 ರನ್ ಗಳ ಜೊತೆಯಾಟವನ್ನು ಮುರಿದರು.

ತಮ್ಮ ಅಂತಿಮ ಓವರ್ ನಲ್ಲಿ ಶಿವಂ ಮಾವಿ ಮಹೀಶ್ ತೀಕ್ಷಣ ಅವರ ವಿಕೆಟ್ ಗಳಿಸುವ ಮೂಲಕ ಟಿ20ಯ ಪ್ರವೇಶ ಪಂದ್ಯದಲ್ಲಿಯೇ 4 ವಿಕೆಟ್ ಗಳಿಸಿದ 3 ನೇ ಭಾರತೀಯ ಬೌಲರ್ ಎನಿಸಿದರು. ಬರಿಂದರ್ ಸ್ರಾನ್, ಪ್ರಗ್ಯಾನ್ ಓಜಾ, ಸಾಲಿಗೆ ಈಗ ಶಿವಂ ಮಾವಿ ಸೇರ್ಪಡೆಯಾಗಿದ್ದಾರೆ. ಮಹಿಳಾ ಕ್ರಿಕೆಟ್ ನಲ್ಲಿ ಸ್ರವಂತಿ ನಾಯ್ಡು ಸಹ ಈ ದಾಖಲೆ ನಿರ್ಮಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com