ಭಾರತದ ರೇಣುಕಾ ಸಿಂಗ್ ಗೆ 'ಐಸಿಸಿ ವರ್ಷದ ಉದಯೋನ್ಮುಖ ಆಟಗಾರ್ತಿ' ಪ್ರಶಸ್ತಿ

2022ರಲ್ಲಿ ಸ್ವಿಂಗ್ ಬೌಲಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಟೀಂ ಇಂಡಿಯಾ ಮಹಿಳಾ ತಂಡದ ವೇಗಿ ರೇಣುಕಾ ಸಿಂಗ್ ಐಸಿಸಿ ಉದಯೋನ್ಮುಖ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರೇಣುಕಾ ಸಿಂಗ್
ರೇಣುಕಾ ಸಿಂಗ್

ದುಬೈ: 2022ರಲ್ಲಿ ಸ್ವಿಂಗ್ ಬೌಲಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಟೀಂ ಇಂಡಿಯಾ ಮಹಿಳಾ ತಂಡದ ವೇಗಿ ರೇಣುಕಾ ಸಿಂಗ್ ಐಸಿಸಿ ಉದಯೋನ್ಮುಖ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ-ಐಸಿಸಿ ಬುಧವಾರ ಈ ಪ್ರಶಸ್ತಿಯನ್ನು ಘೋಷಿಸಿದೆ. ರೇಣುಕಾ ಸಿಂಗ್ ಏಕದಿನ ಪಂದ್ಯಗಳಲ್ಲಿ 18 ವಿಕೆಟ್ ಕಬಳಿಸಿದ್ದಾರೆ. ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ.

2022ನೇ ವರ್ಷದ ಉದಯೋನ್ಮುಖ ಆಟಗಾರ್ತಿ ಪಟ್ಟಿಯಲ್ಲಿದ್ದ ಆಸ್ಟ್ರೇಲಿಯಾದ ಡಾರ್ಸಿಯಾ ಬ್ರೌನ್ ಮತ್ತು ಇಂಗ್ಲೆಂಡ್ ನ ಆಲಿಸ್ ಕ್ಯಾಪ್ಸೆ ಮತ್ತು ಭಾರತದ ಯಾಸ್ತಿಕಾ ಭಾಟಿಯಾ ಅವರನ್ನು ಹಿಂದಿಕ್ಕಿ ರೇಣುಕಾ ಸಿಂಗ್ ಈ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com