ಇಂತಹವನು ನಾಯಕನಾಗಬೇಕಾ? ಸಹ ಆಟಗಾರರನ್ನು ನಿಂದಿಸಿದ ಹಾರ್ದಿಕ್ ಪಾಂಡ್ಯ ವಿರುದ್ಧ ನೆಟ್ಟಿಗರು ಗರಂ, ವಿಡಿಯೋ!
ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಹ ಆಟಗಾರರಿಗೆ ಅಶ್ಲೀಲವಾಗಿ ಬೈದಿರುವುದು ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
Published: 13th January 2023 01:50 AM | Last Updated: 13th January 2023 01:50 AM | A+A A-

ಹಾರ್ದಿಕ್ ಪಾಂಡ್ಯ
ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಹ ಆಟಗಾರರಿಗೆ ಅಶ್ಲೀಲವಾಗಿ ಬೈದಿರುವುದು ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ 4 ವಿಕೆಟ್ ಗಳಿಂದ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ. ಏತನ್ಮಧ್ಯೆ ಟೀಂ ಇಂಡಿಯಾದ ಉಪನಾಯಕ ಹಾರ್ದಿಕ್ ಪಾಂಡ್ಯ ಅಶ್ಲೀಲವಾಗಿ ಬೈದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲದೇ ಹಾರ್ದಿಕ್ ಅವರ ಈ ಕೊಳಕು ಕೃತ್ಯವನ್ನು ಹಲವರು ಖಂಡಿಸುತ್ತಿದ್ದಾರೆ.
ಇದನ್ನೂ ಓದಿ: ಕೆಎಲ್ ರಾಹುಲ್ ತಾಳ್ಮೆಯ ಆಟ: ಲಂಕಾ ವಿರುದ್ಧ ಭಾರತಕ್ಕೆ 4 ವಿಕೆಟ್ ಗಳ ಜಯ, ಸರಣಿ ಕೈವಶ
ಪಂದ್ಯದ ಮಧ್ಯೆ ಅವರು ಬದಲಿ ಫೀಲ್ಡರ್‌ಗಳನ್ನು ನಿಂದಿಸಿದರು. ಕೊನೆಯ ಓವರ್‌ನಲ್ಲಿ ನೀರು ಕೊಡಿ ಎಂದು ಕೇಳಿದ್ದೆ ಆದರೆ ನೀವು ನೀರು ತರದೆ ಅಲ್ಲೇನು ..... ಹೊಡೆಯುತ್ತಿದ್ದೀರಾ ಎಂದು ಯುಜುವೇಂದ್ರ ಚಹಾಲ್ ಹಾಗೂ ಅರ್ಷದೀಪ್ ಗೆ ಬೈದಿದ್ದರು. ಇದು ಮೈದಾನದ ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದ್ದು ಹಾರ್ದಿಕ್ ಪಾಂಡ್ಯ ಅವರ ಈ ಕ್ರಮಕ್ಕೆ ಅಭಿಮಾನಿಗಳು ತುಂಬಾ ಆಕ್ರೋಶಗೊಂಡಿದ್ದಾರೆ.
Once a chhapri will always be a chhapri!! #HardikPandya pic.twitter.com/18z0iGidIV
— Amit. (@iOnlyAJ) January 12, 2023