ಆನ್ಲೈನ್ ವಂಚನೆ ಜಾಲಕ್ಕೆ ಐಸಿಸಿ ಬಲಿಪಶು; 2.5 ಮಿಲಿಯನ್ ಡಾಲರ್ ನಷ್ಟ!

ಅನ್ಲೈನ್ ವಂಚನೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಕೂಡ ಬಲಿಯಾಗಿದ್ದು, ಬರೊಬ್ಬರಿ 2.5 ಮಿಲಿಯನ್ ಡಾಲರ್ ಹಣ ನಷ್ಟ ಅನುಭವಿಸಿದೆ.
ಐಸಿಸಿ (ಸಂಗ್ರಹ ಚಿತ್ರ)
ಐಸಿಸಿ (ಸಂಗ್ರಹ ಚಿತ್ರ)

ನವದೆಹಲಿ: ಅನ್ಲೈನ್ ವಂಚನೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಕೂಡ ಬಲಿಯಾಗಿದ್ದು, ಬರೊಬ್ಬರಿ 2.5 ಮಿಲಿಯನ್ ಡಾಲರ್ ಹಣ ನಷ್ಟ ಅನುಭವಿಸಿದೆ.

ಈ ಬಗ್ಗೆ ESPNCricinfo ವರದಿ ಮಾಡಿದ್ದು, ಸೈಬರ್ ಅಪರಾಧಕ್ಕೆ ಬಲಿಯಾದ ನಂತರ  ಅಂತರ್ ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC ) ಸುಮಾರು 2.5 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟ ಅನುಭವಿಸಿದೆ ಎಂದು ಹೇಳಲಾಗಿದೆ.

ಈ ಕುರಿತು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ತನಿಖೆ ಆರಂಭಿಸಿದ್ದು, 'ಹಣಕಾಸಿನ ಹಗರಣವನ್ನು ಮಾಡಲು ವಂಚಕರು ಬಳಸಿದ ಮಾರ್ಗವೆಂದರೆ ಬಿಸಿನೆಸ್  ಇ-ಮೇಲ್ ಕಾಂಪ್ರಮೈಸ್ (BEC), ಇದನ್ನು ಇ-ಮೇಲ್ ಅಕೌಂಟ್ ಕಾಂಪ್ರಮೈಸ್  ಎಂದೂ ಕರೆಯುತ್ತಾರೆ,  ಇದು  'ಆರ್ಥಿಕವಾಗಿ ಅತ್ಯಂತ ಹಾನಿಕಾರಕ ಆನ್‌ಲೈನ್ ಅಪರಾಧಗಳಲ್ಲಿ ಒಂದಾಗಿದೆ  ಎಂದು ಹೇಳಿದೆ.

ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಐಸಿಸಿ, ಘಟನೆಯನ್ನು ಅಮೆರಿಕದ ಕಾನೂನು ಜಾರಿ ಸಂಸ್ಥೆಗೆ ವರದಿ ಮಾಡಿರುವುದರಿಂದ ತನಿಖೆ ನಡೆಯುತ್ತಿದೆ. ಹಗರಣ ಹೇಗೆ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದೆ.

ಐಸಿಸಿ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಲು ವಂಚಕರು ನಿಖರವಾಗಿ ಯಾವ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ. ಅವರು ನೇರವಾಗಿ ದುಬೈನ ಮುಖ್ಯ ಕಚೇರಿಯಲ್ಲಿ ಯಾರನ್ನಾದರೂ ಸಂಪರ್ಕಿಸಿದ್ದರೆ ಅಥವಾ ಐಸಿಸಿ ಸಲಹೆಗಾರರನ್ನು ಗುರಿಯಾಗಿಸಿಕೊಂಡಿದ್ದಾರೆಯೇ ಎನ್ನುವುದು ಗೊತ್ತಾಗಿಲ್ಲ. ಅಂತೆಯೇ ಒಂದೇ ಪಾವತಿಯಲ್ಲಿ ವಹಿವಾಟು ನಡೆದಿದೆಯೇ ಅಥವಾ ಬಹು ತಂತಿ ವರ್ಗಾವಣೆಗಳಿವೆಯೇ ಎಂಬುದು ದೃಢಪಟ್ಟಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಫಿಶಿಂಗ್ ಎನ್ನುವುದು ಉದ್ದೇಶಿತ ವ್ಯಕ್ತಿಗಳಿಂದ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಸಾಮಾನ್ಯವಾಗಿ ಇಮೇಲ್ ಮೂಲಕ ಕಾನೂನುಬದ್ಧ ಸಂಸ್ಥೆಗಳಂತೆ ತೋರುವ ಸೈಬರ್ ಅಪರಾಧಿಗಳು ಮಾಡುವ ಪ್ರಯತ್ನವಾಗಿದೆ. ಇದು ಪ್ರಪಂಚದಾದ್ಯಂತ ನಡೆಯುತ್ತಿರುವ ಸಾಮಾನ್ಯ ಹಗರಣಗಳಲ್ಲಿ ಒಂದಾಗಿದೆ.

ಬಿಇಸಿ ಹಗರಣವು ಫಿಶಿಂಗ್‌ನ ಒಂದು ರೂಪವಾಗಿದ್ದು, ಅಲ್ಲಿ ಕಂಪನಿಗಳು ಮತ್ತು ವ್ಯಕ್ತಿಗಳು ವಂಚನೆಗೊಳಗಾಗುತ್ತಾರೆ ಎಂದು ಎಫ್ ಬಿಐ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com